ಬೆಂಗಳೂರು: ಮನುಷ್ಯ ಯಾವ ಮಟ್ಟದಲ್ಲಿದ್ದರೂ ಸಹ ಆತ ಒಬ್ಬ ಸ್ರೀ ಸಾಮಾನ್ಯ, ಕುವೆಂಪು ಅವರ ವಿಚಾರಗಳನ್ನು ಓದಿಕೊಂಡವರು ಸಕಲ ಜೀವಿಗಳನ್ನು ಇಸ್ಟಪಡುತ್ತಾರೆ ಎಂದು ಬೆಂಗಳೂರು ನಗರ ಜಿಲ್ಲೆಯ ಕಸಾಪ ಅಧ್ಯಕ್ಷ ಪ್ರಕಾಶ್ ಮೂರ್ತಿ ಅವರು ತಿಳಿಸಿದರು.
ನವಕರ್ನಾಟಕ ಯುವಶಕ್ತಿ ಸಂಘದ ವತಿಯಿಂದ ರಾಷ್ಟ್ರಕವಿ, ವಿಶ್ವಮಾನವ ಕುವೆಂಪು ಅವರ 119ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ಬೆಂಗಳೂರಿನ ಸುಂಕದಕಟ್ಟೆಯ ಕಾವೇರಿ ರೆಸಿಡೆನ್ಸ್ ಯಲ್ಲಿ ಕಾರ್ಯಕ್ರಮ ಉದ್ಘಾಟನೆ ಮಾಡಿ ಪ್ರಕಾಶ್ ಮೂರ್ತಿ ಮಾತನಾಡಿ, ಮನುಷ್ಯ ಯಾವ ಸ್ಟೇಟ್ಸ್ ನಲ್ಲಿ ಇದ್ದರೂ ಒಬ್ಬ ಶ್ರೀ ಸಾಮಾನ್ಯ, ಆದರೆ ಇದೀಗ ಮಧ್ಯದಲ್ಲಿ ಗೋಡೆ ಕಟ್ಟಿಕೊಂಡು ಕುವೆಂಪು ಬಿತ್ತಿದ ವಿಷಗಳನ್ನು ಮರೆಯುತ್ತಿದ್ದೇವೆ, ಜಗದ ಕವಿ ರಾಜ್ಯಕ್ಕೆ ನೀಡಿದ ಸಂದೇಶಗಳನ್ನು ನೋಡಿಕೊಳ್ಳಬೇಕು. ಕುವೆಂಪು ಅವರನ್ನು ಓದಿಕೊಂಡವರು ಸಕಲ ಜೀವಿಗಳನ್ನು ಇಸ್ಟ ಪಡುವ ವ್ಯಕ್ತಿಯಾಗಿದ್ದರು, ಆದರೆ ಕುರುಡು ಅಭಿಮಾನದಿಂದ ಎಲ್ಲೋ ಒಂದುಕಡೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಕನ್ನಡಕ್ಕಾಗಿ ಕೈ ಎತ್ತಿದರು ನಿನ್ನ ಕೈ ಪಾವನವಾಗುತ್ತದೆ, ಹಾಗಾದರೆ ಯುವಕರು ಕುವೆಂಪು ವಿಚಾರಗಳ ಬಗ್ಗೆ ಕೇಳಿದರೆ ಎಲ್ಲಿ ಹೇಳುತ್ತಾರೆ. ಅವರು ಅತಿ ಹೆಚ್ಚು ಗೀತೆಗಳನ್ನು ಕೊಟ್ಟ ಮಹಾನ್ ಪುರುಷ, ಅವರ ಸಾಹಿತ್ಯದ ಶಕ್ತಿ ಸೂರ್ಯನಸ್ಟೆ ಸತ್ಯ ಎಂದರು. ಅವರು ಹಾಕಿಕೊಟ್ಟ ಹಾದಿಯಲ್ಲಿ ರಷ್ಟು ಜನ ನಡೆಯುತ್ತಿದ್ದರೆ, ಒಕ್ಕಲಿಗರು ಕುವೆಂಪು ಅವರನ್ನು ಆದರ್ಶವಾಗಿ ಇಟ್ಟಿಕೊಂಡಿದ್ದರೆ, ಕುವೆಂಪು ಅವರನ್ನು ಪುರೋಹಿತ ಶಾಹಿಗಳು ವಿರೋಧಿಸಿದ್ದರು, ಮಂತ್ರ ಮಾಂಗಲ್ಯದ ಮೂಲಕ ಸರಳವಾಗಿ ವಿವಾಹವಾದರು ಜಾರಿಗೆ ತಂದವರು ಕುವೆಂಪು, ನಾವೆಲ್ಲರೂ ಕುವೆಂಪು ಅವರ ಆಲೋಚನೆ, ಆದರ್ಶ, ತತ್ವ,ಅರಿವಿನ ಹಾದಿಯಲ್ಲಿ ನಡೆಯುವ ಮೂಲಕ ಕುವೆಂಪು ಚಿಂತನೆಗೆ ಬೆಳೆಸಿಕೊಂಡು ಹೋಗಬೇಕು.
ಲಿಂಗೇಗೌಡ ಮಾತನಾಡಿ, ಕುವೆಂಪು ಕೇವಲ ಒಂದು ಜಾತಿಗೆ ಸೀಮಿತವಾಗಿಲ್ಲ, ಬದಲಿಗೆ ಎಲ್ಲಾ ಜಾತಿ, ವರ್ಗ, ಪಂಗಡ,ಧರ್ಮಕ್ಕೆ ಬೇಕಾಗಿರುವ ಅವರೊಬ್ಬ ವ್ಯಕ್ತಿ ಅಲ್ಲ ಶಕ್ತಿ, ಅವರು ರಚಿಸಿದ ಗೀತೆಗಳು ಎಂದೆದಿಗು ಚಿರಾಯು, ಅವರನ್ನು ಕೇವಲ ರಾಮಾಯಣ, ಮಹಾಭಾರತ, ಜ್ಞಾನಪೀಠ ಪ್ರಶಸ್ತಿ ಬಗ್ಗೆ ಮಾತನಾಡದೆ, ಅವರು ಹಾಕಿಕೊಟ್ಟ ಹಾದಿಯಲ್ಲಿ ನಡೆದರೆ ಅದೇ ಕುವೆಂಪು ಅವರಿಗೆ ಕೊಟ್ಟ ಗೌರವ. ಅವರು ರಚಿಸಿದ ನಾಟಕ ಬೆರಳ ಕೊರಳ, ಜಲಗಾರ ಬಗ್ಗೆ ಸಾಕಷ್ಟು ವಿಚಾರಗಳನ್ನು ತಿಳಿಸಿದರು. ಅವರ ಪುಸ್ತಕಗಳು ಒಂದೊಂದು ಪ್ರೇರಣೆಯಾಗಿವೆ ಎಂದರು. ಇನ್ನು ಇದೇ ವೇಳೆ ಕನ್ನಡಕ್ಕಾಗಿ ಹೋರಾಡಿದ ಕನ್ನಡದ ಕಾರ್ಯಕರ್ತರನ್ನು ಬಂಧಿಸಿರುವುದು ಸರಿಯಲ್ಲ, ಸರ್ಕಾರದ ನಿರ್ಧಾರ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾವು ಬೆಂಗಳೂರಿನಲ್ಲಿ ಸಂಘಟನೆ ಮಾಡುವುದನ್ನು ಬಿಟ್ಟಿದ್ದೇವೆ ಕಾರಣ ಇಲ್ಲಿ ಸಂಘಟನೆ ಕೊರತೆ ಎದ್ದು ಕಾಣುತ್ತದೆ, ಹೀಗಾಗಿ ಯಶಸ್ವಿಯಾಗಿ ಮಾಡಲು ಸಾಧ್ಯವಾಗುತ್ತಿಲ್ಲ, ಹಾಗಾಗಿ ಜಿಲ್ಲಾ ಮಟ್ಟದಲ್ಲಿ ಸಂಘಟನೆಯನ್ನು ಮಾಡಿಕೊಂಡು ಹೋಗಲಾಗುತ್ತದೆ, ಮುಂದಿನ ದಿನಗಳಲ್ಲಿ ಶಾಲಾ ಕಾಲೇಜುಗಳಿಗೆ, ಯುವ ಮನಸ್ಸುಗಳಿಗೆ ಕುವೆಂಪು ಅವರ ವಿಚಾರಧಾರೆಗಳನ್ನು ತಿಳಿಸಬೇಕು ಎಂದು ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರು ತಿಳಿಸಿದರು.
ಕುವೆಂಪು ಅವರ ತತ್ವ ಸಿದ್ಧಾಂತಗಳು ಉಳಿದರೆ ಕನ್ನಡ ಉಳಿಯುತ್ತದೆ, ಕನ್ನಡ ಭಾಷೆ ಬಗ್ಗೆ ಹೋರಾಟ ಮಾಡುವ ಸ್ಥಿತಿ ಬಂದೊದಗಿದೆ, ಪ್ರಜಾಪ್ರಭುತ್ವದಲ್ಲಿ ಕನ್ನಡ ಉಳಿಯಬೇಕು ಅಧಿಕಾರಿಗಳಲ್ಲಿ ಮೊದಲು ಕನ್ನಡ ಬಳಕೆ ಮಾಡಬೇಕಾಗಿದೆ, ಕುವೆಂಪು ರವರ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಬದುಕಬೇಕು, ಮೊದಲು ಆಡಳಿತದಲ್ಲಿ ಕನ್ನಡ ಕಡ್ಡಾಯವಾಗಬೇಕು ಎಂದರು.
ನವಕರ್ನಾಟಕ ಯುವಶಕ್ತಿ ಹಾಗೂ ಕನ್ನಡ ಪರ ಹೋರಾಟಗಾರರ ಸಂಘಟನೆಗಳ ರಾಜ್ಯಾಧ್ಯಕ್ಷ ಕೆನ ಲಿಂಗೇಗೌಡ, ಬೆಂಗಳೂರು ನಗರ ಜಿಲ್ಲಾ ಕಸಾಪ ಪ್ರಕಾಶ್ ಮೂರ್ತಿ, ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷರಾದ ಪುಟ್ಟಸ್ವಾಮಿ ಗೌಡ, ಗೋವಿಂದೆ ಗೌಡ, ಕೆಜಿ ಕುಮಾರ್ ಗೌಡ, ಶ್ರೀಗಂಧ ಕಾವಲು ಹನುಮಂತರಾಯಪ್ಪ, ಮುನಿರತ್ನ, ಕೃಷ್ನಮೂರ್ತಿ , ವರಲಕ್ಷ್ಮಿ, ಮೇಘಾಲಯ ಕೆಂಪೇಗೌಡ, ಪಿಎಸ್ ಸುರೇಶ್, ಒಕ್ಕಲಿಗ ಸಮುದಾಯದ ವಿವಿಧ ಸಂಘಟನೆಯ ಮುಖಂಡರು, ಹೋರಾಟ ಸಮಿತಿಯವರು ಭಾಗವಹಿಸಿದರು.