ಬೆಂಗಳೂರು: ಮಕ್ಕಳು ಕೇವಲ ಪರೀಕ್ಷೆಯಲ್ಲಿ ಅಂಕಗಳನ್ನು ಗಳಿಸಿದರೆ ಮಾತ್ರ ಬುದ್ದಿವಂತರಲ್ಲ ಪಠ್ಯೇತರ ಚಟುವಟಿಕೆ ಜೊತೆಗೆ ಸಮಾಜ ಸುಧಾರಕರಾಗಬೇಕು ಎಂದು ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶ ವಿ ಗೋಪಾಲಗೌಡ ಅವರು ತಿಳಿಸಿದರು.
ಬೆಂಗಳೂರಿನ ಟೌನ್ ಹಾಲ್ ನ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಬಿಬಿಎಂಪಿ ನೌಕರರ ಸಹಕಾರ ಸಂಘದ 110ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಪಾಲಿಕೆಯ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪಾಲಿಕೆಯ ಸಹಕಾರ ಸಂಘದಿಂದ ಹಮ್ಮಿಕೊಂಡಿರುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಧನ್ಯವಾದ ಅರ್ಪಿಸಿದರು. ಸಂಘದವರು ನೀಡುವ ಪುರಸ್ಕಾರ ವಿಧ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಹೆಚ್ಚು ಜವಾಬ್ದಾರಿ ನೀಡುತ್ತಿದೆ ಎಂದರು. ಅದನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗಳು ವ್ಯಾಸಂಗದಲ್ಲಿ ಹೆಚ್ಚುಹೆಚ್ಚು ತಮ್ಮ ಪ್ರತಿಭೆಯನ್ನು ಪ್ರದರ್ಶಿಸ ಬೇಕು ಎಂದು ಕಿವಿ ಮಾತು ಹೇಳಿದರು.
ಸಮಾಜದಲ್ಲಿ ವಿಜ್ಞಾನ, ವೈದ್ಯಕೀಯ, ವಕೀಲ,ವಿಜ್ಞಾನಿಗಳು, ಎಂಜಿನಿಯರ್ಸ್ ಇದ್ದಾರೆ, ಅವೆಲ್ಲವನ್ನೂ ಒಟ್ಟುಗೂಡಿಸಿಕೊಂಡು ಅಭಿವೃದ್ದಿ ಪಟದತ್ತ ಸಾಗಬೇಕೆಂದರು. ನಾವು ಯಾವುದೇ ಕಾರಣಕ್ಕೂ ಬಡವರಲ್ಲ, ಆದರೆ ಜ್ಞಾನದಲ್ಲಿ ಉನ್ನತ ಸ್ಥಾನದಲ್ಲಿದ್ದವೆ. ಸ್ಥಳೀಯ ಸಮಸ್ಯೆಗಳು ಹೆಚ್ಚಿವೆ. ಅವುಗಳನ್ನು ಪೂರೈಸುವ ಜನರಿಗೆ ಸಕಲ ಸೇವೆಗಳು ಸಿಗಬೇಕಾಗಿದೆ. ಆದರೆ ಅವುಗಳು ಸಿಗದೆ ಇರುವುದು ದುರಂತದ ಸಂಗತಿ ಎಂದರು.
ಸ್ಥಳೀಯ ಸಮಸ್ಯೆಗಳ ಕಡೆ ಗಮನ ಕೊಡಲು ಸಂಬಂಧಪಟ್ಟ ಜನಪ್ರತಿನಿಧಿಗಳು ಸಚಿವ ಸಂಪುಟದಲ್ಲಿ ಚರ್ಚಿಸಿ ಬಹೆಗರಿಸುವ ಕೆಲಸ ಮಾಡಬೇಕು ಎಂದರು. ಇವೆಲ್ಲದರ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲೆ ಇದೆ. ನಾವೆಲ್ಲರೂ ಒಟ್ಟುಗೂಡಿ ಸಮಾಜವನ್ನು, ಪ್ರಜಾಪ್ರಭುತ್ವವನ್ನು, ಆಡಳಿತ ವ್ಯವಸ್ಥೆಯನ್ನು ಸುಧಾರಿಸುವ ಕೆಲಸ ಮಾಡಬೇಕು. ನಮ್ಮ ದೇಶದ ಸಂಸ್ಕೃತಿ ಇತರೆ ಪಾಶ್ಚಿಮಾತ್ಯ ದೇಶಗಳ ಸಂಸ್ಕೃತಿಗೆ ಬಹಳಷ್ಟು ವ್ಯತ್ಯಾಸವಿದೆ, ನಮ್ಮದು ಭವ್ಯ ಪರಂಪರೆ ಹೊಂದಿದ ದೇಶ, ಬೌಗೋಳಿಕವಾಗಿಯೂ ಬಹಳ ವಿಶೇಷವಾಗಿದೆ ಎಂದರು.
ಮಕ್ಕಳು ಕೇವಲ ಪಠ್ಯಕ್ಕೆ ಸೀಮಿತವಾಗಬಾರದು ಬದಲಿಗೆ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಾಧನೆ ಮಾಡುವ ಕೆಲಸವಾಗಬೇಕು, ಕಲಿಯಲು ಸಾಧನೆ, ಪರಿಶ್ರಮ ಎರಡು ಇರಬೇಕು, ಆಗಿದ್ದಾಗ ಮಾತ್ರ ನಮ್ಮ ಗುರಿ ತಲುಪಲು ಸಾಧ್ಯ ಎಂದರು. ಕನ್ನಡ ನಾಡಿನ ಭಾಷೆ ಶ್ರೀಮಂತಿಕೆ ಹೊಂದಿದೆ, ಪ್ರಾತಿಸುವ ಮನಸ್ಸುಗಳು, ಹೃದಯಗಳು ಬೇಕೆಂದರೂ.
ಬಿಬಿಎಂಪಿ ನೌಕರರ ಸಹಕಾರ ಸಂಘ 110 ವರ್ಷಗಳ ಕಾಲ ಸಾಗಿ ಬಂದಿದೆ ಎಂದರೆ ಅಷ್ಟು ಸುಲಭವಾದ ಮಾತಲ್ಲ, 10 ವರ್ಷ ಸಂದಿದೆ ಎಂದರೆ ಮಹತ್ ಸಾಧನೆಯೇ ಸರಿ, ಪಾಲಿಕೆಯ ಸಂಘ ಒಂದು ಶತಮಾನ ಪೂರೈಸಿ ಒಂದು ದಶಕ ಕಳೆದಿರುವುದು ಮತ್ತೊಂದು ವಿಶೇಷ ಎಂದರು. ಸಂಘವು ಮುಂದೆ ಮತ್ತೊಂದು ದಾಖಲೆಗೆ ಹೆಸರಾಗಲಿ 2ನೇ ಶತಕದತ್ತ ಮುನುಗ್ಗಲಿ ಎಂದು ಶುಭ ಹಾರೈಸಿದರು.
ಇದೇ ವೇಳೆ ಬಿಬಿಎಂಪಿ ನೌಕರರ ಸಂಘದ ಮಕ್ಕಳು ಎಸೆಸೆಲ್ಸಿ, ಪಿಯುಸಿ,ಡಿಗ್ರಿ ,ಎಂಜಿನಿಯರಿಂಗ್, ಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ 130ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಜೊತೆಗೆ ನಗದು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ವಿ ಮನೋಹರ್, ಹಿನ್ನೆಲೆಗಾಯಕಿ ಅನುರಾಧ ಭಟ್, ಹಿರಿಯ ಕಲಾವಿದ ಮೈಸೂರು ರಮಾನಾಂದ ಬಿಬಿಎಂಪಿ ನೌಕರರ ಸಹಕಾರ ಸಂಘದ ಅಧ್ಯಕ್ಷ ಎ ಅಮೃತರಾಜ್, ಉಪಾಧ್ಯಕ್ಷ ಕೆ ಜಿ ರವಿ ಸೇರಿದಂತೆ ಸಂಘದ ಕಾರ್ಯಕಾರಿ ಸಮಿತಿಯವರು, ಪದಾಧಿಕಾರಿಗಳು ಭಾಗಿಯಾಗಿದ್ದರು.