ಬೆಂಗಳೂರು: ಸರ್ಕಾರ ಹಾಗೂ ಮೇಲ್ವರ್ಗದವರು ಯಾವುದೇ ಹಸ್ತಕ್ಷೇಪವಿಲ್ಲದೆ ಕಾಂತರಾಜು ವರದಿಯನ್ನು ಯತಾವತ್ತಾಗಿ ಜಾರಿಮಾಡಲು ಅನುವು ಮಾಡಿಕೊಡಬೇಕು ಎಂದು ಕರ್ನಾಟಕ ರಾಜ್ಯ ಮಡಿವಾಳರ ಸಂಘದ ರಾಜ್ಯಾಧ್ಯಕ್ಷ ಸಿ ನಂಜಪ್ಪ ಅವರು ಆಗ್ರಹಿಸಿದರು.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು ಹೆಚ್ ಕಾಂತರಾಜು ರವರ ನೇತೃತ್ವದಲ್ಲಿ 2019 ರಲ್ಲಿ ನಡೆದ ಸಮೀಕ್ಷೆಯ ವರದಿಯನ್ನು ಸ್ವೀಕರಿಸಿ ಅನುಷ್ಠಾನಗೊಳಿಸಲು ನಮ್ಮ ಸಮಾಜದ ವತಿಯಿಂದ ಹಲವಾರು ಬಾರಿ ಮನವಿಯನ್ನು ಸಲ್ಲಿಸಿದ್ದೇವೆ. ಆದರೂ ಸಹ ಸರ್ಕಾರವು ಇದುವರೆವಿಗೂ ಯಾವುದೇ ಕ್ರಮವನ್ನು ಕೈಗೊಂಡಿರುವುದಿಲ್ಲ. ಆಡಳಿತ ರೊಡ ಸರ್ಕಾರದವರು ಕಾಂತರಾಜು ವರದಿ ಜಾರಿ ಮಾಡಲು ಮೀನಾಮೇಷ ಎಣಿಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಕಾಂತರಾಜ್ ವರದಿಯು ಸಾಮಾಜಿಕ ಹಾಗೂ ಶೈಕ್ಷಣಿಕ ವರದಿಗೆ ಸಂಬಂಧಿಸಿದಂತೆ ಒಟ್ಟು 55 ಅಂಶಗಳ ಮಾಹಿತಿಯನ್ನು ಅಂದರೆ ಜಾತಿ ಗಣತಿಯ ಜೊತೆಗೆ ಶೈಕ್ಷಣಿಕ, ಔದ್ಯೋಗಿಕ, ಉದ್ಯೋಗ, ಕೌಟುಂಬಿಕ ಸ್ತಿರಾಸ್ತಿ, ಚರಾಸ್ತಿ, ಆದಾಯ ತೆರಿಗೆ ಪಾವತಿದಾರರೆ ಅಲ್ಲವೆ, ಅವರು ವಾಸ ಮಾಡುತ್ತಿರುವ ಮನೆ ಸ್ವಂತ ಅಥವಾ ಬಾಡಿಗೆ ಮನೆಯೇ, ಪಕ್ಕ ಮನೆಯೇ, ಅಥವಾ ಶೀಟ್ ಮನೆಯೇ, ಅವರ ವಿದ್ಯಾಭ್ಯಾಸದ ಮಟ್ಟ ಸೇರಿದಂತೆ ಇತರ ವಿಚಾರಗಳನ್ನು ಇಟ್ಟುಕೊಂಡು ವರದಿ ತಯಾರಿಸಲಾಗಿದೆ.
ಮುಂತಾದ ಹಲವಾರು ವಿಷಯಗಳನ್ನು ಮನೆ ಮನೆಗೂ ಹೊಗಿ ಮಾಹಿತಿ ಪಡೆಯಲೂ 1,33.410, ಸರ್ಕಾರಿ ಶಾಲಾ ಶಿಕ್ಷಕರು ಗಣತಿದಾರರನ್ನು, 22189 ವತಿಯಿಂದ ಸರ್ಕಾರಿ ಶಾಲಾ ಮುಖ್ಯೋಪಾಧ್ಯಯರು, ತರಬೇತುದಾರರು 7118 ಉಧ್ಯಯ ಮಾಹಿತಿಯನ್ನು ಪಡೆಯಲಾಗಿದೆ. ಇವರೆಲ್ಲರೂ ಸರ್ಕಾರಿ ಶಾಲೆಗಳ ಸಿಬ್ಬಂದಿ. ಇದರಲ್ಲಿ ಡಿ.ಸಿ. ತಹಶಿಲ್ದಾರ್ ಹಾಗೂ ಇತರೆ ಸಿಬ್ಬಂದಿಗಳು ಸಹ ಇದರಲ್ಲಿ ಕಾರ್ಯನಿರ್ವಹಿಸಿರುತ್ತಾರೆ ಎಂದು ತಿಳಿಸಿದರು.
ಈ ಸಮೀಕ್ಷೆಯ ಕೆಲಸಕ್ಕೆ ಒಟ್ಟು 158 ಕೋಟಿ ವೆಚ್ಚ ಮಾಡಲಾಗಿದೆ. ಈ ಸಮೀಕ್ಷೆಯನ್ನು ಇಂಡಿಯನ್ ಇನ್ಸೂಟ್ಯೂಟ್ ಆಫ್ ಮ್ಯಾನೆಜಿಮೆಂಟ್ ಪರಿಶೀಲಿಸಿ ಈ ಎಲ್ಲಾ ಅಂಶಗಳನ್ನು ಬಳಕೆ ಮಾಡಲು ಬಹಳ ವೈಜ್ಞಾನಿಕವಾಗಿದೆ ಎಂದು ಧೃಡೀಕರಿಸಿದೆ. ಇದಲ್ಲದೆ ಆಯೋಗವು ಸೆಕೆಂಡರಿ ಮೂಲದಿಂದ ಸರ್ಕಾರದ ಎಲ್ಲಾ ಇಲಾಖೆಗಳಿಂದ ಮಾಹಿತಿ ಪಡೆದು ಯಾವ ಯಾವ ಜಾತಿಯಲ್ಲಿ ಎಷ್ಟು ಜನ ನೌಕರರು ಇದ್ದಾರೆ ಎಂಬ ಮಾಹಿತಿಯನ್ನು ಪಡೆದು ವೈಜ್ಞಾನಿಕವಾಗಿ ಈ ವರದಿಯನ್ನು ತಯಾರಿಸಿರುವುದಾಗಿ ತಿಳಿದುಬಂದಿದೆ.
ಮೇಲ್ಬುರ್ಗದವರು ಅಂದರೆ ಲಿಂಗಾಯಿತರೂ ಹಾಗೂ ಬ್ರಾಹ್ಮಣರು ಕಾಂತರಾಜ್ ವರದಿಯು ಅವೈಜ್ಞಾನಿಕವಾಗಿದೆ ಎಂದು ತಪ್ಪು ತಪ್ಪು ಕಲ್ಪನೆಯನ್ನು ಬಿಂಬಿಸುತ್ತಿದ್ದಾರೆ, ಈ ಮೂಲಕ ಸರ್ಕಾರಕ್ಕೆ ಮನವರಿಕೆ ಮಾಡಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದರು. ಇದೊಂದು ಜಾತಿಗಣತಿಯಲ್ಲ ಬದಲಾಗಿ ಹಿಂದುಳಿದ ವರ್ಗಗಳ/ಸಮುದಾಯಗಳ ಸ್ಥಾನಮಾನವನ್ನು ತಿಳಿದುಕೊಳ್ಳಲು ಈ ವರದಿಯನ್ನು ಯತಾವತ್ತಾಗಿ ಜಾರಿ ಮಾಡಬೇಕೆಂದು ಕೇಳಿಕೊಂಡರು.
ಕಾಂತರಾಜು ವರದಿಯನ್ನು ಸರ್ಕಾರ ಯತಾವತ್ತಾಗಿ ಜಾರಿಗೆ ಮಾಡದೆ ಇದ್ದಲ್ಲಿ ಸರ್ಕಾರಕ್ಕೆ ಗಡುವನ್ನು ನೀಡಿ, ಮುಂದಿನ ದಿನಗಳಲ್ಲಿ ಮಡಿವಾಳ ಸಂಘದಿಂದ ಬೃಹತ್ ಪ್ರತಿಭಟನೆ ಮೆರವಣಿಗೆಯನ್ನು ನಡೆಸಲಾಗುತ್ತದೆ ಎಂದು ಇದೇ ವೇಳೆ ಸರ್ಕಾರಕ್ಕೆ ಎಚ್ಚರಿಕೆಯನ್ನು ಸಹ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಬಿ ಆರ್ ಪ್ರಕಾಶ್ ,ಕಾನೂನು ಸಲಹೆಗಾರರದ ಸುಬ್ರಮಣ್ಯ ಗಿರಿಧರ್ ಸೇರಿದಂತೆ ಸಂಘದ ಪದಾಧಿಕಾರಿಗಳು ಇದೇ ವೇಳೆ ಉಪಸ್ಥಿತರಿದ್ದರು.