ಬೆಂಗಳೂರು: ಈ ಬಾರಿಯ ಲೋಕಸಭೆ ಚುನಾವಣೆಗೆ ಬೆಂಗಳೂರು ಉತ್ತರಕ್ಕೆ ಸ್ಪರ್ಧಿಸಿ ಎಂದು ಕನ್ನಡಪರ ಹೋರಾಟಗಾರರು ಪ್ರಗತಿಪರ ಚಿಂತಕರು ಹಲವಾರು ಮತದಾರರು ವಾಟಾಳ್ ನಾಗರಾಜ್ ಅವರಿಗೆ ಒತ್ತಾಯಿಸಿದರು.
ಈ ಬಾರಿಯ ಲೋಕಸಭೆ ಚುನಾವಣೆಗೆ ಕನ್ನಡದ, ಕನ್ನಡಿಗರ ಕೂಗು, ಕರ್ನಾಟಕದ ಉಳುವಿನ ಸರದಾರ, ವಾಟಾಳ್ ನಾಗರಾಜ್ ಅವರು ಬೆಂಗಳೂರಿನ ಯಾವುದಾದರೂ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಬೇಕೆಂದು ಕನ್ನಡ ಪ್ರೇಮಿಗಳ ಆಶಯವಾಗಿದೆ. ಕರ್ನಾಟಕಕ್ಕೆ ಕನ್ನಡಕ್ಕೆ ಪ್ರತಿ ಬಾರಿಯೂ ಅನ್ಯಾಯ ಮಾಡುತ್ತಲೇ ಇದ್ದಾರೆ, ದೆಹಲಿಯಲ್ಲಿ ಗಟ್ಟಿ ಧ್ವನಿಯಲ್ಲಿ ಕನ್ನಡಿಗರ ಧ್ವನಿ ಕೇಳಬೇಕೆಂದರೆ ಇವರೊಬ್ಬರಿಂದ ಮಾತ್ರ ಸಾಧ್ಯ.
ಲೋಕಸಭೆಯಲ್ಲಿ ಕರ್ನಾಟಕದ ಧ್ವಜ ಹಾರಬೇಕೆಂದರೆ ಇವರೊಬ್ಬರಿಂದಲೇ ಸಾಧ್ಯ, ಪ್ರಾಮಾಣಿಕವಾಗಿ ಕರ್ನಾಟಕ ಹಾಗೂ ಕನ್ನಡದ ಪ್ರೀತಿ ಇರುವವರು ವಾಟಾಳ್ ನಾಗರಾಜ್ ಅವರನ್ನು ಈ ಬಾರಿ ಲೋಕಸಭೆಯಲ್ಲಿ ಬಹುಮತಗಳಿಂದ ಗೆಲ್ಲಿಸಿ ದೆಹಲಿಗೆ ಕಳಿಸೋಣ, ಐದು ಬಾರಿ ಶಾಸಕರಾಗಿ ಶಾಸನ ಸಭೆಗೆ ಗೈರಾಗದೆ ಸತ್ಯವಂತರೊಂದಿಗೆ ನಾಡು ಕಟ್ಟಿದಂತಹ ಕನ್ನಡಾಂಬೆಯ ವರ ಪುತ್ರ ವಾಟಾಳ್ ನಾಗರಾಜ್ ಇವರನ್ನು ಲೋಕಸಭಾ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಹಕರಿಸೋಣ.