ಸಂಸ್ಥೆಯು ಕಳೆದ ಆರು ದಶಕಗಳಿಂದ ಬೆಂಗಳೂರಿನ ಗ್ರಾಹಕರಿಗೆ ತಾಜಾ ಹಣ್ಣು
ಮತ್ತು ತರಕಾರಿಗಳನ್ನು ಸರಬರಾಜು ಮಾಡುವ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ. ಆಯಾ ಋತುಮಾನಗಳಲ್ಲಿ ಲಭ್ಯವಾಗುವ ಹಣ್ಣು ಮತ್ತು ತರಕಾರಿಗಳಿಗೆ ಹಾಗೂ ಹಬ್ಬದ ವಿಶೇಷ ಮೇಳಗಳನ್ನು ಆಯೋಜಿಸುವ ಮೂಲಕ ರೈತರು ಬೆಳೆದ ಬೆಳೆಗಳಿಗೆ ಮಾರುಕಟ್ಟೆಯನ್ನು ಒದಗಿಸುವಲ್ಲಿ ನೆರವಾಗುತ್ತಿದೆ. ಪ್ರತಿ ವರ್ಷದಂತೆ ಈ ವರ್ಷವೂ ಸಹ ಹಾಪ್ ಕಾಮ್ಸ್ ಸಂಸ್ಥೆಯಿಂದ ದ್ರಾಕ್ಷಿ ಹಾಗೂ ಕಲ್ಲಂಗಡಿ ಮೇಳ-2024ನ್ನು ಹಡ್ರನ್ ವೃತ್ತದ ಬಳಿ ಇರುವ ಹಾಪ್ ಕಾಮ್ಸ್ ಮಾರಾಟ ಮಳಿಗೆಯಲ್ಲಿ ಆಯೋಜಿಸಲಾಗಿರುತ್ತದೆ. ಮೇಳದ ಅಂಗವಾಗಿ ಗ್ರಾಹಕರಿಗೆ ಶೇಕಡಾ 10 ರ ರಿಯಾಯಿತಿ ದರದಲ್ಲಿ ಫೆಬ್ರವರಿ 29 ರವರೆಗೆ ದ್ರಾಕ್ಷಿ ಮತ್ತು ಕಲ್ಲಂಗಡಿ ಹಣ್ಣುಗಳನ್ನು ಮಾರಾಟ ಮಾಡಲಾಗುವುದು. ಮೇಳದ ಅಂಗವಾಗಿ ದ್ರಾಕ್ಷಿ ಹಾಗೂ ಕಲ್ಲಂಗಡಿ ತಳಿಗಳ ಪ್ರದರ್ಶನವನ್ನು ಸಹ ಏರ್ಪಡಿಸಲಾಗಿದೆ.
ರಾಜ್ಯದಲ್ಲಿ ಒಟ್ಟು 36,117 ಹೆಕ್ಟರ್ ಪ್ರದೇಶದಲ್ಲಿ ವಿವಿಧ ತಳಿಯ ಬೆಳೆಯಲಾಗುತ್ತಿದೆ. ಅದರಲ್ಲಿ ಮುಖ್ಯವಾಗಿ 31,086 ಹೆಕ್ಟರ್ ಪ್ರದೇಶದಲ್ಲಿ ಬೀಜ ರಹಿತ ದ್ರಾಕ್ಷಿಯನ್ನು ಬೆಳೆಯಲಾಗುತ್ತಿದೆ. ರಾಜ್ಯದ ಒಟ್ಟು ದಾಕ್ಷಿ ಉತ್ಪನ್ನ 7,74,993 ಮೆಟ್ರಿಕ್ ಟನ್ನಗಳಾಗಿದೆ. ರಾಜ್ಯದಲ್ಲಿ ಮುಖ್ಯವಾಗಿ ದ್ರಾಕ್ಷಿಯನ್ನು ವಿಜಯಪುರ, ಬಾಗಲಕೋಟೆ, ಬೆಳಗಾವಿ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಂತರ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತಿದೆ.
ರಾಜ್ಯದಲ್ಲಿ ಕಲ್ಲಂಗಡಿ ಬೆಳೆಯನ್ನು 4.700 ಹೆಕ್ಟರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು ಒಟ್ಟು ಉತ್ಪನ್ನ 1,92,973 ಮೆಟ್ರಿಕ್ ಟನ್ಗಳಾಗಿರುತ್ತದೆ. ತುಮಕೂರು, ಚಿತ್ರದುರ್ಗ, ಕೋಲಾರ, ಚಾಮರಾಜನಗರ, ಬಾಗಲಕೋಟೆ, ಕೊಪ್ಪಳ ಜಿಲ್ಲೆಗಳಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಪ್ರಸ್ತುತ ಸಾಲಿನಲ್ಲಿ ಮೇಳದಲ್ಲಿ 500 ಮೆಟ್ರಿಕ್ ಟನ್ ದ್ರಾಕ್ಷಿ ಹಾಗೂ 900 ಮೆಟ್ರಿಕ್ ಟನ್ ಕಲ್ಲಂಗಡಿ ಹಣ್ಣು ಮಾರಾಟದ ಗುರಿ ಹೊಂದಿದೆ.
ದ್ರಾಕ್ಷಿ ಹಣ್ಣಿನ ಸೇವನೆಯಿಂದ ಆಗುವ ಲಾಭಗಳು
ದ್ರಾಕ್ಷಿ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ “ಸಿ” ಮತ್ತು ‘ಕೆ’ ಜೀವಸತ್ವಗಳು, ರಂಜಕ, ಕ್ಯಾಲ್ಲಿಯಂ, ಕಬ್ಬಿಣ ಮುಂತಾದ ಅಂಶಗಳನ್ನು ಹೊಂದಿದ್ದು ಹೃದಯದ ಆರೋಗ್ಯವನ್ನು ಹೆಚ್ಚಿಸುವಲ್ಲಿ ನೆರವಾಗುತ್ತದೆ.
ಬೆಂಗಳೂರು ನೀಲಿ, ಥಾಮಸನ್ ಸಿಡ್ಲೆಸ್, ಕೃಷ್ಣ ಶರದ್, ಸೋನಾಕಾ, ಸೂಪರ್ ಸೋನಾಕಾ, ತಾಸ -ಎ- ಗಣೇಶ್, ಇಂಡಿಯನ್ ರೆಡ್ ಗ್ಲೋಬ್, ಜಂಬೂ ಶರದ್, ಆಸ್ಟ್ರೇಲಿಯಾ ರೆಡ್ ಗ್ಲೋಬ್, ಪ್ಲೇಮ್ ಸೀಡ್ಲೆಸ್, ಶರದ್ ಸೀಡ್ಸ್.
ಕಲ್ಲಂಗಡಿ ಹಣ್ಣಿನ ಸೇವನೆಯಿಂದ ಆಗುವ ಲಾಭಗಳು
ಕಲ್ಲಂಗಡಿ ಹಣ್ಣನ್ನು ಸೇವಿಸುವುದರಿಂದ ದೇಹದಲ್ಲಿ ನೀರಿನಾಂಶವನ್ನು ಹೆಚ್ಚಿಸುವಲ್ಲಿ ಮತ್ತು ಚರ್ಮದ ಆರೋಗ್ಯವನ್ನು ಕಾಪಾಡುವಲ್ಲಿ ನೆರವಾಗುತ್ತದೆ ಹಾಗೂ ಹಣ್ಣಿನಲ್ಲಿ ‘ಸಿ’ ಮತ್ತು ‘ಎ’ ಜೀವಸತ್ವಗಳು ಹೇರಳವಾಗಿ ದೊರೆಯುತ್ತವೆ.
ಕಲ್ಲಂಗಡಿ ತಳಿಗಳು :- ಕಲ್ಲಂಗಡಿ ನಾಮದಾರಿ. ಕಿರಣ್ ಮತ್ತು ಹಳದಿ ತಿರುಳಿನ ಕಲ್ಲಂಗಡಿ ಬೆಂಗಳೂರಿನ ಮಹಾಜನತೆಯು ಈ ವಿಶೇಷ ಮೇಳದ ಪ್ರಯೋಜನವನ್ನು ಪಡೆಯಲು ವಿನಂತಿಸುತ್ತೇವೆ.