ಬೆಂಗಳೂರು: ನಾನು 50 ವರ್ಷಗಳಲ್ಲಿ 5 ಸಿನೆಮಾಗಳನ್ನು ಟಿವಿ,ಮೊಬೈಲ್ ನಲ್ಲಿ ನೋಡಿದ್ದೆ, ಆದರೆ ಚಲನಚಿತ್ರ ಮಂದಿರಕ್ಕೆ ಹೋಗಿ ಪುನೀತ್ ರಾಜ್ ಕುಮಾರ್ ರವರ ಅಭಿನಯದ ಬೆಟ್ಟದ ಹೂವು ಚಿತ್ರ ನೋಡಿದ್ದೇನೆ ಎಂದು ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಅಭಿಪ್ರಾಯ ಪಟ್ಟರು.
ಬೆಂಗಳೂರಿನ ಗಾಂಧಿಭವನದಲ್ಲಿ ಕರ್ನಾಟಕ ರತ್ನ ಡಾ.ಪುನೀತ್ ರಾಜ್ (ಅಪ್ಪು)ಸೇವಾ ಸಮಿತಿ ವತಿಯಿಂದ 50ನೇ ವರ್ಷದ ಸಂಭ್ರಮಾಚರಣೆ ಮತ್ತು ಸಾಧಕ/ಸಾಧಕಿಯರಿಗೆ ಡಾ.ರಾಜ್ ಕುಮಾರ್ ರತ್ನ ಪ್ರಶಸ್ತಿ, ಡಾ.ಅಪ್ಪು ಸೇವಾ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವರನಟ ಡಾ.ರಾಜ್ ಕುಮಾರ್ ರವರ ಆದರ್ಶ ಗುಣಗಳನ್ನು ಬೆಳಸಿಕೊಂಡ ಪುತ್ರ ಪುನೀತ್ ರಾಜ್ ಕುಮಾರ್ ಅವರ ಚಲನಚಿತ್ರಗಳು ಸಮಾಜಮುಖಿ ಚಿತ್ರಗಳಾಗಿದ್ದವು.
ದಂತಚೋರ ವೀರಪ್ಪನ್ ನಾಡಿನ ಖ್ಯಾತ ವ್ಯಕ್ತಿಗಳನ್ನು ಕಿಡ್ನಾಪ್ ಮಾಡುವ ಸಂಚು ಮಾಡಿರುತ್ತಾನೆ ಎಂದು ಗುಪ್ತಚಾರ ವರದಿ ಬಂದಿತ್ತು. ಈ ವಿಚಾರವನ್ನು ಡಾ.ರಾಜ್ ಕುಮಾರ್ ಮತ್ತು ಪಾರ್ವತಮ್ಮ ರವರಿಗೆ ತಿಳಿಸಲಾಗಿತ್ತು, ಆದರೂ ಸಹಾ ಅಚಾತುರ್ಯಗಳಿಂದ ಅಪಹರಣವಾಯಿತು.
ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ರವರು ಕಿಡ್ನಾಪ್ ಆಗಿದ್ದ ರಾಜ್ ಕುಮಾರ್ ಅವರನ್ನು ಯಾವುದೇ ಅಪಾಯವಾಗುದಂತೆ ಬಿಡಿಸಿಕೊಂಡು ಬರುವಂತೆ ತಿಳಿಸಲಾಯಿತು. ಕೊನೆಗೂ ವೀರಪ್ಪನ್ ನಿಂದ ಡಾ.ರಾಜ್ ಕುಮಾರ್ ರವರನ್ನು ಬಿಡುಗಡೆ ಮಾಡಿದರು, ಈ ವೆಲ್ಲದರ ನಂತರ ರಾಜ್ ಕುಮಾರ್ ಅವರನ್ನು ಭೇಟಿ ಮಾಡಿದಾಗ ನಿಜವಾದ ಹಿರೋಗಳು ನೀವು ಎಂದು ರಾಜ್ ಕುಮಾರ್ ಪ್ರಶಂಸೆ ವ್ಯಕ್ತಪಡಿಸಿದರು, ಇದು ಭಾರತರತ್ನ ಪ್ರಶಸ್ತಿ ಲಭಿಸಿದಕ್ಕಿಂತ ಹೆಚ್ಚು ನನಗೆ ಸಂತೋಷವಾಯಿತು ಎಂದು ಖುಷಿಪಟ್ಟರು ಎಂದು ತಿಳಿಸಿದರು.
