ಬೆಂಗಳೂರು: ಭವ್ಯ ಭಾರತದಲ್ಲಿ ನಾವೆಲ್ಲರೂ ಒಂದಾಗಿರಬೇಕು, ಆದರೆ ರಾಜಕಾರಣಿಗಳು ಜಾತಿ ಹೆಸರಲ್ಲಿ ರಾಜಕೀಯದಿಂದ ಬೇರೆ ಮಾಡುತ್ತಿದ್ದಾರೆ ಎಂದು ಬಾರ್ಕೂರು ಮಹಾ ಸಂಸ್ಥಾನದ ಶ್ರೀ ಡಾ. ವಿದ್ಯಾವಾಚಸ್ಪತಿ ವಿಶ್ವ ಸಂತೋಷ್ ಭಾರತಿ ಶ್ರೀಪಾದರು ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.
ಶ್ರೀ ಜೆಹ್ವೇಶ್ವರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ltd ನ 25 ವರ್ಷದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಸಮಾಜದಲ್ಲಿ ಬಹಳ ಜಾತಿಗಳಿವೆ, ಬಹು ಸಂಖ್ಯಾತ ರಿಗೆ ಒಂದು,ಅಲ್ಪ ಸಂಖ್ಯಾತರಿಗೆ ಮತ್ತೊಂದು ಮಾಡುವ ಕಾಲ ಇದೆ, ಇದು ವಿಪರ್ಯಾಸ ಸಂಗತಿ ಎಂದರು. ಸ್ವಾಮೀಜಿಗಳಿಗೆ ಒಂದು ಕಾಲದಲ್ಲಿ ಸಮಾಜ ಸುಧಾರಕರಾಗಿ ಮಾಡುವ ಕೆಲಸವಿತ್ತು, ಆದರೆ ಸಮುದಾಯಗಳ ಬೇಡಿಕೆ ಈಡೇರಿಕೆಗೆ ಸ್ವಾಮೀಜಿಗಳು ಪ್ರತಿಭಟನೆಯಲ್ಲಿ ಭಾಗವಹಿಸುತ್ತಿರುವುದು ದುರಂತದ ಸಂಗತಿ ಎಂದರು.
ಕೈಮಗ್ಗ ನೇಕರಿಕೆ ಮಾಡುವರ ಇವತ್ತಿನ ಸಂದರ್ಭದಲ್ಲಿ ಜೀವನ ಬಿಗಡಾಯಿಸಿದೆ, ಅದಕ್ಕೆ ಕಾರಣ ಜಾತಿ ವ್ಯವಸ್ಥೆ, ಹೀಗಾಗಿ ಮಗ್ಗವನ್ನು ಅಭಿವೃದ್ದಿಪಡಿಸಿ ರಾಜ್ಯಕ್ಕೆ ಮಾದರಿಯಾಗಬೇಕೆಂದರು. ಸಾಕಷ್ಟು ಸಮಾಜದ ಕಾರ್ಯಕ್ರಮಗಳಿಗೆ ನಾನು ಹೋಗಿದ್ದೇನೆ, ಆದರೆ ಸ್ವಕುಳಸಾಳಿ ಸಮಾಜ ನೋಡಿಗಾದ ಸಾಕಷ್ಟು ಸಂತೋಷವಾಗಿದೆ, ಅಷ್ಟು ದೊಡ್ಡಮಟ್ಟದಲ್ಲಿ ಜನಸೇರಿದ್ದು ವಿಶೇಷವೆಂದರೆ.
ಬ್ಯಾಂಕ್ ನಿಂದ ಸಾಲದಷ್ಟು ಸಾಲ ತೆಗೆದುಕೊಳ್ಳಬಾರದು, ಸಾಲ ತೀರಿಸುವ ಮಟ್ಟದಲ್ಲಿದ್ದಾಗ ಮಾತ್ರ ಅಷ್ಟು ಸಾಲ ಮಾಡಬೇಕು, ಸಾವಿನಷ್ಟು ತೀರಿಸಲಾರದ ಸಾಲ ಮಾಡಬಾರದು, ಬದುಕಿನಲ್ಲಿ ಕಷ್ಟಗಳು ಎಲ್ಲರಿಗೂ ಬರುತ್ತದೆ, ಅವುಗಳನ್ನು ನಿವಾರಿಸಿಕೊಳ್ಳಲು ತಾಯಿಯ ಎದೆ ಭಾಗದಲ್ಲಿ ತಲೆ ಇಟ್ಟು ಬೇಡಿ, ತಂದೆಯ ತೊಡೆ ಮೇಲೆ ತಲೆ ಇಟ್ಟು, ಗುರುಗಳ ಕಾಲಿಗೆ ನಮಸ್ಕರಿಸುವುದರಿಂದ ಪುಣ್ಯಪಡಿಯುತ್ತೀರಿ ಎಂದು ನೆರೆದಿದ್ದವರಿಗೆ ತಿಳಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿ, ಸಂಸ್ಥೆಗೆ 25 ವರ್ಷ ತುಂಬಿರುವುದು ಸಂತೋಷದ ಸಂಗತಿ, ಮುಂದೆಯೂ 50 ವರ್ಷ ತುಂಬಲಿ, ಸಂಪಾದಿಸಿದ ಆಸ್ತಿಯನ್ನು ಕುಟುಂಬದಲ್ಲಿ ಹಂಚಿಕೆ ಯಾಗಬೇಕು, ಕಷ್ಟದಲ್ಲಿ ಇರುವವರಿಗೆ ಸಿಗಬೇಕು, ಸಮುದಾಯಕ್ಕೆ ಆಯುಷ್ಮಾನ್ ಭಾರತ್ ಕಾರ್ಡ್ ಕೊಡುವ ಕೆಲಸವನ್ನು ಮಾಡಲಾಗುತ್ತದೆ, ಮುಂದಿನ ಸಭೆಗಳಲ್ಲಿ ನಮ್ಮ ಅಧಿಕಾರಿಗಳನ್ನು ಕಳುಹಿಸಿ ಮಾಡಿಕೊಡಲಾಗುತ್ತದೆ. ಓಟು ಹಾಕುವುದು ನಿಮ್ಮ ಇಚ್ಚಾ ಶಕ್ತಿ, ಅವರವರಿಗೆ ಬಿಟ್ಟಿದ್ದು, ಎಲ್ಲರೂ ಒಂದೇ, ಧರ್ಮ ಬೇರೆ, ರಾಜಕೀಯ ಬೇರೆ, ದೇಶ, ಸರ್ಕಾರ ನಡೆಯಬೇಕಾದರೆ ಸಂವಿಧಾನ, ಸರ್ಕಾರದ ಅಡಿಯಲ್ಲಿ ನಡೆಯಬೇಕು ಎಂದರು. ಈ ಮೂಲಕ ನಾವೆಲ್ಲರೂ ಒಗ್ಗಟಾಗಿ ಕೆಲಸ ಮಾಡಬೇಕೆಂದರು. ನಿಮ್ಮ ಸಮಸ್ಯೆಗಳನ್ನು ಸರ್ಕಾರದ ಮಟ್ಟದಲ್ಲಿ ಬಗೆಹರಿಸುವ ಕೆಲಸ ಮಾಡಲಾಗುತ್ತದೆ ಎಂದರು.
ಇದೇ ವೇಳೆ ಸಂಸ್ಥೆಯ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಸೊಸೈಟಿಯ ಅಧ್ಯಕ್ಷರಾದ ಎಂ ಕೆ ಖಂಡಪ್ಪ,ಉಪಾಧ್ಯಕ್ಷ ವಿಶ್ವನಾಥ್, ಸಾ ಸವ್ವಾಸೆರೆ ವಿ ಶಿವರಾಂ, ಪಿ ಮಹೇಶ್, ಬಿಬಿಎಂಪಿ ಮಾಜಿ ಸದಸ್ಯ ಶಿವಕುಮಾರ್, ಆಡಳಿತ ಮಂಡಳಿಯ ನಿರ್ದೇಶಕರಾದ ನಂಜುಂಡ, ಲಕ್ಷ್ಮಿನಾರಾಯಣ, ಚಂದ್ರಭಾನು, ಮಂಜುನಾಥ್ ಜಿ ಚಂದಾವರ್, ದತ್ತಪ್ರಕಾಶ್ , ಗಣೇಶ್ , ಮಹಿಳಾ ನಿರ್ದೇಶಕರಾದ ಅನುರಾಧ ಸೇರಿದಂತೆ ಸೊಸೈಟಿಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.