ನವದೆಹಲಿ: ಸಂಸತ್ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಗುರುವಾರ ಸದನದ ಬಾವಿಗೆ ಇಳಿದು ಪ್ರತಿಭಟನೆಗಳನ್ನು ನಡೆಸಿದ್ದ ವಿಪಕ್ಷಗಳ 15 ಮಂದಿ ಸಂಸದರನ್ನು ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಅಮಾನತು ಮಾಡಲಾಗಿದೆ. ಲೋಕಸಭೆಯ ಐವರು ಕಾಂಗ್ರೆಸ್ ಸಂಸದರು ಮತ್ತು ರಾಜ್ಯಸಭೆಯ ಒಬ್ಬ ಟಿಎಂಸಿ ಸಂಸದ ಅಮಾನತಾಗಿದ್ದಾರೆ.
ಬುಧವಾರ ದಿಡೀರನೆ ಸಂಸತ್ ಕಲಾಪಕ್ಕೆ ನುಗ್ಗಿದ ಆಗಂತುಕರಿಂದ 2 ಗಂಟೆಗಳ ಕಾಲ ಅಧಿವೇಶನ ನಡೆಯಲಿಲ್ಲ, ಒಂದು ರೀತಿಯಲ್ಲಿ ಭಯದ ವಾತಾವರಣವಾಗಿ ಪರಿಣಮಿಸಿತು. 5 ಸುತ್ತಿನ ಕೋಟೆಯಂತಿದ್ದ ಹೊಸ ಸಂಸತ್ ಕಟ್ಟಡದ ಒಳಗೆ ಹೋಗಿದ್ದೆ ರೋಚಕ, ಸಂಸತ್ ಕಲಾಪಕ್ಕೆ ಅಡ್ಡಿಪಡಿಸಿ ಅಂಧಿಕೃತವಾಗಿ ಒಳಗಡೆ ಪ್ರವೇಶದ 4 ಜನ ಆರೋಪಿಗಳ ಪೈಕಿ ನೀಲಂ ಆಜಾದ್ಒಬ್ಬರು, ಅಮೋಲ್ ಶಿಂಧೆ,ಸಾಗರ್ ಶರ್ಮಾ ಹಾಗೂ ಮನೋರಂಜನ್ ಕೃತ್ ಎಸಗಿದ ಆರೋಪಿಗಳಾಗಿದ್ದಾರೆ.
ಕೃತ್ಯದ ಹಿಂದಿನ ಯೋಜನೆ ಬಿಚ್ಚಿಟ್ಟ ಆರೋಪಿಗಳು
ಕಳೆದ 2 ತಿಂಗಳ ಹಿಂದೆ ಮಣಿಪುರ, ಉತ್ತರಪ್ರದೇಶ, ರಾಜಸ್ತಾನದಲ್ಲಿ ನಡೆದ ಭಯೋತ್ಪಾದನೆ, ಹಿಂಸಾಚಾರ, ಗಲಭೆ, ಸಾವು ನೋವು, ಇವರನ್ನು ನಿದ್ದೆ ಗೆಡಿಸಿದೆ ಎಂದು ತಿಳಿದು ಬಂದಿದೆ. ಬಿಜೆಪಿ ಸರ್ಕಾರ ಯಾರಿಗೂ ಏನೂ ಮಾಡಿಲ್ಲ, ಯಾವುದೇ ಕ್ರಮ ಕೈಗೊಂಡಿಲ್ಲ, ಹೀಗಾಗಿ ಸಂಸತ್ ಓಳಗೆ ನುಗ್ಗಿ ಬಿಸಿ ಮುಟ್ಟಿಸಲು ಮುಂದಾಗಿದ್ದೇವೆ ಎಂದು ಮೂಲಗಳು ತಿಳಿಸಿವೆ. ಭಗತ್ ಸಿಂಗ್ ಫ್ಯಾನ್ಸ್ ಕ್ಲಬ್ ಮಾಡಿಕೊಂಡು ಫೇಸ್ ಬುಕ್ ನಲ್ಲಿ ಖಾತೆ ತೆರೆದು ಸಾಕಷ್ಟು ವಿಚಾರಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
4 ಜನ ಆರೋಪಿಗಳ ಬಂಧನ, 7 ದಿನ ನ್ಯಾಯಾಂಗಕ್ಕೆ ವಶ
ಅಕ್ರಮವಾಗಿ ಸಂಸತ್ ಒಳಗಡೆ ನುಗ್ಗಿ ಅವಂತರ ಮಾಡಿದ ಆರೋಪದ ಮೇಲೆ 4 ಜನ ಯುವ ಸಮೂಹವನ್ನು ಬಂಧಿಸಿ, 7 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ, ದೆಹಲಿಯ ಪಟಿಯಾಲಾ ಜೈಲಿಗೆ ಕಳುಹಿಸಿದ್ದಾರೆ. ಆರೋಪಿಗಳಿಗೆ ಖಾಕಿಯಿಂದ ತನಿಖೆ ನಡೆಯುತ್ತಿದೆ.
