ಕೋಲಾರ: ಜಿಲ್ಲೆಯ ಜಿಲ್ಲಾಧಿಕಾರಿಗಳ ಕಟ್ಟಡದ ಮೇಲೆ 3000 ಸಾವಿರ ದೀಪಗಳ ಮೂಲಕ ಭಾರತರತ್ನ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ರವರ ಭಾವಚಿತ್ರ ಪ್ರದರ್ಶನ.
ಭಾರತ ಸಂವಿಧಾನವನ್ನು ಅಂಗೀಕರಿಸಿಕೊಂಡು 75 ವರ್ಷದ ಪ್ರಯುಕ್ತ ರಾಜ್ಯಾದಂತ “ಸಂವಿಧಾನ ಜಾಗೃತಿ ಜಾಥ” ಎಂಬ ವಿನೂತನ ಕಾರ್ಯಕ್ರಮವನ್ನು ಘನ ರಾಜ್ಯ ಸರ್ಕಾರವು ಆಚರಿಸುತ್ತಿದ್ದು. ಅದರ ಅಂಗವಾಗಿ ಕೋಲಾರ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಟ್ಟಡದ ಮೇಲೆ ಸತತ 2 ದಿನಗಳ ಕಾಲ ಪ್ರಯತ್ನದಿಂದ ಸುಮಾರು 3000 ಸಾವಿರ ದೀಪಗಳ ಮೂಲಕ ಭಾರತರತ್ನ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ರವರ ಭಾವಚಿತ್ರವನ್ನು ಅತ್ಯದ್ಭುತವಾಗಿ ಜಿಲ್ಲಾಧಿಕಾರಿಗಳಾದ ಅಕ್ರಂ ಪಾಷ ರವರ ಮಾರ್ಗದರ್ಶನದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಶ್ರೀನಿವಾಸನ್ ಹಾಗೂ ಕಛೇರಿಯ ಸಿಬ್ಬಂದಿಯ ಪರಿಶ್ರಮದ ಮೂಲಕ ಈ ಕಲಾಕೃತಿ ಅತ್ಯದ್ಭುತವಾಗಿ ಮೂಡಿಬಂದಿರುತ್ತದೆ.
ಈ ವಿನೂತನ ಪ್ರಯತ್ನಕ್ಕೆ ಜಿಲ್ಲಾಧಿಕಾರಿಗಳಿಗೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರ ಕಛೇರಿಯ ಸಿಬ್ಬಂದಿಗೆ ಎಲ್ಲಾ ಕಡೆಯಿಂದ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ.