ಬೆಂಗಳೂರು: ಚಾಲುಕ್ಯ ವೃತ್ತದ ಸಮೀಪದಲ್ಲಿರುವ ಬಾಲುಬ್ರೂಯಿ ಅತಿಥಿಗೃಹ ಕಟ್ಟಡವನ್ನು ಪಾರಂಪರಿಕ ವಿನ್ಯಾಸಕ್ಕೆ ಒಳಪಟ್ಟು ನವೀಕರಣ ಕಾರ್ಯಕ್ರಮದ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಈ ಹಿನ್ನೆಲೆ ಅತಿಥಿಗಳಿಗೆ ಉಪಹಾರ ವ್ಯವಸ್ಥೆಯನ್ನು ಮಾಡಲಾಗಿತ್ತು. ಅದೇ ಆಹಾರ ಪದಾರ್ಥ ಸೇವಿಸುವಾಗ ಸಾಂಬಾರಿನಲ್ಲಿ ಮಾಧ್ಯಮದ ಪ್ರತಿನಿಧಿಯೊಬ್ಬರ ತಟ್ಟೆಯಲ್ಲಿ ಹುಳುಪತ್ತೆಯಾಗಿ ಕೆಲ ಕಾಲ ವ್ಯವಸ್ಥೆಯಾಗಿತ್ತು.
ಕಾರ್ಯಕ್ರಮಕ್ಕೆ ಬಂದಂತಹ ಅತಿಥಿಗಳಿಗೆ ಅಥಿತಿಗೃಹದ ಆವರಣದಲ್ಲಿ ಉಪಹಾರ ವ್ಯವಸ್ಥೆ ಮಾಡಲಾಗಿತು, ಉಪಹಾರ ವ್ಯವಸ್ಥೆಯನ್ನು ಬೆಂಗಳೂರಿನ ಮೆಜೆಸ್ಟಿಕ್ ಸಮೀಪದಲ್ಲಿರುವ ಸೌತ್ ರುಚಿ ರೆಸ್ಟೋರೆಂಟ್ ನಿಂದ ತರಿಸಲಾಗಿತ್ತು, ಆಹಾರದಲ್ಲಿ ಬಿಳಿ ಬಣ್ಣದ ಉದ್ದನೆಯ ಹುಳವೊಂದು ಸತ್ತಿರುವ ರೀತಿಯಲ್ಲಿ ಪತ್ತೆಯಾಗಿರುವುದು, ಹೋಟೆಲ್ ನಲ್ಲಿ ಆಹಾರ ಸಿದ್ದುಪಡಿಸುವಾಗ ಯಾವುದೇ ಸುಚಿ ಇಲ್ಲದೆ ಆಹಾರ ಸಿದ್ಧಪಡಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿರುವುದು ತಿಳಿಯುತ್ತದೆ.
ಈ ಸಂಬಂಧ ಸೌತ್ ರುಚಿ ಹೋಟೆಲ್ ನ ಕ್ಯಾಟರಿಂಗ್ ಉಸ್ತುವಾರಿ ವಹಿಸಿಕೊಂಡಿರುವ ವೀರೇಶ್ ಅವರನ್ನು ಕೇಳಿದಾಗ ಹಾರಿಕೆಯ ಉತ್ತರವನ್ನು ನೀಡಿರುವುದು ಕಂಡುಬಂತು, ಸಾಂಬಾರ್ ನಲ್ಲಿ ಹುಳ ಪತ್ತೆಯಾಗಿರುವುದು ಮರದ ಮೇಲಿಂದ ಬಿದ್ದಿದೆ ಎಂದು ಸಬೂಬು ನೀಡಿದರು. ಹೋಟೆಲ್ ಮಾಲೀಕರ ದೂರವಾಣಿ, ಮಾಲೀಕರನ್ನು ಕೇಳಿದಾಗ ಯಾವುದೇ ಉತ್ತರ ನೀಡದೆ ಹಾತಿಕೆ ಉತ್ತರ ನೀಡಿದರು.
