ಬೆಂಗಳೂರು: ಭಾರತದಲ್ಲಿ ಅರ್ಥಶಾಸ್ತ್ರಕ್ಕೆ ವಿಶೇಷ ಸ್ಥಾನಮಾನ ವಿದ್ದು, ಪ್ರಸ್ತುತ ಭಾರತೀಯ ಆರ್ಥಿಕತೆ ಯಾವ ಮಟ್ಟದಲ್ಲಿದೆ, ಆಧುನಿಕ ತಂತ್ರಜ್ಞಾನದಲ್ಲಿ ಎಕನಾಮಿಸ್ಟ್ ಗಳ ಪಾತ್ರಗಳು ಏನು? ಎಂಬುದರ ಬಗ್ಗೆ ಚಿಂತನೆಗಳು ಮಾಡಬೇಕು ಜೊತೆಗೆ ಅರ್ಥಶಾಸ್ತ್ರ ಪ್ರತಿಯೊಬ್ಬರಿಗೂ ಬೇಕಾಗಿದೆ ಎಂದು ಆರ್ ಎಸ್ ಶುಕ್ಲಾ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರೂ, ಭಾರತೀಯ ಅರ್ಥಶಾಸ್ತ್ರ ಸಂಘದ ಸಾಮಾನ್ಯ ಕಾರ್ಯದರ್ಶಿಗಳಾದ ಡಾ. ರವೀಂದ್ರ ಬ್ರಹ್ಮೆ ತಿಳಿಸಿದರು.
ಬೆಂಗಳೂರಿನ ಕನಕಪುರ ರಸ್ತೆಯ ಇಂಡಸ್ ಬ್ಯುಸಿನೆಸ್ ಅಕಾಡೆಮಿಯಲ್ಲಿ ಹಮ್ಮಿಕೊಂಡಿದ್ದ ಅರ್ಥಶಾಸ್ತ್ರದ ಮುಖಾಮುಖಿ, ದೈನಂದಿನ ಜೀವನದಲ್ಲಿ ಅರ್ಥಶಾಸ್ತ್ರ ಎಂಬ ವಿಷಯದ ಬಗ್ಗೆ ಸಂವಾದ, ಇಕೋಫ್ಲುಯೆನ್ಸ- 23 ಅರ್ಥಶಾಸ್ತ್ರ ಸಂಶೋಧನಾ ಚಾಂಪಿಯನ್ ಶಿಪ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅರ್ಥಶಾಸ್ತ್ರ ಎಂಬುದು ಒಂದಲ್ಲ ಒಂದು ರೀತಿಯಲ್ಲಿ ಎಲ್ಲರಿಗೂ ಬೇಕಾಗಿದೆ, ವ್ಯವಹಾರ ಮಾಡಲು, ದೇಶದ ಆರ್ಥಿಕತೆ ಬೆಳವಣಿಗೆ,ಅಭಿವೃದ್ದಿ ಇವೆಲ್ಲವೂ ಸಹ ಆರ್ಥಿಕತೆಯ ಮೇಲೆ ನಿಂತಿವೆ. ಅರ್ಥಶಾಸ್ತ್ರದ ಬಗ್ಗೆ ಈಗಿನ ಯುವಪೀಳಿಗೆ ಕಲಿಯುವುದು ಬಹಳ ಅವಶ್ಯಕತೆ ಇದೆ, ಅರ್ಥಶಾಸ್ತ್ರ ಕಲಿಯುವುದು ಕಬ್ಬಿಣದ ಕಡಲೆ ಅಲ್ಲ, ಸುಲಭವಾಗಿ ಅರ್ಥೈಸಿಕೊಂಡು ಜನ ಸಾಮಾನ್ಯರಿಗೂ ಅರ್ಥವಾಗುವಂತೆ ತಿಳಿಸುವುದು ಮುಖ್ಯ ಎಂದರು.
