ಬೆಂಗಳೂರು: ಮನೆನೊಣ-ತಿಪ್ಪೆನೊಣ–ಉಜಿನೊಣಗಳ ನಿವಾರಣೆಗೆ ಫ್ಲೈಟ್ರಾಪ್” ಭಾರತಕ್ಕೆ ಬಂದಿದೆ ಎಂದು ಭಾರತದಲ್ಲಿ ಫ್ಲೈಟ್ರಾಪ್ ಬ್ಯಾಗ್ಗಳ ಬಿಡುಗಡೆಯ ಕುರಿತು ಫ್ಲೈಟ್ರಾಪ್.ಇನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೌರವ್ ಅಗರ್ವಾಲ್ ತಿಳಿಸಿದರು.
ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದವರು, ಮನೆನೊಣ-ತಿಪ್ಪೆನೊಣ–ಉಜಿನೊಣಗಳು ಸಣ್ಣ ಕೀಟಗಳ ಅವುಗಳಲ್ಲಿ ಹಲವಾರು ವಿಧಗಳಿವೆ. ವ್ಯಾಪಾರಗಳಿಗೆ ಮತ್ತು ಜನರಿಗೆ ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತವೆ, ಮನುಷ್ಯರು ಮತ್ತು ಪ್ರಾಣಿಗಳ ನಡುವೆ ಮಾರಣಾಂತಿಕ ರೋಗಗಳನ್ನು ಹರಡುತ್ತವೆ (ಡೈರಿ, ಕೋಳಿ ಮತ್ತು ರೇಷ್ಮೆ ಹುಳುಗಳು), ಸಂಗ್ರಹಿಸಿದ ಆಹಾರ ದಾಸ್ತಾನುಗಳನ್ನು ಹಾಳು ಮಾಡುತ್ತವೆ… ಹೀಗೆ ಈ ನೊಣಗಳು ಎಲ್ಲರಿಗೂ ಹಾನಿಯನ್ನುಂಟುಮಾಡುತ್ತವೆ. ತಮ್ಮ 2.5 ತಿಂಗಳ ಜೀವಿತಾವಧಿಯಲ್ಲಿ ಹೆಣ್ಣು ನೊಣಗಳು 12000 ಮೊಟ್ಟೆಗಳನ್ನು ಇಡುತ್ತವೆ! ಹಾಗಾಗಿ ಅವುಗಳ ಸಂಖ್ಯೆ ಬಹಳ ವೇಗವಾಗಿ ವೃದ್ಧಿಯಾಗುತ್ತದೆ ಎಂದರು.
ಜನರು ಮತ್ತು ವ್ಯಾಪಾರಗಳು ಈ ಮೊಣಗಳ ನಿವಾರಣೆಗೆ ಹಲವಾರು ಉಪಾಯಗಳನ್ನು ಪ್ರಯತ್ನಿಸಿದ್ದಾರೆ. ಆದರೆ, ಅವುಗಳಿಂದ ಸಿಕ್ಕ ಯಶಸ್ಸು ಸೀಮಿತವಾದರೆ ತಲೆನೋವೇ ಹೆಚ್ಚು.ಜೊತೆಗೆ, ನಗರೀಕರಣ ಅತಿಯಾಗಿ ಆಗುತ್ತಿರುವುದರಿಂದ ನೊಣಗಳ ನೈಸರ್ಗಿಕ ಶತ್ರುಗಳಾದ ಹಲ್ಲಿಗಳು ಮತ್ತು ಕಪ್ಪೆಗಳು ನಾಶವಾಗುತ್ತಿರುವುದರಿಂದಾಗಿ ನೊಣಗಳ ಸಂಖ್ಯೆ ದಿನೇ ದಿನೇ ಬೆಳೆಯುತ್ತಿದೆ. ಇದನ್ನು ನಿಯಂತ್ರಿಸುವುದು ಬಹುತೇಕ ಅಸಾಧ್ಯವಾಗಿದೆ.
ಆಳವಾಗಿ ಸಂಶೋಧನೆ ಮಾಡಿದ ಬಳಿಕ ನೊಣಗಳಿಂದ ಆಗುತ್ತಿರುವ ಹಲವಾರು ಸಮಸ್ಯೆಗಳನ್ನು ಪರಿಹರಿಸಲು ತಕ್ಷಣವೇ ಪರಿಣಾಮಕಾರಿ ಪರಿಹಾರದ ಅಗತ್ಯವಿದೆ ಎಂಬುದು ಸಂದೇಹವಿಲ್ಲದಂತೆ ಸಾಬೀತಾಗಿದೆ. ನೊಣಗಳಿಂದ: ರೇಷ್ಮೆ ಕೃಷಿ, ಡೈರಿ, ಪೌಲ್ಟ್ರಿ ಇತ್ಯಾದಿ ಉತ್ಪಾದನಾ ಕ್ಷೇತ್ರಗಳ ಮೇಲೆ ಭಾರಿ ಪರಿಣಾಮ ಉಂಟಾಗುತ್ತಿದೆ. ಡೈರಿ ಪ್ರಾಣಿಗಳಿಗೆ ಬರುವ ಕಾಲು- ಬಾಯಿ ರೋಗಗಳು, ಫಾರ್ಸಿ ಇತ್ಯಾದಿ ರೋಗಗಳಿಂದ ಉತ್ಪಾದನೆ ಶೇ.30 ರಷ್ಟು ಹಾಳಾಗುತ್ತಿದೆ. ನೊಣಗಳು ಅನೈರ್ಮಲ್ಯವನ್ನು ಉಂಟುಮಾಡುವುದ್ದರಿಂದ ಪಕ್ಷಿಗಳು ಮತ್ತು ಜಮೀನಿನ ಸಮೀಪ ವಾಸಿಸುವ ನಿವಾಸಿಗಳ ಆರೋಗ್ಯದ ಮೇಲೆ ಬಹಳ ಕೆಟ್ಟ ಪರಿಣಾಮ ಬೀರುತ್ತದೆ. ಮನುಷ್ಯರಲ್ಲಿ ಟೈಫಾಯಿಡ್ ಜ್ವರ, ಭೇದಿ, ಕಾಲರಾ, ಪೋಲಿಯೊ, ಯಾಸ್, ಆಂಥ್ರಾಕ್ಸ್, ಟುಲೇರೇಮಿಯಾ, ಕುಷ್ಠರೋಗ, ಕ್ಷಯರೋಗ ಇತ್ಯಾದಿ ಸೇರಿದಂತೆ ಕನಿಷ್ಠ 65 ರೋಗಗಳು ಹರಡಲು ನೊಣಗಳು ಕಾರಣ ಎಂದು ಬಲವಾಗಿ ಶಂಕಿಸಲಾಗಿದೆ. ಮನೆ ನೊಣಗಳು ಮಾನವರು ಮತ್ತು ಪ್ರಾಣಿಗಳಲ್ಲಿ ಗಂಭೀರ ಮತ್ತು ಮಾರಣಾಂತಿಕ ಕಾಯಿಲೆಗಳನ್ನು ಉಂಟುಮಾಡುವ ರೋಗಕಾರಕಗಳನ್ನು ಹೊತ್ತೊಯ್ಯುತ್ತಿರುತ್ತವೆ ಎಂಬುದು ತಿಳಿದುಬಂದಿದೆ. ಈ ಸಮಸ್ಯೆಗೆ ಪರಿಹಾರವಾಗಿ ನಾವು ಒಂದು ನವೀನ ಉತ್ಪನ್ನವಾದ ಫ್ಲೈಟ್ರಾಪ್ ಬ್ಯಾಗ್ಗಳನ್ನು ಭಾರತದಲ್ಲಿ ಪ್ರಾರಂಭಿಸಲು ನಿಜಕ್ಕೂ ಸಂತೋಷವಾಗುತ್ತಿದೆ.
30-ವರ್ಷ-ಹಳೆಯ ಯುಎಸ್-ಅಭಿವೃದ್ಧಿಪಡಿಸಿದ ಉತ್ಪನ್ನವನ್ನು ಭಾರತದಲ್ಲಿ FlyTrap.in ತಯಾರಿಸಿ ಮಾರಾಟ ಮಾಡುತ್ತದೆ. ಇದನ್ನು ಭಾರತದ ಪರಿಸ್ಥಿತಿಗಳಿಗೆ ಹೊಂದುವಂತೆ ಕಸ್ಟಮೈಸ್ ಮಾಡಲಾಗಿದೆ. ಭಾರತದ ತಳಮಟ್ಟದಲ್ಲಿ (ಗ್ರಾಮೀಣ, ಅರೆ-ನಗರ) ಶೇ.68 ರಷ್ಟು ಭಾರತೀಯರು ವಾಸಿಸುತ್ತಿದ್ದಾರೆ. ಹಾಗಾಗಿ ಅಲ್ಲಿರುವ ಅಸಂಖ್ಯ ಸೂಕ್ಷ್ಮ ವ್ಯವಹಾರಗಳಿಗೆ ನೆರವಾಗುವಂತೆ ಫ್ಲೈಟ್ರ್ಯಾಪ್ ಅನ್ನು ತಯಾರಿಸಲಾಗಿದೆ. ಇದು ವಿಷಕಾರಿಯಲ್ಲದ-ಸಾವಯವ ಉತ್ಪನ್ನ. ಇದು ಕೇವಲ ನೊಣಗಳಿಗೆ ಮಾತ್ರ ಕೊಲ್ಲುತ್ತದೆ. ಇತರ ಪ್ರಾಣಿಗಳು ಮತ್ತು ಮನುಷ್ಯರಿಗೆ ಹಾನಿ ಮಾಡುವುದಿಲ್ಲ. ನೀವು ಮಾಡಬೇಕಾದುದು ಇಷ್ಟೇ: ಅದರ ಶಕ್ತಿಯುತ ಮಿಶ್ರಣಕ್ಕೆ ಒಂದು ಲೋಟ ನೀರನ್ನು ಸೇರಿಸಿ ಮತ್ತು ಬಳಸಿ ಬಿಸಾಡಬಹುದಾದ ಚೀಲದಲ್ಲಿರುವ ಅದನ್ನು ಸುಮಾರು 30 ದಿನಗಳವರೆಗೆ ಸೂಕ್ತವಾದ ತೆರೆದ ಸ್ಥಳದಲ್ಲಿ ನೇತುಹಾಕುವುದು. ಅದು ಮ್ಯಾಜಿಕ್ ಮ್ಯಾಗ್ನೆಟ್ನಂತೆ ನೊಣಗಳನ್ನು ಆಕರ್ಷಿಸಿ ನೊಣಗಳನ್ನು ಕೊಂದು ತನ್ನ ಚೀಲದಲ್ಲಿ ಸತ್ತ ನೊಣಗಳನ್ನು ಸಂಗ್ರಹಿಸುತ್ತದೆ
ಪ್ರಸ್ತುತ, ಫ್ಲೈಟ್ರಾಪ್ ಬ್ಯಾಗ್ಗಳನ್ನು ನಮ್ಮದೇ ವೆಬ್ಸೈಟ್ – FlyTrap.in, ಅಮೇಜಾನ್, ಫ್ಲಿಪ್ ಕಾರ್ಟ್ ಮುಂತಾದ ಇ-ಕಾಮರ್ಸ್ ಪೋರ್ಟಲ್ಗಳ ಮತ್ತು ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ಗಳಲ್ಲಿ ದಲ್ಲಿ ವಿತರಕರ ಜಾಲಗಳ ಮೂಲಕ ಮಾರಾಟ ಮಾಡಲಾಗುತ್ತದೆ.
ಫ್ಲೈಟ್ರಾಪ್ (www.Flytrap.in), ಯುಎಸ್ ಮೂಲದ ಕಂಪನಿಯಾಗಿದ್ದು 1994 ರಿಂದ ಜಾಗತಿಕವಾಗಿ ಜಯಶಾಲಿಯಾಗಿದೆ. ಅನೇಕ ವರ್ಷಗಳ ಆಳವಾದ ಸಂಶೋಧನೆ, ವ್ಯಾಪಕ ಶೈಕ್ಷಣಿಕ ವ್ಯಾಪಾರೋದ್ಯಮ ಮತ್ತು ಮಾರಾಟಗಳ ಅನುಭವದ ನಂತರ 2009 ರಲ್ಲಿ ಫ್ಲೈಟ್ರಾಪ್ ಮೊದಲ ಬಾರಿಗೆ ಭಾರತಕ್ಕೆ ಬಂದಿತು. 2019 ರಲ್ಲಿ ಫ್ಲೈಟ್ರಾಪ್ ನ ಕಾರ್ಯಾಚರಣೆಗಳು ದೊಡ್ಡ ರೀತಿಯಲ್ಲಿ ಪ್ರಾರಂಭವಾಯಿತು. ಆರಂಭದಲ್ಲಿ ಕೋಳಿ ಮತ್ತು ಡೈರಿ ಫಾರ್ಮ್ಗಳ ಮೇಲೆ ಗಮನವನ್ನು ಕೇಂದ್ರೀಕರಿಸಿತು. ಕೋವಿಡ್ ಸಮಯದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿನ ಪ್ರಭಾವಿಗಳ ಮೂಲಕ ರೇಷ್ಮೆ ಕೃಷಿ ಫಾರ್ಮ್ಗಳಲ್ಲಿ ಹೊಸ ಗ್ರಾಹಕರ ಪರಿಚಯವಾಯಿತು ಮತ್ತು ಅಂದಿನಿಂದ ಹಿಂತಿರುಗಿ ನೋಡಿಲ್ಲ! ಈ ವಲಯಗಳಿಗೆ ನೊಣಗಳಿಂದ ದೊಡ್ಡ ಮುಕ್ತಿ ಸಿಕ್ಕಿದ್ದರಿಂದ ರೇಷ್ಮೆ ಕೃಷಿಯ ಉತ್ಪಾದನೆ ಹೆಚ್ಚಿ ಪರಿಸ್ಥಿತಿ ಉತ್ತಮವಾಗಿದೆ.”
ಪ್ರಸ್ತುತ, ಫ್ಲೈಟ್ರಾಪ್ ಬ್ಯಾಗ್ಗಳನ್ನು ನಮ್ಮದೇ ವೆಬ್ಸೈಟ್ – FlyTrap.in, ಅಮೇಜಾನ್, ಫ್ಲಿಪ್ ಕಾರ್ಟ್ ಮುಂತಾದ ಇ-ಕಾಮರ್ಸ್ ಪೋರ್ಟಲ್ಗಳ ಮತ್ತು ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ಗಳಲ್ಲಿ ದಲ್ಲಿ ವಿತರಕರ ಜಾಲಗಳ ಮೂಲಕ ಮಾರಾಟ ಮಾಡಲಾಗುತ್ತದೆ. ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಪದಾಧಿಕಾರಿಗಳು ಭಾಗಿ.