ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 28 ಕ್ಷೇತ್ರವನ್ನು ಬಿಜೆಪಿ ಗೆದ್ದು ಟೇವಣಿ ನೀಡುವುದಿಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ಕೈ ಗೆ ತಕ್ಕ ಉತ್ತರ ನೀಡಿದರು.
ಬೆಂಗಳೂರಿನ ಜಯನಗರದ ಶಾಲಿನಿ ಮೈದಾನದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆ ಬಿಜೆಪಿ ಅಧ್ಯಕರಾಗಿ ಸಿಕೆ ರಾಮಮೂರ್ತಿ ನೇಮಕವಾಗಿದ್ದಾರೆ ಅವರಿಗೆ ಅಧಿಕಾರ ಸ್ವೀಕಾರದ ಪದಗ್ರಹಣ ಮಾಡಲಾಯಿತು. ಇ ವೇಳೆ ಮಾತನಾಡಿದ ಅವರು,
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಬಿಜೆಪಿ ಭದ್ರ ಕೋಟೆಯಾಗಿದೆ, ರಾಜ್ಯದಲ್ಲಿ 6 ಲಕ್ಷ ಕಿಮೀ ನಸ್ಟು 3 ವರ್ಷದಲ್ಲಿ ಪ್ರವಾಸ ಮಾಡಿದ್ದೇನೆ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷನಾಗಿದ್ದಾಗ. ಜನರ ಪ್ರೀತಿ ವಿಶ್ವಾಸ ಬಿಜೆಪಿ ಮೇಲಿರುವುದು ನರೇಂದ್ರ ಮೋದಿ ಪರವಾಗಿ ದೇಶದಲ್ಲಿ ಅಲೆ ಇದೆ. ಕಾಶಿಮೂರದಲ್ಲಿ ಆರ್ಟಿಕಲ್ 371 ಕಾಯಿದೆಯನ್ನು ಯಾವುದೇ ಬುಲ್ಲೆಟ್ ಹಾರಿಸದೆ ಜಾತಿಗೆ ತಂದಿದ್ದೇವೆ. ಅದು ನರೇಂದ್ರ ಮೋದಿಯವರ ಕಾಲಾವಧಿಯಲ್ಲಿ.
ದೇಶದಲ್ಲಿ ಬಿಜೆಪಿ ಪರವಾಗಿ ಏಕತೆ ಇದೆ, ದೇಶ, ಸಂವಿಧಾನ ವಿರೋಧಿ ಹೇಳಿಕೆ ನೀಡಳುಯಾದಲು ಹೊರಟಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಇರುವ ಒಂದು ಸೀಟನ್ನು ಕೊಡುವ ಕೆಲಸವನ್ನು ಮಾಡಲ್ಲ ಎಂದರು. ಮುಂಬರುವ ಚುನಾವಣೆಯಲ್ಲಿ 5 ಲಕ್ಷ ಮತಗಳಿಂದ ಗೆದ್ದು ಕಾಂಗ್ರೆಸ್ ಗೆ ತಕ್ಕ ಉತ್ತರ ಕೊಡಲಾಗುತ್ತದೆ.
ಸಿಲ್ಕ್ ಬೋರ್ಡ್ ನಿಂದ ಕೆ ಆರ್ ಪುರಂ ಮೂಲಕ ವಿಮಾನ ನಿಲ್ದಾಣ ದವೆಗೆ ಮೆಟ್ರೋ ಕಾಮಗಾರಿ ಮಾಡಿದ್ದು ಯಾರು, ಸಬರ್ಬನ್ ರೈಲ್ವೇ ಯೋಜನೆ, ಬೀದಿಬದಿ ವ್ಯಾಪಾರಿ ಯೋಜನೆ ಬಿಜೆಪಿ ಯಿಂದ ಮಾಡಲಾಗುತ್ತಿದೆ ಎಂದರು.ಕಾಂಗ್ರೆಸ್ ನವರಿಗೆ ಲೋಕಸಭಾ ಚುನಾವಣೆಯಲ್ಲಿ ಠೇವಣಿ ಸಿಗದ ರೀತಿಯಲ್ಲಿ ತಕ್ಕ ಉತ್ತರ ನೀಡಲಾಗುತ್ತದೆ ಎಂದರು.