ಒಂದು ದೇಶ ಆರ್ಥಿಕ ಅಭಿವೃದ್ದಿ, ಬೆಳವಣಿಗೆ, ಶಕ್ತಿಶಾಲಿಯಾಗಲು ಆಯಾ ದೇಶದ ಆದಾಯದ ಜೊತೆ ಆರ್ಥಿಕ ಸ್ಥಿತಿಗತಿಗಳು ಮುಖ್ಯವಾದ ಅಂಶವಾಗಿದೆ, ಅರ್ಥಶಾಸ್ತ್ರ ಕಲಿಕೆಗೆ ವಿದ್ಯಾರ್ಥಿಗಳು ಮುಂದೆ ಬರಬೇಕು ಎಂದರು, ಎಲ್ಲರ ಜೀವನದಲ್ಲಿ, ಎಲ್ಲರಿಗೂ ಅರ್ಥಶಾಸ್ತ್ರ ಬೇಕೆ ಬೇಕು ಎಂದು ಅರ್ಥ ಶಾಸ್ತ್ರದ ಮಹತ್ವ ಸಾರುವ ಮೂಲಕ ತಿಳಿಸಿದರು.
ಐಬಿಎಯ ಸಹಾಯಕ ಪ್ರಾಧ್ಯಾಪಕರು ಹಾಗೂ ಇಕೋಫ್ಲುಯೆನ್ಸದ ತಾಂತ್ರಿಕ ಅಧ್ಯಕ್ಷರಾದ ಪ್ರೊ. ಪ್ರಶಾಂತ್ ಕುಲಕರ್ಣಿ ಮಾತನಾಡಿ, ಬಹಳಷ್ಟು ಜನ ಅರ್ಥಶಾಸ್ತ್ರ ಕಠಿಣವಾದ ವಿಷಯ ಎಂದು ತಿಳಿಸಿದ್ದಾರೆ, ಅದು ತಪ್ಪು ಗ್ರಹಿಕೆ, ಯಾರು ಸಹ ಕಲಿಯಲು ಮುಂದೆ ಬರುತ್ತಿಲ್ಲ, ಆರ್ಥಿಕ ವಿಚಾರಗಳ ಬಗ್ಗೆ ದಿನ ನಿತ್ಯದಲ್ಲಿ ಎಲ್ಲರಿಗೂ ಬೇಕಾಗಿದೆ, ಇಕೋಫ್ಲುಯೆನ್ಸ- 23 ಅರ್ಥಶಾಸ್ತ್ರ ಸಂಶೋಧನಾ ಚಾಂಪಿಯನ್ ಶಿಪ್ ಕಾರ್ಯಕ್ರಮ ನಡೆಸುತ್ತಿರುವ ಉದ್ದೇಶವೂ ಇದೇ ಎಂದರು. ವಿದ್ಯಾರ್ಥಿಗಳು, ಅಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳ ವಿಚಾರಗಳನ್ನು ಸಂವಾದದಲ್ಲಿ ಮನದನೆ ಮಾಡುವ ಮೂಲಕ ಅಚ್ಚುಕಟ್ಟಾಗಿ ನಡೆಸಿಕೊಟ್ಟರು, ಕಾರ್ಯಕ್ರಮಕ್ಕೆ ಗೋವಾ, ಆಂಧ್ರದ ವೈಜಾಕ್, ಚೆನ್ನೈ, ತಮಿಳುನಾಡು ನಿಂದ ಪರಿಣತರು ಆಗಮಿಸಿದ್ದರು, ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದ ವಿಷಯಗಳನ್ನು ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ಸಂವಾದಲ್ಲಿ ತಿಳಿಸಿದರು ಎಂದರು.
