ಬೆಂಗಳೂರು: ಜಯದೇವ ಹೃದ್ರೋಗ ವಿಜ್ಞಾನ ಸಂಶೋಧನಾ ಸಂಸ್ಥೆಯಲ್ಲಿ ರೋಗಿಗಳಿಗೆ ಮೊದಲು ಚಿಕಿಸ್ಸೆ ನಂತರ ಹಣ ಪಾವತಿಯ ವಿಶೇಷ ಕಾರ್ಯವನ್ನು ಜಾರಿಗೆ ತಂದವರು ಸಂಸ್ಥೆಯ ನಿರ್ದೇಶಕರಾದ ಡಾ. ಸಿ ಎನ್ ಮಂಜುನಾಥ್ ಅವರಿಗೆ ಸಲ್ಲುತ್ತದೆ ಎಂದು ಆಸ್ಪತ್ರೆಯ. ಹಿರಿಯ ಪ್ರಾಧ್ಯಾಪಕ ಡಾ. ರವೀಂದ್ರನಾಥ್ ತಿಳಿಸಿದರು.
ಜಯದೇವ ಆಸ್ಪತ್ರೆಯಲ್ಲಿ ಸುಮಾರು 18 ವರ್ಷಗಳ ಕಾಲ ನಿರ್ದೇಶಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಹೊಂದುತ್ತಿರುವ ಮಂಜುನಾಥ್ ಅವರಿಗೆ ಆಸ್ಪತ್ರೆ ವತಿಯಿಂದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಮಂಜುನಾಥ್ ಅವರು ಕೇವಲ ವೈದ್ಯರಾಗದೆ ಒಬ್ಬ ಭಾಷಣಕಾರ, ರೋಗಿಗಳ ಹೃದಯಗೆದ್ದ ಮಹಾನ್ ಚೇತನ, ಆಸ್ಪತ್ರೆಯಲ್ಲಿ 2006ರಲ್ಲಿ ಕೇವಲ 200 ಹಾಸಿಗೆಗಳಿದ್ದನ್ನು ಇದೀಗ 2000 ಕ್ಕೆ ಮೇಲ್ದರ್ಜೆಗೆ ಏರಿಸುವ ಕಾಯಕ ಅವರಿಗೆ ಸಲ್ಲುತ್ತದೆ. ಇಡೀ ರಾಜ್ಯದಲ್ಲಿ ಯಾವ ಆಸ್ಪತ್ರೆಯಲ್ಲಿ ಇಸ್ಟು ಪ್ರಮಾಣದ ಹಾಸಿಗೆ ಇರುವ ದೊಡ್ಡ ಆಸ್ಪತ್ರೆಯ ಇಲ್ಲ ಎಂದರು.
ಜಯದೇವ ಆಸ್ಪತ್ರೆಯಲ್ಲಿ 150 ಕೋಟಿ ಕಾರ್ಪಸ್ ಅನುದಾನ ಇದೆ, ಇದರಿಂದ ರೋಗಿಗಳಿಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ. ವಿಜಯನಗರ ಕಾಲದಲ್ಲಿ ಆಡಳಿತ ನಡೆಸಿದ ಶ್ರೀಕೃಷ್ಣದೇವರಾಯ ತರ ಜಯದೇವ ಆಸ್ಪತ್ರೆಯಲ್ಲಿ ಮಂಜುನಾಥ್ ಅವರು ಆಡಳಿತ ನಡೆಸಿದ್ದಾರೆ. ಪಾರ್ಲಿಮೆಂಟರಿ ಕಮಿಟಿ ಹಾಗೂ ಆಯುಷ್ಮನಾ ಭಾರತ್ ಅವರು ಜಯದೇವ ಹೃದ್ರೋಗ ಸಂಸ್ಥೆ ಹೆಚ್ಚು ಮಹತ್ವ ಕೊಟ್ಟಿದ್ದಾರೆ.
ಸಮಾಜದಲ್ಲಿ ಎಲ್ಲರಿಗೂ, ಜನರಿಗೂ ವೈದ್ಯಕೀಯದಲ್ಲಿ ಅನುಕೂಲ ಅವಾಗುವಂತೆ ಮಾಡಿಕೊಟ್ಟಿದ್ದಾರೆ, ಎಲ್ಲಾ ವೈದ್ಯರಿಗೆ ರಾಜ್ಯಸರ್ಕಾರದಿಂದ insentive ಬರುವಂತೆ ಮಾಡಿದ್ದಾರೆ. ಯಾವುದೇ ಕಾರ್ಯಕ್ರಮಕ್ಕೆ ಹೋದರು ಸಹ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಿತವಚನ ಕೊಡುತ್ತಿದ್ದಾರೆ. ಜಯದೇವ ಆಸ್ಪತ್ರೆ ಸಂಸ್ಥೆ ಬೆಳೆದಿದೆ ಎಂದರೆ ಮಂಜುನಾಥ್ ಅವರ ಗುಣಮಟ್ಟದ ಕಾಯಕ ನಿಷ್ಟೆ.
