ಬೆಂಗಳೂರು: ಇತರೆ ಕ್ರೀಡೆಗಳಂತೆ ಟೆಕ್ವೆಂಡೋ ಕ್ರೀಡಾಕೂಟ ಹಿಂದಿನ ಪ್ರಸ್ಥ ದಿನಗಳಿಗೆ ಬಹಳ ಮುಖ್ಯವಾದ ಕ್ರೀಡಾಕೂಟದ ಜೊತೆಗೆ ಒಂದು ಕಲೆಯಾಗಿ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಆತ್ಮ ರಕ್ಷಣ ಕಲೆ ಕಲಿಯುವುದು ಬಹಳ ಮುಖ್ಯ ಎಂದು ಕರ್ನಾಟಕ ಟೆಕ್ವೆಂಡೋ ಸಂಸ್ಥೆಯ ಕಾರ್ಯದರ್ಶಿ ಮಾಸ್ಟರ್ ಪ್ರದೀಪ್ ಜನಾರ್ದನ್ ತಿಳಿಸಿದರು.
38ನೇ ರಾಷ್ಟ್ರೀಯ ಟೆಕ್ವಿಂಡು ಚಾಂಪಿಯನ್ ಶಿಪ್ ಕ್ರೀಡಾಕೂಟವನ್ನು ಬೆಂಗಳೂರಿನ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ಡಿ.28ರಿಂದ 30ರ ವರೆಗೆ 3 ದಿನಗಳ ಕಾಲ ಕರ್ನಾಟಕ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಂದ ಪುಟಾಣಿ ಮಕ್ಕಳಿಂದ ಹಿಡಿದು ವಯಸ್ಕರ, ಯುವಕರು ಈ ಒಂದು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ.
ವಿವಿಧ ರಾಜ್ಯಗಳಿಂದ ನೂರಾರು ತಂಡಗಳು ರಾಷ್ಟ್ರಮಟ್ಟದ ಈ ಒಂದು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ, ಮಕ್ಕಳು ಬಾರಿ ತಮ್ಮ ಕಲೆಯನ್ನು ರಿಂಗ್ ಮೇಲೆ ಪ್ರದರ್ಶನ ಮಾಡುತ್ತಿದ್ದಾರೆ, ಡಿಸೆಂಬರ್ 30ರಂದು ಸಮಾರೋಪ ಸಮಾರಂಭ ನಡೆಯಲಿದ್ದು ಟೆಕ್ವೆಂಡೋ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಂತಹ ಮಕ್ಕಳಿಗೆ ಪ್ರಶಸ್ತಿ ಪ್ರಧಾನವನ್ನು ಸಹ ಮಾಡಲಿದ್ದಾರೆ ಎಂದು ತಿಳಿಸಿದರು.
ಒಂದು ಕ್ರೀಡಾಕೂಟವನ್ನು ಭಾರತ, ನವದೆಹಲಿಯ ಟೆಕ್ವೆಂಡೋ ಸಂಸ್ಥೆಯ ಸಹಕಾರ ಹಾಗೂ ಕರ್ನಾಟಕ ಟೆಕ್ವೆಂಡೋ ಸಂಸ್ಥೆಯಿಂದ ಆಯೋಜನೆ ಮಾಡಲಾಗಿದೆ. ಕರ್ನಾಟಕದ ಮಕ್ಕಳು ಈಗಾಗಲೇ ಬೇರೆ ಬೇರೆ ರಾಜ್ಯ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇರೆ ಬೇರೆ ದೇಶಗಳಲ್ಲಿ ತಮ್ಮ ಕಲೆಯನ್ನು ಪ್ರದರ್ಶನ ಮಾಡಿ ಪದಕಗಳನ್ನು ಗೆದ್ದುಕೊಂಡು ಬಂದಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದರು.
ಮೂರು ದಿನಗಳ ಕಾಲ ನಡೆದ ಟೆಕ್ವೆಂಡೋ ಕ್ರೀಡಾಕೂಟದಲ್ಲಿ ಗೆದ್ದಂತಹ ಮಕ್ಕಳಿಗೆ ಗಣ್ಯರು ಫಲಕಗಳನ್ನು ನೀಡಿ ಗೌರವಿಸಲಾಯಿತು.
ಇನ್ನೂ ಕಾರ್ಯಕ್ರಮಕ್ಕೆ ಅಂತರಾಷ್ಟ್ರೀಯ ಮಟ್ಟದ ಕಬಡ್ಡಿ ಆಟಗಾರ ಹಾಗೂ ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ ಗೌರೀಶ್, ಬ್ಯಾಟರಾಯನಪುರ ಮಾಜಿ ಸಿಎಂಸಿ ಅಧ್ಯಕ್ಷ ಹನುಮಂತೆಗೌಡ, ಕುವೆಂಪು ನಗರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸಯ್ಯ, ಕರ್ನಾಟಕ ಅಮೆಚೂರ್ ಕಬಡ್ಡಿ ಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಮುನಿರಾಜ್, ಸಮಾಜಸೇವಕ ವೆಂಕಟೇಶ್ ,ಅಮೃತಳ್ಳಿ pld ಬ್ಯಾಂಕ್ ನ ಅಧ್ಯಕ್ಷ ಶ್ರೀಧರ್ ,ನಿವೃತ್ತಪ್ಪ ಡಿವೈಎಸ್ಪಿ ಮುನಿವೆಂಕಟಪ್ಪ ಸೇರಿ ಇದರರೂ ಉಪಸ್ಥಿರಿದ್ದರು.
ಕಾರ್ಯಕ್ರಮದಲ್ಲಿ ಭಾರತೀಯ ಟೆಕ್ವೆಂಡೋ ಸಂಸ್ಥೆಯ ಅಧ್ಯಕ್ಷ ವಕೀಲ, ಗ್ರಾಂಡ್ ಮಾಸ್ಟರ್ ಡಾ. ರಾಜೇಂದ್ರನ್ ಬಾಲನ್, ಉಪಾಧ್ಯಕ್ಷ ಮಾಸ್ಟರ್ ನರೇಂದ್ರ ಸಿಂಗ್ ರಾವತ್, ಮಾಸ್ಟರ್ ಅಬುದುರಹಿಮಾನ್ ಮಂಗಳಸರಿ, ಭಾರತ- ನವದೆಹಲಿಯ ಟಿಎಐ ನ ಕಾರ್ಯದರ್ಶಿ ಮಾಸ್ಟರ್ ರಚನಾ ಚೌರಾಸಿಯ ರಾಜೇಂದ್ರನ್ ಸೇರಿ ಇನ್ನಿತರರು ಹಾಜರಿದ್ದರು.