ಬೆಂಗಳೂರು: ರೂಫ್ ಕಾಲಮ್ ಫೌಂಡೇಶನ್’ (RCF) ಆಗಿ ತನ್ನ ಹೊಸ ಬ್ರಾಂಡ್ ನ ಸ್ಥಾನದೊಂದಿಗೆ ಹೋಮ್ ಬಿಲ್ಡರ್ಗಳ ಮೇಲೆ ಗಮನಕೇಂದ್ರೀಕರಣ ವರ್ಧಿಸಿದ ದಾಲ್ಮಿಯ ಸಿಮೆಂಟ್ನ ಬ್ರಾಂಡ್ ನ ರಾಯಭಾರಿಯಾಗಿ ಮಹಾನ್ ನಟ- ರಣವೀರ್ ಸಿಂಗ್ ಸೇರ್ಪಡೆಯಾದರೂ.
ಮನೆಯ ಅತಿಮುಖ್ಯ ಭಾಗದಲ್ಲಿ, ಅಂದರೆ, ರೂಫ್ ಕಾಲಮ್ ಫೌಂಡೇಶನ್ನಲ್ಲಿ ಸಿಮೆಂಟ್ನ ಸರಿಯಾದ ಬಳಕೆಯೊಂದಿಗೆ ಗ್ರಾಹಕರಿಗೆ ಮಾರ್ಗದರ್ಶನ ಹಾಗೂ ನೆರವು ನೀಡುವ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾ, ದಾಲ್ಮಿಯ ಸಿಮೆಂಟ್ ತನ್ನ ಹೊಸ ಪ್ರಚಾರ “RCF ನೊಂದಿಗೆ ತನ್ನ ಬ್ರಾಂಡ್ ಕೇಂದ್ರೀಕರಣದಲ್ಲಿ ರಾಚನಿಕ ವ್ಯತ್ಯಾಸಗಳ (ಟೆಕ್ಟಾನಿಕ್ ಶಿಫ್ಟ್) ಪರಿವರ್ತನೆ ಮಾಡುತ್ತಿದೆ. ಈ ಹೊಸ ಗ್ರಾಹಕ-ಕೇಂದ್ರಿತ ಸಂದೇಶವು, ಹೋಮ್ ಬಿಲ್ಡರ್ಸ್ ಹಾಗೂ ಕಂಟ್ರಾಕ್ಟರ್ಗಳಲ್ಲಿ, ಸರಿಯಾದ ಸಿಮೆಂಟ್ಅನ್ನು ಸರಿಯಾದ ರೀತಿಯಲ್ಲಿ ಬಳಸಿ, ತಮ್ಮ ಕನಸಿನ ಮನೆಗಳ ನಿರ್ಮಾಣ ಮಾಡಲು ಅತ್ಯುತ್ತಮ ನಿರ್ಮಾಣ ಪದ್ಧತಿಗಳನ್ನು ಅನುಸರಿಸುವುದರ ಕುರಿತು ಜಾಗೃತಿ ಉಂಟು ಮಾಡುವ ಗುರಿ ಹೊಂದಿದೆ.
ಈ ಯೋಜನೆಯ ಬಗ್ಗೆ ಮಾತನಾಡುತ್ತಾ, ಎಮ್.ಡಿ. ಮತ್ತು ಸಿಇ ಪುನೀತ್ ದಾಲ್ಮಿಯ, ಕಳೆದ ಎಂಟು ದಶಕಗಳಿಗಿಂತ ಹೆಚ್ಚಿನ ಕಾಲದಿಂದ ತೊಡಗುತ್ತಲಿರುವ ನಮ್ಮ ನಿದರ್ಶನೀಯ ಪಯಣದ ಅವಧಿಯಲ್ಲಿ, ದಾಲ್ಮಿಯ ಸಿಮೆಂಟ್, ಬೇರಿನಿಂದಲೂ ನಮ್ಮ ರಾಷ್ಟ ನಿರ್ಮಾಣದಲ್ಲಿ ಭುಜಕ್ಕೆ ಭುಜ ಕೊಟ್ಟು, ಐತಿಹಾಸಿಕ ರಾಷ್ಟ್ರೀಯ ಗುರುತುಗಳು ಮಾತ್ರವಲ್ಲದೆ ಲಕ್ಷಾಂತರ ಸಂತುಷ್ಟ ಮನೆಗಳ ಸೃಷ್ಟಿಗೂ ಕೊಡುಗೆ ಸಲ್ಲಿಸಿದೆ. ವ್ಯಕ್ತಿಗಳಾಗಿ ನಾವು ನಮ್ಮ ಮನೆಗಳನ್ನು ಪ್ರೀತಿಸುತ್ತೇವೆ ಮತ್ತು ನಮ್ಮ ಜೀವನದಲ್ಲಿ ಅದಕ್ಕೆ ಆಳವಾದ ಮೌಲ್ಯ ಹಾಗೂ ಸ್ಥಾನ ಇದೆ. ಹಾಗಾಗಿ, ಸಿಮೆಂಟ್ನ ಸರಿಯಾದ ಪ್ರಯೋಗ ಹಾಗೂ ತಾಂತ್ರಿಕ ನೈಪುಣ್ಯತೆಯೊಂದಿಗೆ ಅಂತಹ ಪೀಳಿಗೆಯಾಂತರ ಸಂಪತ್ತನ್ನು ನಿರ್ಮಾಣ ಮಾಡುವುದು, ರಚನಾತ್ಮಕ ವಿಶ್ವಸನೀಯತೆಯನ್ನು ಖಾತ್ರಿ ಪಡಿಸುವುದು ಮಾತ್ರವಲ್ಲದೆ ಜೀವನಪರ್ಯಂತದ ಹೂಡಿಕೆಯನ್ನೂ ಪ್ರತಿನಿಧಿಸುತ್ತದೆ.”ಎಂದು ಹೇಳಿದರು.
ನಮ್ಮ ಹೊಸ ಬ್ರಾಂಡ್ ಪ್ರಚಾರವು, ಕೇವಲ ಒಂದು ಸುಪ್ರಸಿದ್ಧ ಪರಂಪರೆಯನ್ನು ವೈಭವೀಕರಿಸುವುದು ಮಾತ್ರವಲ್ಲದೆ-ಗ್ರಾಹಕ ಕೇಂದ್ರೀಕರಣಕ್ಕೆ ಬದ್ಧತೆಯನ್ನೂ ಪ್ರದರ್ಶಿಸುತ್ತದೆ-ಕಾಳಜಿಯೊಂದಿಗೆ ಮನೆಯನ್ನು ಕಟ್ಟುವುದು ಎಂದರೆ ಅದನ್ನು ಪೀಳಿಗೆ ಪೀಳಿಗೆಗಳವರೆಗೂ ಇರುವಂತೆ ಕಟ್ಟುವುದು ಎಂಬ ಮೂಲ ಸಂದೇಶವನ್ನು ಅದು ಸಾರುತ್ತದೆ.” ಎಂದು ಅವರು ಹೇಳಿದರು.
ತಮ್ಮ ಸಹಯೋಗದ ಬಗ್ಗೆ ಮಾತನಾಡುತ್ತಾ, ಬಾಲಿವುಡ್ ನಟ ರಣವೀರ್ ಸಿಂಗ್ ಈ ರೀತಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು: “೮೦ಕ್ಕಿಂತಲೂ ಹೆಚ್ಚಿನ ವರ್ಷಗಳಿಂದ ನಿರ್ಮಾಣ ಕ್ಷೇತ್ರಕ್ಕೆ ಕೊಡುಗೆ ಸಲ್ಲಿಸುತ್ತಿರುವುದಕ್ಕಾಗಿ ನನಗೆ ಯಾವಾಗಲೂ ದಾಲ್ಮಿಯ ಸಿಮೆಂಟ್ ಬಗ್ಗೆ ಅಭಿಮಾನವಿತ್ತು. ಮನೆಯ ನಿರ್ಮಾಣದಲ್ಲಿ ರೂಫ್ ಕಾಲಮ್ ಮತ್ತು ಫೌಂಡೇಶನ್ನ ಪ್ರಮುಖ ಪ್ರಾಧಾನ್ಯತೆಯನ್ನು ಪ್ರಚಾರ ಮಾಡಲು ಸಂಸ್ಥೆಯೊಂದಿಗೆ ಸಹಭಾಗಿತ್ವ ಏರ್ಪಡಿಸಿಕೊಂಡಿರುವುದು ನನಗೆ ಗೌರವದ ವಿಷಯ. ಒಟ್ಟಾಗಿ, ಪ್ರತಿಯೊಂದು ನಿರ್ಮಾಣವೂ ದೀರ್ಘಕಾಲ ಇರುವುದನ್ನು ಖಾತರಿಪಡಿಸುವುದಕ್ಕೆ ಜನರು ಮಾಹಿತಿಯುಕ್ತ ಆಯ್ಕೆಗಳನ್ನು ಮಾಡಿಕೊಳ್ಳಲು ಅವರಲ್ಲಿ ಅರಿವು ಮೂಡಿಸಿ ಅವರನ್ನು ಸಬಲಗೊಳಿಸುವುದು ನಮ್ಮ ಗುರಿಯಾಗಿದೆ.”