ಯಾವ ಆಸ್ಪತ್ರೆಗಳು ಮಾಡದ ಕೆಲಸ ಜಯದೇವ ಆಸ್ಪತ್ರೆ ಮಾಡಿದೆ:
ವೈದ್ಯಕೀಯ ಸಚಿವ ಎಂ ಸಿ ಸುಧಾಕರ್ ಮಾತನಾಡಿ, ಬಹಳಷ್ಟು ಇಲಾಖೆಗಳ ಸಮಾರಂಭ ನೋಡಿದೇವೆ, ಆದರೆ ಜಯದೇವ ಸಂಸ್ಥೆಯ ನಿರ್ದೇಶಕರಾದ ಡಾ.ಮಂಜುನಾಥ್ ಅವರ ಬೀಳ್ಕೊಡುಗೆ ಕಾರ್ಯಕ್ರಮ ವಿಶೇಷವಾಗಿದೆ, ರಾಷ್ಟ್ರದಲ್ಲಿ ಸರ್ಕಾರಿ ಸ್ವಾಮ್ಯದಲ್ಲಿರುವ ಜಯದೇವ ಸಂಸ್ಥೆ ಬಹಳ ವಿಶೇಷವಾಗಿದೆ, ಬಡವರಿಗೆ ದೊರೆಯುವ ಸೌಲಭ್ಯಗಳನ್ನು ಜಯದೇವದಲ್ಲಿ ನೋಡಿದ್ದೇವೆ. ರಾಜ್ಯದಲ್ಲಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಜಯದೇವ ಸಂಸ್ಥೆ ಮಾಡುತ್ತಿರುವ ಕೆಲಸ ಕಾರ್ಯಗಳ ಬಗ್ಗೆ ಅನುಕರಣೆ ಮಾಡುವುದು ಬಹಳ ಸೂಕ್ತ ಎಂದರು.
ಮಂಜುನಾಥ್ ಅವರ ಕಾಲಾವಧಿಯಲ್ಲಿ ರಾಜ್ಯದಲ್ಲಿ 4 ಕಡೆ ಜಯದೇವ ವೈದ್ಯಕಿಯ ಸಂಸ್ಥೆಗಳ ಶಾಖೆಗಳನ್ನು ಸ್ಥಾಪನೆ ಮಾಡಿರುವುದು ಮಂಜುನಾಥ್ ಅವರ ಹೆಗ್ಗಳಿಕೆಗೆ ಪಾತ್ರವಾಗಿದೆ. ಜಯದೇವ ಆಸ್ಪತ್ರೆಯಲ್ಲಿ ಬಡವರಿಗೆ ಗುಣಮಟ್ಟದ ಚಿಕಿತ್ಸೆ ಅಲ್ಲದೆ ಕಡಿಮೆ ದರದಲ್ಲಿ ಚಿಕಿತ್ಸೆ ಲಭ್ಯವಿದೆ ಎಂದರು. ಇನ್ಫೋಸಿಸ್ ಸಂಸ್ಥೆ ಜಯದೇವ ಸಂಸ್ಥೆಗೆ 200 ಕೋಟಿ ಅನುದಾನ ನೀಡಿರುವುದು ಬಿಟ್ಟರೆ ಬೇರೆ ಯಾವ ಸಂಸ್ಥೆಗಳಿಗೂ ಇಷ್ಟು ಪ್ರಮಾಣದಲ್ಲಿ ಸಹಾಯ ಮಾಡಿಲ್ಲ. ವೈದ್ಯರು ಕೇವಲ ವೃತ್ತಿಗೆ ಸೀಮಿತವಾಗದೆ ಪ್ರೌವೃತ್ತಿ ಬೆಳೆಸಿಕೊಳ್ಳಬೇಕೆಂದರು. ಮಂಜುನಾಥ್ ಅವರ ಸ್ಥಾನ ತುಂಬುವ ಕೆಲಸ ಮುಂಬರುವ ನಿರ್ದೇಶಕರಿಗೆ ಆಗುತ್ತದೆ ಎಂಬುದು ಕಷ್ಟಕರವಾಗಿದೆ ಎಂದರು.
ಮಂಜುನಾಥ್ ಅವರ ಸಾಧನೆ ನೋಡಿ ಪತ್ನಿ ಭಾವುಕ:
ಮಂಜುನಾಥ್ ಅವರ ಪತ್ನಿ ಸೌಮ್ಯ ಮಂಜುನಾಥ್ ಮಾತನಾಡಿ, ಮಂಜುನಾಥ್ ಅವರ ಕೆಲಸ ಕಾರ್ಯ ರಾಜ್ಯ ದೇಶ ಕಂಡಿದೆ, ಸರ್ಕಾರಿ ಆಸ್ಪತ್ರೆಯಲ್ಲಿ ಇರುವ ಸಮಸ್ಯೆಗಳ ಬಗ್ಗೆ ತಿಳಿಸಿದಾಗ ಯಾವ ಸಹಾಯ ಬೇಕು ಎಂದು ಹೇಳಿ ಬಗೆಹರಿಸುವ ಗೋಜಿಗೆ ಹೋಗುತ್ತಿದ್ದರು. ಅವರದ್ದು ಆಸ್ಪತ್ರೆಗಳ ಮೇಲೆ ಇದ್ದ ಕಾಳಜಿ ತಿಳಿಸುತ್ತದೆ.
ಮಂಜುನಾಥ್ ಅವರ ತಂದೆ ತಾಯಿ ಎಸ್ಟು ಪುಣ್ಯವಂತರು ಎಂಬುದು, ಡಿಎ ಓದುತ್ತಿರುವಾಗ ಸಾಕಷ್ಟು ಸಮಸ್ಯೆಗಳು ಎದುರಾಗಿದ್ದವೂ , ಜಯದೇವ ಬೆಳೆದಿರುವುದು ಕೇವಲ ನಿರ್ದೇಶಕರ ರೊಬ್ಬರಿಂದ ಸಾಧ್ಯವಿಲ್ಲ, ಆಸ್ಪತ್ರೆಯ ಸಿಬ್ಬಂದಿ ವರ್ಗ, ದಾನಿಗಳು ಸಾಕ್ಷಿ, ಮನೆಯಿಂದ ಬೆಳಿಗ್ಗೆ ಹೊರಟಾಗ ಇದ್ದ ನಗು ಮನೆಗೆ ಸಂಜೆ ಬರುವಾಗಲೂ ಅದೇ ನಗು ಇರುತಿತ್ತು ಎಂದು ಅವರ ನಡೆ ನುಡಿಗಳ ಬಗ್ಗೆ ಗುಣಗಾನ ಮಾಡುತ್ತಾ ಕೆಲವು ಕ್ಷಣ ಭಾವುಕರಾದರು.
ಜಯದೇವದಲ್ಲಿ ಮಂಜುನಾಥ್ ಒಬ್ಬ ಅಳಿಯನಲ್ಲ ಕಾಯಕ ನಿಷ್ಟೆ ಪ್ರತೀಕ:
ಮಾಜಿ ಪ್ರಧಾನ ಮಂತ್ರಿ ದೇವೇಗೌಡ ಮಾತನಾಡಿ, ಜಯದೇವ ಸಂಸ್ಥೆಗೆ ನಿರ್ದೇಶಕರಾದ ಸಂಸ್ಥೆಯಲ್ಲಿ ಒಬ್ಬ ವೈದ್ಯರಾಗಿ ಅನುಭವನ್ನು ವಿಶ್ಲೇಷಣೆ ಮಾಡಲು ಹೋಗಲ್ಲ, ಜಯದೇವ ಆಸ್ಪತ್ರೆಯನ್ನು ಉತ್ತುಂಗಕ್ಕೆ ತೆಗೆದುಕೊಂಡು ಹೋಗಿರುವುದು ಮೆಚ್ಚುಗೆಯ ಸಂಘತಿ. ನಾವೆಲ್ಲರೂ ಒಟ್ಟಿಗೆ ಊಟ ಮಾಡುತ್ತಿದ್ದೇವೆ, ಹೊರದೇಶಕ್ಕೆ ಹೋಗಿ ಕೋಟಿಗಟ್ಟಲೆ ಸಂಪಾದನೆ ಮಾಡಬಹುದು, ಆದರೆ ರಾಜ್ಯದಲ್ಲಿ ಸಮಸ್ಯೆ ಇದೆ, ಹೀಗಾಗಿ ನಾಡಿನಲ್ಲೇ ಉಳಿದುಕೊಂಡು ಸೇವೆ ಮಾಡು ಎಂದು ತಿಳಿಹೇಳಿದರು, ಅದಕ್ಕೆ ಗೌಡರ ಮಾತಿಗೆ ಕಿವಿಗೊಟ್ಟು ವಿದೇಶಕ್ಕೆ ಹೋಗದೆ ನಾಡಿನಲ್ಲಿ ಉಳಿದು ಗಣನೀಯ ಸೇವೆ ಸಲ್ಲಿಸಿದಕ್ಕೆ ಒಬ್ಬ ಅಳಿಯನಾಗಿ, ಸಂಬಂಧಿ ಎಂದು ಹೇಳುವುದಿಲ್ಲ ಅವರ ಕಾಯಕ ನಿಷ್ಟೆ ಅವರ ನಡೆ ಬಗ್ಗೆ ಹೇಳುತ್ತದೆ ಎಂದರು.
ಒಬ್ಬ ಶ್ರೇಷ್ಠ ವ್ಯಕ್ತಿಯನ್ನು ಕೈ ಹಿಡಿಯುವುದು ನಮ್ಮ ಹೆಮ್ಮೆ, ನಾಡಿನಲ್ಲಿ ಬಡವರ ಸೇವೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ, ನನಗೆ ಯಾವ ಬಿರುದಾವಳಿಗಳು ಬೇಡ, ನನಗೆ ಜನರ ಮನ್ನಣೆ ಬೇಕು ಎಂದರು. ಹೃದಯ ಚಿಕಿತ್ಸೆಗೆ ಸಂಶೋಧನೆ ಮಾಡಿದರು, ಶಸ್ತ್ರ ಚಿಕಿತ್ಸೆಗೆ ಹೊಸ ಆಯಾಮ ಕೊಟ್ಟವರು ನಮ್ಮ ಮಂಜುನಾಥ್, ಸಂಸ್ಥೆಯನ್ನು ಒಂದು ಕುಟುಂಬ ಎಂಬ ಭಾವನೆಯಿಂದ ಕೆಲಸ ಮಾಡುತ್ತಿದ್ದಾರೆ.
ಡಾ.ಮಂಜುನಾಥ್ ಮಾತನಾಡಿ, ನಾನು ಓದಬೇಕಾದರೆ ಆಸ್ಪತ್ರೆಯಲ್ಲಿ ಹೃದಯ ಸರ್ಜರಿ ಮಾಡಲು ಸ್ಟಂಟ್, ಆಂಜಿಯೋ ಪ್ಲಾಸ್ಟಿ ಮಾಡುವ ನೂತನ ತಂತ್ರಜ್ಞಾನ ಇರಲಿಲ್ಲ, ವಿದೇಶದಲ್ಲಿ ಮಾತ್ರ ಆಧುನಿಕ ತಂತ್ರಜ್ಞಾನ ಬಳಸುತ್ತಿದ್ದರು. ವಿದೇಶದ ಶಸ್ತ್ರ ಚಿಕಿತ್ಸೆ ಓದಿ, ಕರಗತ ಮಾಡಿಕೊಂಡು ಬೆಂಗಳೂರಿನಲ್ಲೂ ಅದರಲ್ಲೂ ಜಯದೇವದಲ್ಲಿ ಅನುಷ್ಠಾನ ಮಾಡಲಾಗಿದೆ.
ನಾನು ಮಾಜಿ ಪ್ರದಾನ ಮಂತ್ರಿ ಹೇಳಿದ ಮಾತು ಕೇಳಿದಾಗ ಮಾತ್ರ ಸಾಧನೆ ಮಾಡಲು ಸಾಧ್ಯವಾಯಿತು. ಇಲ್ಲದಿದ್ದರೆ ಜಯದೇವ ಆಸ್ಪತ್ರೆಯಲ್ಲಿ ಇಷ್ಟು ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ, ದೇಹ ಒಳ್ಳೆ ಕೆಲಸ ಮಾಡಿ ಸವೆಸಬೇಕು ಎಂದರು.