ಆಹಾರದಲ್ಲಿ ಹುಳ ಪತ್ತೆ :ಯುಟಿ ಖಾದರ್ ಗರಂ
ಆಹಾರ ಪದಾರ್ಥದಲ್ಲಿ ಉಡಾಪತಿಯಾಗಿರುವ ಬಗ್ಗೆ ವಿಧಾನಸಭೆಯ ಸ್ಪೀಕರ್ ಯುಟಿ ಖಾದರ್ ಅವರ ಗಮನಕ್ಕೆ ತಂದಾಗ ಕ್ಯಾಟ್ರಿಂಗ್ ಉಸ್ತುವಾರಿ ವಹಿಸಿಕೊಂಡಿರುವ ವಿರುದ್ಧ ಗರಂ ಆದರು, ಹೋಟೆಲ್ ಮಾಲೀಕರ ವಿರುದ್ಧ ತರಾಟೆಗೆ ತೆಗೆದುಕೊಂಡರು. ಇನ್ನು ವಿಧಾನಸಭೆ ಅಧಿಕಾರಿಗಳಿಗೆ ಕ್ಯಾಟರಿಂಗ್ ಉಸ್ತುವಾರಿ ವಹಿಸಿಕೊಂಡಿರುವ ವೀರೇಶ್ ಉತ್ತರಿಸುವಂತೆ ತಿಳಿಸಿದರು. ಅಷ್ಟರ ವೇಳೆಗೆ ಕ್ಯಾಟರಿ ಹುಡುಗರು ಅಲ್ಲಿಂದ ಗಂಟು ಮೂಟೆ ಕಟ್ಟಿಕೊಂಡು ಎಸ್ಕೇಪ್ ಆಗಿದ್ದರು.
ಆಹಾರದಲ್ಲಿ ಹುಳ್ಳ ಬಿದ್ದಿರುವ ಬಗ್ಗೆ ಎಲ್ಲೆಡೆ ಸದ್ದು ಆಗುತ್ತಿದ್ದಾರೆ, ಅಲ್ಲಿಯೇ ಇದ್ದ ಕೆಲವು ಮಾಧ್ಯಮದವರು ಹಾಗೂ ಅತಿಥಿಗಳು, ಗಣ್ಯರು, ಕೆಲವರು ಬಾಯಿ ಚಪ್ಪರಿಸಿಕೊಂಡು ಊಟ ಸವಿಯುತ್ತಿರುವುದು ಕಂಡುಬಂತು.
ಆಹಾರದಲ್ಲಿ ಗುಳಪತ್ತೆಯಾಗಿರುವ ವಿಚಾರವಾಗಿ ಯುಟಿ ಖಾದರ್ ಅವರು ವಿಧಾನ ಸಭೆಯ ಅಧಿಕಾರಿಗಳಿಗೆ ತಿಳಿಸಿದಾಗ, ಅಧಿಕಾರಿಗಳು ಕ್ಯಾಟರಿಂಗ್ ಮಾಲೀಕರಿಗೆ ಹಣ ನೀಡಬೇಡಿ ಎಂದು ಅಧೀನ ಅಧಿಕಾರಿಗಳಿಗೆ ತಿಳಿಸಿದರು.
ಸರ್ಕಾರದ ಮಟ್ಟದ ಕಾರ್ಯಕ್ರಮಗಳಲ್ಲಿ ತರುವ ಊಟದ ಪರಿಸ್ಥಿತಿ ಹೀಗಾದರೆ, ಇನ್ನು ದೊಡ್ಡ ದೊಡ್ಡ ಸಭೆ ಸಮಾರಂಭಗಳಲ್ಲಿ ಆಹಾರ ಗುಣಮಟ್ಟ ಯಾವ ರೀತಿ ಇರುತ್ತದೆ ಎಂಬುದು ಊಹೆಗೂ ನಿಲುಕದಷ್ಟು.