ಚಿಕ್ಕಬಳ್ಳಾಪುರ; ಅಯೋಧ್ಯೆಯಲ್ಲಿ ಭಗವಾನ್ ಶ್ರೀ ರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಮಹೋತ್ಸವ ಅಂಗವಾಗಿ ಯುವ ಕಾಂಗ್ರೆಸ್ ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗ ಎಂ.ಎಸ್. ರಕ್ಷಾ ರಾಮಯ್ಯ ಅವರು ಚಿಕ್ಕಬಳ್ಳಾಪುರದ ವಿವಿಧ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದರು.
ಚಿಕ್ಕಬಳ್ಳಾಪುರ ತಾಲೂಕಿನ ಎಸ್.ಎಸ್.ಎಸ್ ದೇವಸ್ಥಾನ ಹಾಗೂ ಸರ್.ಎಂ.ವಿ ಕ್ರೀಡಾಂಗಣ ಬಳಿಯ ತೋಟದಲ್ಲಿರುವ ಹನುಮಂತನ ವಿಗ್ರಹಕ್ಕೆ ಮಾಲಾರ್ಪಣೆ ಮಾಡಿದರು. ತದನಂತರ ಬಲುಮುರಿ ಸರ್ಕಲ್ ನಲ್ಲಿ ಭಕ್ತಾದಿಗಳಿಗೆ ಪ್ರಸಾದ ವಿತರಿಸಿದರು.
ನಂತರ ಮಾತನಾಡಿದ ಎಂ.ಎಸ್. ರಕ್ಷಾ ರಾಮಯ್ಯ, ಶ್ರೀ ರಾಮ ಎಲ್ಲರ ಆದರ್ಶ ಪುರುಷ. ಉತ್ತಮ ಆಡಳಿತಕ್ಕೆ ರಾಮ ಮಾದರಿ. ರಾಜನಾದರೂ ಕಟ್ಟಕಡೆಯ ವ್ಯಕ್ತಿಯ ಅಭಿಪ್ರಾಯಗಳಿಗೂ ಮನ್ನಣೆ ನೀಡಿದ, ಸತ್ಯ, ನಿಷ್ಠೆ, ಪಿತೃವಾಕ್ಯ ಪರಿಪಾಲಕನಾಗಿ ನಮ್ಮೆಲ್ಲರ ಮನೆ,ಮನಗಳಲ್ಲಿ ರಾಮ ನೆಲಸಿದ್ದಾನೆ ಎಂದರು.