ಬೆಳಿಗ್ಗೆಯಿಂದ ಸಂಜೆ ವರೆಗೆ ನಡೆದ ಸಂವಾದ ಸ್ಪರ್ಧೆಯಲ್ಲಿ ವಿಧ್ಯಾರ್ಥಿಗಳು, ಶಿಕ್ಷಕರು, ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿ ಅನೇಕ ವಿಚಾರಗಳನ್ನು ಮಂಡನೆ ಮಾಡಿದರು, ಅವರು ಯಾವ ರೀತಿ, ಹೇಗೆ, ವಿಷಯಗಳನ್ನು ಮಂಡಿಸಿದರು ಎಂದು ತಿಳಿಯಲು ತೀರ್ಪುಗಾರರಾಗಿ ಡಾ. ವಿಜಯಲಕ್ಷ್ಮಿ, ಡಿಎಸ್ ವೆಂಕಟೇಶ, ಪುಟ್ಟಸ್ವಾಮಿ, ಪದ್ಮನಿ ರಾವ್, ಆರ್ ಎಸ್ ದೇಶ್ ಪಾಂಡೆ ಸೇರಿದಂತೆ ಒಟ್ಟು 9 ಜನರು ತೀರ್ಪುಗಾರರಾಗಿ ಆಗಮಿಸಿ ವಿಚಾರಗಳನ್ನು ಅವಲೋಕಿಸಿ ಕೊನೆ ಸುತ್ತಿನಲ್ಲಿ ನಡೆದ ಸಂವಾದದಲ್ಲಿ 10 ಜನರಲ್ಲಿ 4 ಕಾಲೇಜಿನ ಸ್ಪರ್ಧಾಳುಗಳು ಆಯ್ಕೆ ಮಾಡಿದರು.
ಅದರಲ್ಲಿ ಮೊದಲನೇ ಬಹುಮಾನ 20 ಸಾವಿರವನ್ನು ಕ್ರಿಸ್ಟು ಜಯಂತಿ ಕಾಲೇಜಿನ ವಿದ್ಯಾರ್ಥಿಗಳು ಪಡೆದುಕೊಂಡರೆ, 2ನೇ ಬಹುಮಾನ 15 ಸಾವಿರವನ್ನು ವಿಲ್ಲಿಂಕರ್ ಶಾಲೆ ಮಕ್ಕಳು ಪಡೆದರು, ಇನ್ನೂ 3ನೇ ಬಹುಮಾನ 10 ಸಾವಿರ ರೂಪಾಯಿಗೆ ಡಾ. ಬಿ ಆರ್ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ ಕಾಲೇಜಿನ ಸ್ಪರ್ಧಾಳುಗಳು ತೃಪ್ತಿಯಾದರು, 4ನೇ ಬಹುಮಾನವಾದ 5 ಸಾವಿರಕ್ಕೆ ಗೋವಾ ಕ್ಯಾಂಪಸ್ ನ ಬಿಟ್ಸ್ ಪಿಲಾನಿ ಕಾಲೇಜಿನವರು ಪಡೆದುಕೊಂಡರು.
ಮುಂದಿನ ದಿನಗಳಲ್ಲಿ ಅರ್ಥಶಾಸ್ತ್ರದ ವಿಚಾರವಾಗಿ ಬೇರೆ ಬೇರೆ ಆಯಾಮಗಳಲ್ಲಿ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಮಾಡಲಾಗುತ್ತದೆ, ಜಾಗತಿಕ ಮಟ್ಟದಲ್ಲಿ ಕಾರ್ಯಕ್ರಮವನ್ನು ಮಾಡಲು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗುತ್ತದೆ ಎಂದರು.
ಸಂವಾದ ಕಾರ್ಯಕ್ರಮಕ್ಕೆ ವಿವಿಧ ರಾಜ್ಯಗಳಿಂದ ಆಗಮಿಸಿದ ವಿದ್ಯಾರ್ಥಿಗಳು, ಶಿಕ್ಷಕರು ಕೊನೆಯದಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿ ಚಾಂಪಿಯನ್ ಶಿಪ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಪನ್ನಗೊಳಿಸಿದರು.