ಬೆಂಗಳೂರು: ನಗರದ ಮೈಸೂರು ಬ್ಯಾಂಕ್ ವೃತ್ತದ ಸಮೀಪದಲ್ಲಿರುವ ಶಿಕ್ಷಕ ಸದನದಲ್ಲಿ ಇಂದಿನಿಂದ ಜನ.24ರವರಿಗೆ ಸಿಲ್ಕ್ ಫ್ಯಾಬ್ ಪ್ರದರ್ಶನ ಹಾಗೂ ಮಾರಾಟ ಮೇಳ ಹಮ್ಮಿಕೊಳ್ಳಲಾಗಿದೆ ಎಂದು NHDC ಕಮರ್ಷಿಯಲ್ ಮ್ಯಾನೇಜ್ಮೆಂಟ್ ಉಸ್ತುವಾರಿ ಅರ್ನಾಬ್ ಸಾಧುಖಾನ್ ತಿಳಿಸಿದರು.
ನಂತರ ಮಾತನಾಡಿದ ಅವರು, ಬಹಳ ಅತ್ಯಾಕರ್ಷಕ ಬೆಲೆಯಲ್ಲಿ ತರಹೇವಾರಿ ಉಡುಪುಗಳು ಲಭ್ಯವಿದ್ದು, ಸಹಾಯಕರಾಗಿ ಭಾರತದ ಟೆಕ್ಟ್ ಟೈಲ್ ಮಂತ್ರಾಲಯ, ಟೆಕ್ಟಟೈಲ್ ಮಂತ್ರಾಲಯ ಸಹಕಾರವಿದೆ, ಅದರ ಜೊತೆಗೆ ರಾಷ್ಟ್ರೀಯ handlooms ಅಭಿವೃದ್ದಿ ಕಾರ್ಪೊರೇಷನ್ ltd ಆಯೋಜನೆ ಮಾಡಲಾಗಿದೆ ಎಂದರು.
ಪ್ರತಿದಿನ ಬೆಳಿಗ್ಗೆ 11 ರಿಂದ ರಾತ್ರಿ 8ರ ವರೆಗೆ ಮಳಿಗೆಯು ತೆರೆದಿರುತ್ತದೆ. ಸಿಲ್ಕ್ ಫ್ಯಾಬ್ ಪ್ರದರ್ಹನ ಮತ್ತು ಮಾರಾಟ ಮೇಳದಲ್ಲಿ ಹ್ಯಾಂಡ್ ಲೂಮ್ಸ್ ಮತ್ತು ಆರ್ಟ್ ಅಂಡ್ ಕ್ರಾಫ್ಟ್ ಇದೆ, ಹತ್ತಿಬಟ್ಟೆ, ವಿವಿಧ ರೀತಿಯ ಸ್ಯಾರಿ, ಸಲ್ವಾರ್ ಸೂಟ್ಸ್, ಡ್ರೆಸ್ ಮೆಟೀರಿಯಲ್ಸ್, ದುಪಟ್ಟಾ, ಹ್ಯಾಂಡ್ ಕ್ರಾಫ್ಟ್ ಲಾಭವಿದೆ.
ಮೇಳದಲ್ಲಿ ಒಟ್ಟು 66 ಮಳಿಗೆಗಳನ್ನು ಹಾಕಿಕೊಳ್ಳ ಲಾಗಿದೆ, ಮೇಳಕ್ಕೆ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ರಾಜಸ್ತಾನ, ಕರ್ನಾಟಕ, ತೆಲಂಗಾಣ, ಜಾರ್ಖಂಡ್, ಬಿಹಾರ್, ಗುಜರಾತ್, ದೆಹಲಿ,ಮಣಿಪುರ,ಮಹಾರಾಷ್ಟ್ರ, ಛತ್ತೀಸ್ ಗಢ, ಮಧ್ಯಪ್ರದೇಶ,ಆಂಧ್ರಪ್ರದೇಶ, ಕೋಆಪರೇಟಿವ್ ಸೊಸೈಟಿ ltd ನವರು ಭಾಗಿಯಾಗಿದ್ದರು.
ಮೊದಲನೇ ದಿನವೇ ಗ್ರಾಹಕರು ಸಿಲ್ಕ್ ಫ್ಯಾಬ್ ಪ್ರದರ್ಶನಕ್ಕೆ ಆಗಮಿಸಿ ಇಸ್ಟವಾದ ಉಡುಪುಗಳನ್ನು ಮುಂದಾಗಿರುವುದನ್ನು ನೋಡಬಹುದು, ಕರ್ನಾಟಕದಲ್ಲಿ ತಯಾರಾಗುವ ಕೈಮಗ್ಗ ಜವಳಿಯ ಉತ್ಪನ್ನಗಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮನ್ನಣೆ ಪಡೆದುಕೊಂಡಿದೆ.
ಇದರಲ್ಲಿ ಮುಖ್ಯವಾಗಿ ಚಾಮರಾಜನಗರದ ಶ್ರೀ ಮಂಜುನಾಥ ಕೈಮಗ್ಗ ನೇಕಾರರ ಹಾಗೂ ಹುರಿಕಾರರ ಸಹಕಾರ ಸಂಘದಿಂದ ದಿವಂಗತ ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಅವರ ಭಾವಚಿತ್ರವನ್ನು ನೀಲಿ ಬಣ್ಣದ ಬಟ್ಟೆಯ ಮೇಲೆ ಮನೋಜ್ಞವಾಗಿ ಚಿತ್ರಿಸಿರುವುದು ಮೇಳದ ಮತ್ತೊಂದು ವಿಶೇಷತೆ ಇದೆ.