ಬೆಂಗಳೂರು: ಗೋವಾದಿಂದ ಅಕ್ರಮವಾಗಿ ಸಂಗ್ರಹ ಹಾಗು ಮಾರಾಟವಾಗುತ್ತಿದ್ದ ದುಭಾರಿ ಬೆಲೆಯ ಮದ್ಯವನ್ನು ಅಬಕಾರಿ ಅಧಿಕಾರಿಗಳು ದಾಳಿ ಮಾಡಿ ಜಪ್ತಿ ಮಾಡಿರುವ ಘಟನೆ ಬೆಂಗಳೂರು ನಗರ ಜಿಲ್ಲೆ ಮಹದೇವಪುರ ವಲಯ ವ್ಯಾಪ್ತಿಯಲ್ಲಿ ನಡೆದಿದೆ.
ಅಬಕಾರಿ ಜಂಟಿ ಆಯುಕ್ತರಾದ ಎ ಎಲ್ ನಾಗೇಶ್ , ಉಪ ಆಯುಕ್ತರಾದ ವೀರಣ್ಣ ಬಾಗೇವಾಡಿ ಹಾಗೂ ಉಪ ಅಧೀಕ್ಷಕ ರಾದ ದೇವರಾಜ ಮಾರ್ಗದರ್ಶನ ದಲ್ಲಿ ಅಧಿಕೃತ ಮಾಹಿತಿ ಮೇರೆಗೆ ಮಹದೇವಪುರ ವಲಯದ ದೂರವಾಣಿ ನಗರದ ಬಿಎಂಟಿಸಿ ಡೀಪೋ 24 ಹತ್ತಿರ ಅಬಕಾರಿ ದಾಳಿ ಮಾಡಿದಾಳಿ ಮಾಡಿ ಲೈಟ್ ಹೋರ್ಸ್, ರಾಯಲ್ ಸ್ಟ್ಯಾಗ್ ವಿಸ್ಕಿ ಬ್ರಾಂಡ್ ನ 375 ಬಾಕ್ಸ್ ಗಳಲ್ಲಿ ಅಕ್ರಮವಾಗಿ ಸಾಗಾಟ ವಾಗುತ್ತಿದ್ದ 3240 ಲೀಟರ್ ಮೇಲ್ನೋಟಕ್ಕೆ ನಕಲಿ ಯಂತೆ ಕಾಣುವ ಮದ್ಯವನ್ನು ಹಾಗೂ ಸಾಗಾಟಕ್ಕೆ ಬಳಸಿದ್ದ K A 36 -8781, ಲಾರಿಯನ್ನು ವಶಪಡಿಸಿಕೊಂಡಿದೆ.
ಬೆಳಗಾವಿ ಮೂಲದ ಆರೋಪಿಗಳಾದ ಪರಮೇಶ್ವರ್ ದೇವಪ್ಪ ನಾಯಕ ಹಾಗೂ ವಾಹನ ಚಾಲಕ ಅಮೀತ ಪಡತಾರೆ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ದಾಳಿಯ ವೇಳೆ ಕಾರ್ಯಾಚರಣೆ ಮುಗಿಯುವವರೆಗೂ ಜೊತೆಗಿದ್ದು ಸಹಕಾರಿಸಿದ ಉಪ ಆಯುಕ್ತರಾದ ಬಾಗೇವಾಡಿಯ ಉಪ ಅಧೀಕ್ಷಕರಾದ ದೇವರಾಜ್, ಸ್ನೇಹಿತ ಸುಧೀರ್ ಹಾಗೂ ಅವರ ಸಿಬ್ಬಂದಿಗೆ ಧಯವಾದಗಳನ್ನು ತಿಳಿಸಿದರು.