ದಾಲ್ಮಿಯ ಸಿಮೆಂಟ್(ಭಾರತ್) ಲಿ.,ನ ಸಿಒಒ ಸಮೀರ್ ನಾಗ್ಪಾಲ್, ಗ್ರಾಹಕರು ತಮ್ಮ ಜೀವನದಲ್ಲಿ ಮಾಹಿತಿಯುಕ್ತ ಆಯ್ಕೆಗಳನ್ನು ಮಾಡಿಕೊಳ್ಳುವಂತೆ ಮಾಡುವಲ್ಲಿ ಬ್ರಾಂಡ್ ಪ್ರಮುಖ ಪಾತ್ರ ವಹಿಸಬೇಕು ಎಂದು ನಾವು ನಂಬುತ್ತೇವೆ. ಕಳೆದ ಹಲವಾರು ವರ್ಷಗಳಿಂದ ದಾಲ್ಮಿಯ ರೂಫ್ ಕಾಲಮ್ ಮತ್ತು ಫೌಂಡೇಶನ್ಗೆ ಅತಿ ಸೂಕ್ತವಾಗುವಂತಹ ಸಿಮೆಂಟ್ ರೆಸಿಪಿಯನ್ನು ಗರಿಷ್ಟಗೊಳಿಸುವ ಮಾಲೀಕತ್ವದ ತಾಂತ್ರಿಕ ಜ್ಞಾನಗಳನ್ನು ಅಭಿವೃದ್ಧಿ ಪಡಿಸುತ್ತಾ ಬಂದಿದೆ. ಮನೆಯ ರಚನೆಯಲ್ಲಿ ಅತಿಮುಖ್ಯವಾಗಿರುವ ಈ ಅಂಶಗಳು, ಅದರ ಬಲ ಮತ್ತು ದೀರ್ಘಬಾಳಿಕೆಗೆ ಕಾರಣವಾಗಿವೆ. RCFಗಾಗಿ ಸರಿಯಾದ ಸಿಮೆಂಟ್ ಒದಗಿಸುವುದರ ಜೊತೆಗೆ ನಾವು ಸರಿಯಾದ ರೀತಿಯಲ್ಲಿ ಸಿಮೆಂಟ್ ಬಳಸುವಲ್ಲಿ ಹೋಮ್ ಬಿಲರ್ಗಳು ಹಾಗೂ ಕಂಟ್ರಾಕ್ಟರ್ಗಳಿಗೆ ನೆರವು ಒದಗಿಸುವ ಪ್ರಬಲವಾದ ಸ್ಥಳದಲ್ಲಿರುವ ತಾಂತ್ರಿಕ ಕಾರ್ಯಪಡೆಯನ್ನು ನಾವು ಹೊಂದಿದ್ದೇವೆ. RCF ಪ್ರಚಾರವು, ಈ ಮೂಲ ಸಿದ್ಧಾಂತವನ್ನೇ ಮುನ್ನೆಲೆಗೆ ತರುತ್ತದೆ.” ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.