ಮಾನವೀಯ ಗುಣವುಳ್ಳ ಮಹಾನ್ ಚೇತನ ಡಾ.ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ನಾಡಿನ ಜನರ ಮನದಲ್ಲಿ ಶಾಶ್ವತವಾಗಿ ನೆಲಸಿದ್ದಾರೆ ಎಂದು ರಾಜ್ ಕುಟುಂಬದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಹೇಳಿದರು.
ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ ಮಾತನಾಡಿ, ಕನ್ನಡದ ಸೌರ್ವಭೌಮತೆ ಆಸ್ಮಿತೆಯನ್ನು ಉಳಿಸಿ ಬೆಳಸಲು ಪೊಲೀಸ್ ಇಲಾಖೆ ಬದ್ದವಾಗಿದೆ. ಒಂದು ವೇಳೆ ರಾಜ್ ಕುಮಾರ್ ಮತ್ತು ನರಸಿಂಹರಾಜುರವರು ಬೇರೆ ಭಾಷೆಯಲ್ಲಿ ನಟಿಸಿದ್ದರೆ ಆಸ್ಕರ್ ಪ್ರಶಸ್ತಿ ಸಿಗುತ್ತಿತು. ಕನ್ನಡ ಭಾಷೆಯಲ್ಲಿ ಬಿಟ್ಟು ಬೇರೆ ಭಾಷೆಯಲ್ಲಿ ನಟನೆ ಮಾಡಲಿಲ್ಲ, ಕೆಲವು ಆಫರ್ ಬಂದರು ಸಹಾ ಮನಸ್ಸು ಮಾಡಲಿಲ್ಲ, ಹೀಗಾಗಿ 1ಕ್ಕ ಕುವೆಂಪು ರವರ ಕಾವ್ಯ ಇತಿಹಾಸ ಪ್ರಸಿದ್ದವಾಗಿದೆ. ಕನ್ನಡ ಚಳುವಳಿಗಾರರನ್ನ ಹತ್ತಿರದಿಂದ ನಾನು ಬಲ್ಲೆ, ತನು,ಮನ,ಧನ ಕಳೆದುಕೊಂಡು ನಾಡಿಗಾಗಿ ಲಕ್ಷಾಂತರ ಜನರು ಶ್ರಮಿಸಿದ್ದಾರೆ ಎಂದು ಅಂದಿನ ಘಟನಾವಳಿಗಳನ್ನು ನೆನಪಿಸಿಕೊಂಡರು.
ಕಾಚಕರನಹಳ್ಳಿ ಸುತ್ತಮುತ್ತಲ ಪ್ರದೇಶದಲ್ಲಿ ಎಲ್ಲ ಭಾಷೆಗಳ ಬಾವುಟಗಳನ್ನು ಹಾರಿಸಿದ್ದರು, ಅದರೆ ಕನ್ನಡ ಬಾವುಟ ಹಾಕಲು ಹಲವಾರು ಅಡ್ಡಿ ಅತಂಕ ಎದುರಾಗಿದ್ದವು, ಒಂದು ವೇಳೆ ಆ ಸ್ಥಳದಲ್ಲಿ ಗಲಭೆ, ಗಲಾಟೆ ನಡೆದರೆ ನಿಮ್ಮನ್ನು ಅಮಾನತ್ತು ಮಾಡಲಾಗುತ್ತದೆ ಎಂದು ಮೇಲಾಧಿಕಾರಿಗಳು ಸೂಚನೆಯನ್ನು ನೀಡಿದ್ದರು, ನಾನು ಯಾವತ್ತೂ ಕನ್ನಡ ನಾಡು, ನುಡಿಗೆ ಧಕ್ಕೆ ಬರಬಾರದೆಂದು, ಕನ್ನಡ ಕನ್ನಡಕ್ಕಾಗಿ ನನ್ನ ಕೆಲಸ ಹೋದರು ಪರವಾಗಿಲ್ಲ ಎಂದು ಹೇಳಿದೆ ಎಂದರು. ಅದೆಲ್ಲದನ್ನು ಮೆಟ್ಟಿ ನಿಂತು ಕೊನೆಗೆ 80 ಅಡಿ ಉದ್ದದ ಧ್ವಜಸ್ಥಂಬ ನಿಲ್ಲಿಸಿ, ಕನ್ನಡ ಧ್ವಜದ ಕೀರ್ತಿ ಪತಾಕೆ ಹಾರಿಸಲಾಯಿತು.ಚಿಕ್ಕಪೇಟೆ, ಅಕ್ಕಿಪೇಟೆ, ಕಾಟನ್ ಪೇಟೆ. ಹೂವಿಗಡಿಗರಗಲ್ಲಿ,ಆನೆಪಾಳ್ಯ ಹಲವಾರು ಹಳೆಯ ಹೆಸರುಗಳನ್ನು ಉಳಿಸಿದವರು ಕನ್ನಡಪರ ಹೋರಾಟಗಾರರು. ಕನ್ನಡ ಉಳಿಸಿ,ಬೆಳಸಿ ಮತ್ತು ಕನ್ನಡ ಭಾಷೆ ಪ್ರತಿ ನಿತ್ಯ ಬಳಸಬೇಕು ಆಗ ಮಾತ್ರ ಕನ್ನಡ ಉಳಿಯುತ್ತದೆ ಎಂದು ಅಭಿಮತ ವ್ಯಕ್ತಪಡಿಸಿದರು.
ಬಿ.ಬಿ.ಅಶೋಕ್ ಕುಮಾರ್ ರವರು ಮಾತನಾಡಿ, ಡಾ.ರಾಜ್ ಕುಮಾರ್ ಹೃದಯ ಶ್ರೀಮಂತ ವ್ಯಕ್ತಿ .ಡಾ.ರಾಜ್ ಮೃತ್ತ ಪಟ್ಟದಿನ ನಾನು ಎ.ಸಿ.ಪಿ ಯಾಗಿ ಕಾರ್ಯನಿರ್ವಹಿಸಿದ್ದೆ, ಡಾ.ರಾಜ್ ರವರ ಪಾರ್ಥಿವ ಶರೀರ ಸಾಗಿಸುವ ಜವಾಬ್ದರಿ ಹೊಣೆ ಹೊರೆಸಲಾಗಿತ್ತು, ನನಗೆ, ಹಡ್ಸನ್ ಸರ್ಕಲ್ ಮತ್ತು ವಿಧಾನಸೌಧ ಮತ್ತು ಕಂಠೀರವ ಸ್ಪೂಡಿಯೊ ತಲುಪುವವರಗೆ ಅಭಿಮಾನಿಗಳನ್ನು ಸಮಾಧಾನ ಪಡಿಸುತ್ತ ಸಾಗಿದ್ದು ನನ್ನ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ಡಾ.ರಾಜ್ ಕುಮಾರ್ ರತ್ನ ಪ್ರಶಸ್ತಿ ಪಡೆದವರು
ನಿವೃತ್ತ ಪೊಲೀಸ್ ಅಧಿಕಾರಿಗಳಾದ ಬಿ.ಎ.ಭಾವ, ಬಿ.ಬಿ.ಅಶೋಕ್ ಕುಮಾರ್, ನವಯುಗ ಹೋಟೆಲ್ ಮಾಲೀಕರಾದ ಮೋಹನ್ ರಾವ್, ರಂಗಭೂಮಿ, ಚಲನಚಿತ್ರ ನಟಿ ಗಿರಿಜಾ ಲೋಕೇಶ್, ಶಬರಿಮಲೈ ಸೇವಾ ಸಮಿತಿ ಅಧ್ಯಕ್ಷರಾದ ಡಾ.ಎನ್.ಜಯರಾಮ್ .
