ಬೆಂಗಳೂರು: ಕಿಡ್ಸ್ ಝೀ ಗುರುಕುಲಮ್ ಶಾಲೆಯ 16ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ನಾಗಪುರದಲ್ಲಿನ ಡಾ.ರಾಜ್ ಕುಮಾರ್ ಸಭಾಂಗಣದಲ್ಲಿ ಸರಳವಾಗಿ ಆಚರಣೆ ಮಾಡಲಾಯಿತು.
ಜೀವನ್ ಸಂಸ್ಥೆಯ ಸಹಭಾಗಿತ್ವದಲ್ಲಿ ನಾಗಪುರದಲ್ಲಿನ ಬಿಬಿಎಂಪಿಯ ಡಾ.ರಾಜ್ ಕುಮಾರ್ ಸಭಾಂಗಣದಲ್ಲಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಶಾಸಕರಾದ ಗೋಪಾಲಯ್ಯ ಆಗಮಿಸಿ ಸಂಸ್ಥೆಗೆ, ಹಾಗು ಮಕ್ಕಳಿಗೆ ಶುಭಕೋರಿದರು. ಈ ವೇಳೆ ಬಿಜೆಪಿ ಮುಖಂಡರಾದ, ಬಿಜೆಪಿ ಮಂಡಲ ಅಧ್ಯಕ್ಷ ರಾಘವೇಂದ್ರ ಶೆಟ್ರು,ರಾಜೇಂದ್ರ ಕುಮಾರ್ ಉಪಸ್ಥಿತರಿದ್ದರು.
ಈ ವೇಳೆ ಸಂಸ್ಥೆಯ ಮುಖ್ಯಸ್ಥೆ ಹಾಗು ಮುಖ್ಯೋಪಾಧ್ಯಾಯಿನಿ ರಾಧ ನಾಗರಾಜ ಮಾತನಾಡಿ, kidzee ಗುರುಕುಲಂ ಶಾಲೆಯು ಕಳೆದ 16 ನೇ ವರ್ಷದ ವಾರ್ಷಿಕೋತ್ಸವ ಆಚರಿಸಿಕೊಂಡು ಬಂದಿದೆ, ನಮ್ಮ ಶಾಲೆಯಲ್ಲಿ 170 ಮಕ್ಕಳು ಇದ್ದಾರೆ,ಅದರಲ್ಲಿ ಡೇ ಕೇರ್, baby sitting, junior kg, seniors kg ತರಗತಿಗಳು ಇವೆ. ಮಕ್ಕಳಿಗೆ ಗುಣಮಟ್ಟದ ಪಾಠವಲ್ಲದೆ ಪಠ್ಯೇತರ ಚಟುವಟಿಕೆಗಳಲ್ಲಿ ಊಟ, ಬಟ್ಟೆ ಮೂಲಕ ಸ್ಕಿಟ್ ಮಾಡಿಕೊಡಲಾಗುತ್ತದೆ, ಮಕ್ಕಳಿಗೆ ಬೇಕಾಗುವ ಶಿಕ್ಷಣ, ಕೊಡಬೇಕಾಗುತ್ತದೆ ಎಂದರು.
ಕೇವಲ ಮಕ್ಕಳಿಗೆ ಮಾತ್ರವಲ್ಲದೆ ಶಿಕ್ಷಕರಿಗೆ ತರಬೇತಿ ನೀಡುವ ಸಂಸ್ಥೆ ಇದ್ದು, ಇಲ್ಲಿಯತನಕ 96 ಜನ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ, ಅದರಲ್ಲಿ ಪ್ರಕೃತಿ, ಸಾಮಾಜಿಕ ಕಾಳಜಿ, ಸಮಾಜ ಸೇವೆ, ಅನೇಕ ವಿಚಾರಗಳ ಬಗ್ಗೆ ಶಿಕ್ಷಕರಿಗೆ ತಿಳಿಹೇಳಿಕೊಡಲಾಗುತ್ತದೆ. ಎಲ್ಲರಿಗೂ ಪರಿಸರದ ಜೊತೆಗೆ ಏರೋಬಿಕ್ಸ್ ಬಗ್ಗೆಯೂ ಹೇಳಿಕೊಡಲಾಗುತ್ತದೆ.
ಶಾಲೆಯಲ್ಲಿರುವ ಎಲ್ಲಾ ಪುಟಾಣಿ ಮಕ್ಕಳು ಸಹಾ ವೇದಿಕೆ ಮೇಲೆ ವಿವಿಧ ನೃತ್ಯ, ಕಥೆ ಹೇಳುವ, ಸಂಗೀತ, ಗಾಯನ ಸೇರಿದಂತೆ ತರಹೇವಾರಿ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದವರನ್ನು ಮಂತ್ರ ಮುಗ್ಧರನ್ನಾಗಿಸಿತು. ಸ್ಪರ್ಧೆಯಲ್ಲಿ ಗೆದ್ದ ಮಕ್ಕಳಿಗೆ ಬಹುಮಾನದ ಜೊತೆ ಪ್ರಶಸ್ತಿ ಪತ್ರಗಳನ್ನು ಮಕ್ಕಳಿಗೆ ನೀಡಿ ಪ್ರೋತ್ಸಾಹ ನೀಡಲಾಯಿತು. ಈ ವೇಳೆ ಪೋಷಕರ ಹಾಗು ಶಾಲೆಯ ಸಿಬ್ಬಂದಿಗಳು ಮಕ್ಕಳ ಜೊತೆ ಸಂಭ್ರಮಿಸಿದರು.