ಸಂಸತ್ ನ ಹೊರಗೂ ಒಳಗೂ ಹಳದಿ ಬಣ್ಣದ ಹೋಕುಳಿ
ಲೋಕಸಭಾ ಕಲಾಪ ನಡೆಯುತ್ತಿರುವಾಗಲೇ ಯುವಕನೊಬ್ಬ ನಡೆಯುತ್ತಿದ್ದ ಕಲಾಪಕ್ಕೆ ನುಗ್ಗಿ ಹಳದಿ ಬಣ್ಣದ ಗ್ಯಾಸ್ ಚೆಲ್ಲಿ ದೊಡ್ಡ ಅವಾಂತರ ಸೃಷ್ಟಿ ಮಾಡಿದ್ದ, ಬೆಂಚ್ ಗಳ ಮೇಲೆ ನಡೆದು, ಸದನದ ಬಾವಿಗೆ ಇಳಿಯಲು ಹಾಗೂ ಸಭಾಪತಿ ಗಳ ಕಡೆ ನುಗ್ಗಲು ಯತ್ನಿಸಿದಾಗ ಭದ್ರತಾ ಸಿಬ್ಬಂದಿ ಹಿಡಿದು ಬಂಧಿಸಿದರು. ಇನ್ನು ಇವರ ಗುಂಪಿನ ಓರ್ವ ಮಹಿಳೆ ಸಂಸತ್ ಹೊರಗೆ ಹಳದಿ, ಕೆಂಪು ಬಣ್ಣದ ಗ್ಯಾಸ್ ಚೆಲ್ಲಿ ರಾದಾದ್ದಂತ ಮಾಡಿದ್ದರು. ಇಡೀ ಕಲಾಪ ಹಳದಿ ಬಣ್ಣದ ಸ್ಮೋಕ್ ಹಾಗೆ ಕೊಠಡಿಯಲ್ಲಿ ತುಂಬಿತ್ತು.
ಸಂಸದರ ಪ್ರತಿಭಟನೆ, 16 ಎಂಪಿಗಳ ಅಮಾನತು
ಲೋಕಸಭೆಯಲ್ಲಿನ ಭದ್ರತಾ ಲೋಪ ಕಂಡಿಸಿ ಸಂಸತ್ ನ ಎರಡು ಸದನದಲ್ಲಿ ಪ್ರತಿಭಟಿಸುತ್ತಿದ್ದ ಒತ್ತಿ 16 ಜನ ಸಂಸತ್ ಸದಸ್ಯರನ್ನು ಕಲಾಪ ಮುಗಿಯುವವರೆಗೂ ಅಮಾನತ್ತಿನಲ್ಲಿ ಇಡಲಾಗಿದೆ. ಅದರಲ್ಲಿ ಡಿಎಂಕೆ ಸಂಸದೆ ಕನಿಮೊಳಿ, ಕಾಂಗ್ರೆಸ್ ಸಂಸದ ಮಣಿಕಮ್ ಟಾಗೋರ್, ಬೆನ್ನಿ ಬೆಹನಾನ್, ವಿಕೆ ಶ್ರೀಕಂಡನ್, ಮೊಹಮದ್ ಜಾವೇದ್, ಪಿಆರ್ ನಟರಾಜನ್, ಕೆ ಸುಬ್ರಮಣ್ಯಂ, ಎಸ್ಆರ್ ಪಾರ್ತಿಬನ್, ಎಸ್ ವೆಂಕಟೇಶನ್ ಅವರನ್ನು ಲೋಕಸಭೆಯಿಂದ ಅಮಾನತು ಮಾಡಲಾಗಿದೆ.ಕಾಂಗ್ರೆಸ್ ಸಂಸದರಾದ ಜ್ಯೋತಿಮಣಿ, ಹೈಬಿ ಇಡೆನ್, ಡೀನ್ ಕುರಿಯಾಕೋಸ್, ಪ್ರತಾಪನ್ ಮತ್ತು ರಮ್ಯಾ ಹರಿದಾಸ್ ರಾಜ್ಯಸಭೆ ಅಧ್ಯಕ್ಷರ ಜತೆ ತೀವ್ರ ವಾಕ್ಸಮರ ನಡೆಸಿದ ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಓಬ್ರಿಯನ್ ಅವರನ್ನು ‘ಅನುಚಿತ ವರ್ತನೆ’ ಕಾರಣದಿಂದ ಅಮಾನತು ಮಾಡಲಾಗಿದೆ.
ಲೋಕಸಭೆಯಲ್ಲಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಸಂಸದರಾದ ಜ್ಯೋತಿಮಣಿ, ಹೈಬಿ ಇಡೆನ್, ಡೀನ್ ಕುರಿಯಾಕೋಸ್, ಪ್ರತಾಪನ್ ಮತ್ತು ರಮ್ಯಾ ಹರಿದಾಸ್ ಅವರನ್ನು ಚಳಿಗಾಲದ ಅಧಿವೇಶನದ ಬಾಕಿ ದಿನಗಳ ಕಲಾಪಕ್ಕೆ ಹಾಜರಾಗದಂತೆ ಮೊದಲು ಅಮಾನತು ಮಾಡಲಾಗಿತ್ತು.
ಭದ್ರತಾ ಲೋಪ, 8 ಜನ ಪಾರ್ಲಿಮೆಂಟ್ ಸಿಬ್ಬಂದಿಗಳ ಅಮಾನತು
ಲೋಕಸಭೆಯಲ್ಲಿ ಕಲಾಪ ನಡೆಯುತ್ತಿದ್ದಾಗ ಯುವಕನೊಬ್ಬ ನುಗ್ಗಿ ಕೋಲಾಹಲ ಸೃಷ್ಟಿಗೆ ಸಂಬಂಧಿಸಿದಂತೆ ಯುವಕ ಸಂಸತ್ ಒಳಗೆ ನುಗ್ಗಲು ಹೇಗೆಲ್ಲ ಪ್ಲಾನ್ ಮಾಡಿದ್ದ, ಅದಕ್ಕೆ ಭದ್ರತಾ ಸಿಬ್ಬಂದಿ ಲೋಪ ದೋಶ ಎದ್ದು ಕಾಣುತ್ತಿತ್ತು. ಕೆಲ ಕಾಲ ಇಡೀ ಸದನ ಗದ್ದಲ ಕೋಲಾಹಲಕ್ಕೆ ಕಾರಣವಾಯಿತು.