ಅಮೇರಿಕದಲ್ಲಿ ಎಲ್ಲವನ್ನೂ ಮಾಡಲು ಹೊರಟಿದ್ದಾರೆ ಆಂಜಿಯೊ ಪ್ಲೇಸ್ಟಿ, ಸ್ಟಂಟ್ ಗಳ ಮಾಡುವುದರಲ್ಲಿ ಹೆಚ್ಚು ಇದೆ. ಕರ್ನಾಟಕದಲ್ಲಿ ಈ ವ್ಯವಸ್ಥೆ ಇರಲಿಲ್ಲ, ಜಯದೇವ ಸಂಸ್ಥೆಗೆ 400 ದಾನಿಗಳು ನಿರಂತರವಾಗಿ ಸೇವೆ ಮಾಡುತ್ತಿದ್ದಾರೆ. 2006ರಲ್ಲಿ ನಿರ್ದೇಶಕರಾಗಿ ಸೇರಿದ್ದೆ, ಕಾಂಟ್ರಾಕ್ಟ್ ನಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಹೆಚ್ಚು ಸಂಭಾವನೆ ಕೊಡುವ ಸಂಸ್ಥೆ ಎಂದರೆ ಅದು ಜಯದೇವ ಆಸ್ಪತ್ರೆ. ಬಿಪಿಎಲ್ ಇಲ್ಲದ ಜನರಿಗೆ ಉಚಿತ ಚಿಕಿತ್ಸೆ ನೀಡಲು ಹೀಗೆ ಎಂಬುದು ಸವಾಲಾಗಿತ್ತು, ಅದಕ್ಕೆ ಕಣ್ಣಿನ ಮೂಲಕ ಪರಿಶೀಲಿಸಿ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎಂದರು.
ಯಾರು ಅವರವರ ಕೆಲಸದಲ್ಲಿ ಕಳ್ಳಾಟ ಮಾಡುತ್ತಾರೋ ಅವರೇ ನಿಜವಾದ ಕಳ್ಳರು, ರೋಗಿಗಳ ಆರ್ಥಿಕ ಸ್ಥಿತಿ ನೋಡಿಕೊಳ್ಳುವುದು ಬಹಳ ಮುಖ್ಯ. 10 ಫ್ಯಾಕ್ಟರಿ ಬೇಕಾದ್ರೂ ನಡೆಸಿಕೊಳ್ಳಬಹುದು ಆದರೆ ಒಂದು ಆಸ್ಪತ್ರೆ ನಡೆಸುವುದು ಕಷ್ಟ. Zarax ಗೆ ನಾನು ಹೆಚ್ಚು ಒತ್ತು ಕೊಡುತ್ತೇನೆ, zarax ಬಂದಿರುವುದೇ orginal ನಿಂದ . ಹೀಗಾಗಿ ನಾನು zarax ಅನ್ನು ನಾನು ತೆಗೆದುಕೊಳ್ಳುತ್ತೇನೆ. ರೂಲ್ ಬುಕ್ ಗಿಂತ ಮಾನವೀಯತೆ ಬುಕ್ ಬಹಳ ಮುಖ್ಯ. ಮೈಸೂರಿನಲ್ಲಿ 400 ಹಾಸಿಗೆ ಇದೆ, ಕೇಸಿ ಜನರಲ್ ಆಸ್ಪತ್ರೆಯಲ್ಲಿ ಸ್ಯಾಟಲೈಟ್ ಕೇಂದ್ರ ಇದೆ, ಇಎಸ್ಐ ಆಸ್ಪತ್ರೆ ಇದೆ ಒಟ್ಟು 4 ಜಯದೇವ ಆಸ್ಪತ್ರೆಯನ್ನು ರಾಜ್ಯದಲ್ಲಿ ಮೈಸೂರು, ಕಲಬುರಗಿ,ಹುಬ್ಬಳ್ಳಿ, ಬೆಂಗಳೂರಿನಲ್ಲಿ ಶಾಖೆಗಳನ್ನು ತೆರೆಯಲಾಗಿದೆ.
ಡಾ.ಮಂಜುನಾಥ್ ಅವರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಡಾ.ರವೀಂದ್ರನಾಥ್, ತಾಯಿ ಸುಬ್ಬಮ್ಮ,ಸಚಿವ ಡಾ ಎಂ ಸಿ ಸುಧಾಕರ್ , ಜಯದೇವ ಆಸ್ಪತ್ರೆಯ ಅಧೀಕ್ಷಕ ಶ್ರೀನಿವಾಸ್, ಸೇರಿದಂತೆ ಜಯದೇವ ಆಸ್ಪತ್ರೆಯ ಸಿಬ್ಬಂದಿ ವರ್ಗ, ವೈದ್ಯರು, ಸಹಪಾಠಿಗಳು, ರೋಗಿಗಳು ಭಾಗಿಯಾಗಿದ್ದರು. ಇದೇ ವೇಳೆ ಮಂಜುನಾಥ್ ಅವರನ್ನು ಬೀಳ್ಕೊಡುವಾಗ ಆಸ್ಪತ್ರೆಯ ಸಿಬ್ಬಂದಿ ವರ್ಗ ಭಾವುಕರಾದರು.