ಬೆಂಗಳೂರು ದಕ್ಷಿಣ ಜಿಲ್ಲಾ ಅಧ್ಯಕ್ಷರಾಗಿ ಪದಗ್ರಹಣ ಮಾಡಿರುವ ಸಿ ಕೆ ರಾಮಮೂರ್ತಿ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಯಾವೆಲ್ಲಾ ಕೆಲಸಗಳನ್ನು ಮಾಡಿದ್ದಾರೆ ಎಂಬುದನ್ನು ನಾವೆಲ್ಲರೂ ತೆಗೆದುಕೊಂಡು ಹೋಗಬೇಕು, ಜಯನಗರದಲ್ಲಿ ಆಡಳಿತ ನಡೆಸಿದ ಆಡಳಿತಗಾರ ವಿಜಯ್ ಕುಮಾರ ಆಶೀರ್ವಾದದಿಂದ ಆಡಳಿತ ಮಾಡಲು ಸಾಧ್ಯವಾಯಿತು.
ಬೂತ್ ಮಟ್ಟದಲ್ಲಿ ನಾವೆಲ್ಲ ಕೆಲಸಗಳನ್ನು ಮಾಡಿದರೆ ಲೋಕಸಭಾ ಚುನಾವಣೆ ಗೆಲುವು ಸಾಧಿಸುವ ಕೆಲಸ ವಾಗುತ್ತದೆ ಎಂದರು. ಬಿಜೆಪಿ ಅಧಿಕಾರದಲ್ಲಿದ್ದಾಗ ಮಕ್ಕಳಿಗೆ ವಿದ್ಯಾದಾನ, ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ನಾವೆಲ್ಲರೂ ಒಗ್ಗಟ್ಟಾಗಿ ಬಿಜೆಪಿಗೆ ಬೆಂಬಲಿಸೋಣ ಎಂದರು.
ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಮಾತನಾಡಿ, ರಾಜ್ಯದಲ್ಲಿ 28 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಗೆ ಟಕ್ಕರ್ ಕೊಡುವ ಕೆಲಸ ಮಾಡಲಾಗುತ್ತದೆ. 3 ವರ್ಷದಲ್ಲಿ ಬಿಜೆಪಿ ಗೆಲ್ಲಿಸುವ ಶಕ್ತಿ ನೀಡಲಿ. ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಬಹುಮತ ನೀಡಲಿ ಎಂದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಯಾವುದೇ ಅಭಿವೃದ್ಧಿಯಾಗಿಲ್ಲ, ಸರ್ಕಾರದಲ್ಲಿ ಹಣವಿಲ್ಲ, ಹೀಗಾಗಿ ಇದೊಂದು ಪಾಪರ್ ಸರ್ಕಾರ, ಡಿಕೆ ಸುರೇಶ್ ದೇಶ ಹೊಡೆಯುವ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಹಣ ಹೊಡೆಯಲು ಅಧಿಕಾರಕ್ಕೆ ಬಂದಿದೆ. ದೇಶದಲ್ಲಿ ಕಾಂಗ್ರೆಸ್ ಗೆ ಛೀಮಾರಿ ಹಾಕುತಿದ್ದಾರೆ. ಇದನೆಲ್ಲ ಮರೆಮಾಚಲು ದೆಹಲಿಗೆ ಹೋಗಿ ಮೋದಿ ವಿರುದ್ಧ ಧರಣಿ ಮಾಡಲು ಮುಂದಾಗಿದ್ದಾರಂತೆ. ಯಾವ ಮರ್ಯಾದೆ ಇಟ್ಟುಕೊಂಡು ಅಲ್ಲಿಗೆ ಹೋಗುತ್ತಾರೆ ಎಂದು ಕೈ ನಾಯಕರಿಗೆ ಸವಲಾಕಿದರು.
ಮಂಡ್ಯದಲ್ಲಿ ಆಂಜನೇಯ ದೇವಸ್ಥಾನದ ಮುಂದೆ 40 ಅಡಿ ಎತ್ತರದಲ್ಲಿ ಹನುಮಾನ ದ್ವಜ ಹಾರಾಟ ಮಾಡಿರುವ ಗಲಾಟೆ ರಾಜ್ಯದಲ್ಲಿ ಕೋಲಾಹಲ ಸೃಷ್ಟಿಸಿದ್ದಾರೆ, ಹೀಗಾಗಿ ಮಂಡ್ಯದಲ್ಲಿ ಮನೆ ಮುಂದೆ ಹನುಮ ದ್ವಜ ಹಾಕಿದ್ದಾರೆ, ಯಾರು ತಡೆಯುತ್ತಾರೆ ನೋಡುತ್ತೇವೆ. ಜಲ ಜೀವನ ಯೋಜನೆ ಬಿಜೆಪಿ ಸರ್ಕಾರ ಜಾರಿಗೆ ತಂದಿದೆ, ಬಿಜೆಪಿ ಕಾರ್ಯಕರ್ತರೆಲ್ಲ ಬೀದಿಗೆ ಇಳಿದು ಕಾಂಗ್ರೆಸ್ ಕಿತ್ತೊಗೆಯುವ ಕೆಲಸವಾಗಬೇಕೆಂದರು. ದೇಶದಲ್ಲಿ ನರೇಂದ್ರ ಮೋದಿ ಹಾಗೂ ರಾಮನ ಹವ ಮಾತ್ರ ಇದೆ ಎಂದು ಅಶೋಕ ತಿಳಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾತನಾಡಿ, ಬೆಂಗಳೂರು ದಕ್ಷಿಣ ಜಿಲ್ಲೆಯ ಹೊಸ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಬಿಜೆಪಿಯನ್ನು ದೇಶದಲ್ಲಿ ಎತ್ತರಕ್ಕೆ ಕೊಂಡೊಯ್ಯಲು ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಬಿಜೆಪಿ ಭಾರತ ರತ್ನ ನೀಡಿ ಗೌರವಿಸಿದೆ ಸಾಧಕರನ್ನು ಗುರುತಿಸುವ ಕೆಲಸ ಮಾಡುವಲ್ಲಿ ನರೇಂದ್ರ ಮೋದಿ ಪ್ರಮುಖರು. ರಾಜಸ್ಥಾನ, ಮಧ್ಯಪ್ರದೇಶ, ಫಲಿತಾಂಶ ಬಂದಾಗ ಕಾಂಗ್ರೆಸ್ ನವರಿಗೆ ತಳಮಳ ಶುರುವಾಗಿದೆ. ಕಾಂಗ್ರೆಸ್ ನವರ ಬೂಟಾಟಿಕೆಗಿಂತ ಮೋದಿಯವರ ಯೋಜನೆಗಳು ಬಹಳ ಮುಖ್ಯ ಎಂದರು.
ಕಾಂಗ್ರೆಸ್ ಸರ್ಕಾರ ರಾಜ್ಯದ ಯಾವ ಜಿಲ್ಲೆಯಲ್ಲೂ ಬಿಡಿಗಾಸು ಅಭಿವೃದ್ದಿ ಕೆಲಸವನ್ನು ಕಳೆದ 8 ತಿಂಗಳಿಂದ ಮಾಡಿಲ್ಲ, ಒಂದು ಕಡೆ ಜನರನ್ನು ಕಳೆದುಕೊಂಡಿದ್ದರೆ, ಮತ್ತೊಂದುಕಡೆ ಜನಪ್ರಿಯತೆಯನ್ನು ಕಳೆದುಕೊಂಡಿದೆ. 50 ಪರ್ಸೆಂಟ್ ಕಮಿಷನ್ ಸರ್ಕಾರ ಕಾಂಗ್ರೆಸ್ ನಲ್ಲಿದೆ ಎಂದು ಗಂಡಸಿ ಶಿವರಾಮ ಹೇಳಿದ್ದಾರೆ, ನಾವಲ್ಲ, ಬಿಜೆಪಿಯವರು ಅಲ್ಲ. ಇಲ್ಲಿತನಕ ಐಟಿ ಇಡಿ ದಾಳಿ ನಡೆಸಿದ್ದು ಕಾಂಗ್ರೆಸ್ ಮೇಲೆ ಹೆಚ್ಚು. ಕಾಂಗ್ರೆಸ್ ಅವಧಿಯಲ್ಲಿ ತೆರಿಗೆಯನ್ನು ಹೆಚ್ಚು ಮಾಡಲಾಗಿದೆ. ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳನ್ನು ಗೆಲ್ಲುವ ಕೆಲಸ ಮಾಡಲಾಗುತ್ತದೆ. ಲೋಕ ಫಲಿತಾಂಶ ಸುವರ್ಣ ಆಕ್ಷರದಲ್ಲು ಬರೆಯಲಾಗುತ್ತದೆ ಎಂದರು.
ರಾಜಯಾಧ್ಯಕ್ಷರಾದ ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್ ಅಶೋಕ್, ಎಂ ಪೀ ತೇಜಸ್ವಿ ಸೂರ್ಯ, ಶಾಸಕರಾದ ಉದಯ್ ಗರುದಾಚಾರ್, ಸತೀಶ್ ರೆಡ್ಡಿ, ಕೃಷ್ಣಪ್ಪ, ರವಿ ಸುಬ್ರಮಣ್ಯ, ಗೋಪಿನಾಥ್ ರೆಡ್ಡಿ, ಉಮೇಶ್ ಶೆಟ್ಟಿ, ಆ ದೇವೇಗೌಡ, ರವೀಂದ್ರ, ಅರುಣ್ ಸೋಮಣ್ಣ, ಮಾಜಿ ಮೇಯರ್ ನಟರಾಜ್, ವಿಧಾನಪರಿಷತ್ ಸದಸ್ಯರು ಭಾಗಿ,