ಡಾ.ಅಪ್ಪು ಸೇವಾ ಪುರಸ್ಕಾರ ಪ್ರಶಸ್ತಿ ಪಡೆದವರು
ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಎ.ಅಮೃತ್ ರಾಜ್ ಮತ್ತು ದಂಡು ಪ್ರದೇಶ ಕನ್ನಡ ಸಂಘಟನೆಗಳ ಒಕ್ಕೂಟ ಅಧ್ಯಕ್ಷರಾದ ಜಗ್ನನಾಥ್ ರೆಡ್ಡಿ, ಮುಖ್ಯಮಂತ್ರಿಗಳ ಸೇವಾ ಪದಕ ಪಡೆದ ಪೊಲೀಸ್ ಮಹದೇವಸ್ವಾಮಿ, ಭಾರತೀಯ ಸೇವಾ ಸಮಿತಿ ಅಧ್ಯಕ್ಷರಾದ ಎಂ.ರಾಮಚಂದ್ರ(ಹೂಡಿ ಚಿನ್ನಿ) ಹಾಗೂ ಕನ್ನಡ ಪರ ಹೋರಾಟಗಾರ ಬಸವರಾಜ್ ಪಡುಕೋಟೆ, ಡಾ.ರಾಜ್ ಕುಮಾರ್ ರವರ ಅಭಿಮಾನಿ ಎಸ್.ಎ.ಮಾರುತಿ, ಡಾ.ಅಪ್ಪು ವಿಶೇಷ ಬಾಲಪ್ರತಿಭೆ ಪುರಸ್ಕಾರ ಅಂಕಿತ ಜಯರಾಮ್ ಮತ್ತು ಜ್ಞಾನ ಗುರುರಾಜ್ ರವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಭಾರತೀಯ ಸೇವಾ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಡಾ.ರಾಮಚಂದ್ರ (ಹೂಡಿ) ಅವರು ಡಾ.ಅಪ್ಪು ಸೇವಾ ಪ್ರಶಸ್ತಿ ಪುರಸ್ಕಾರ ಪಡೆದು ಮಾತನಾಡಿ, ನಾಡು, ನುಡಿ, ಕನ್ನಡ ಭಾಷೆ ವಿಚಾರ ಬಂದಾಗ ನಾವೆಲ್ಲರೂ ಒಂದಾಗಬೇಕು, ಅವರವರ ರಾಜ್ಯದಲ್ಲಿ ಅವರ ಭಾಷೆ ಮುಖ್ಯವಾಗಿರುತ್ತದೆ, ದುರಾದೃಷ್ಟ ವಶಾತ್ ಕರ್ನಾಟಕದಲ್ಲಿ ಕನ್ನಡ ಉಳಿಸುವ ಪರಿಸ್ಥಿತಿ ಬಂದೊದಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಎಲ್ಲರೂ ಕನ್ನಡ ಮಾತನಾಡಿ, ಕನ್ನಡ ಉಳಿಸಿ, ಬೆಳೆಸಿ ಎಂದು ನಾಡಿನ ಜನತೆಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪೊಲೀಸ್ ಮಹಾ ನಿರ್ದೇಶಕರಾದ ಡಾ.ಶಂಕರ್ ಮಹದೇವ್ ಬಿದರಿ, ಚಲನಚಿತ್ರ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್, ನಿವೃತ್ತ ಪೊಲೀಸ್ ಅಧಿಕಾರಿಗಳಾದ ಬಿ.ಕೆ.ಶಿವರಾಂ, ಅಶೋಕ್ ಕುಮಾರ್, ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್, ಕನ್ನಡ ಪರ ಹೋರಾಟಗಾರ ಪಾಲನೇತ್ರ,ಅಧ್ಯಕ್ಷರಾದ ಗಣೇಶ್ ರಾವ್, ಕಾರ್ಯಾಧ್ಯಕ್ಷರಾದ ಜಾನ್ ಬ್ರಿಟೊ, ಎ.ಅಮೃತ್ ರಾಜ್, ಕನ್ನಡ ಕೃಷ್ಣ ಉಪಸ್ಥಿತರಿದ್ದರು.