ಬೆಂಗಳೂರು:ಪ್ರಯಾಣಿಕರ ಅನುಕೂಲಕ್ಕಾಗಿ ಸರ್ಜಾಪುರ ಹೆಬ್ಬಾಳ ಸರ್ಜಾಪುರ ಕೆಂಪೇಗೌಡ ವಿಮಾನ ನಿಲ್ದಾಣ ಶಿವಾಜಿನಗರ ಬಸ್ ನಿಲ್ದಾಣದಿಂದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ವರೆಗೆ ನಗರ ಸಾರಿಗೆಯಿಂದ ಹವಾನಿಯಂತ್ರಿತ ಮತ್ತು ಸಾಮಾನ್ಯ ಸಾರಿಗೆ ಸೇವೆಗಳನ್ನು ಒದಗಿಸಲಾಗಿದೆ ಎಂದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ತಿಳಿಸಿದರು.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ, ಮಾರ್ಗ ಸಂಖ್ಯೆ 500-HS (ಸರ್ಜಾಪುರ – ಹೆಬ್ಬಾಳ), ಮಾರ್ಗ ಸಂಖ್ಯೆ 8D (ಸರ್ಜಾಪುರ – ಕೆಂಪೇಗೌಡ ವಿಮಾನ ನಿಲ್ದಾಣ) ಮತ್ತು ಮಾರ್ಗ ಸಂಖ್ಯೆ 368 (ಶಿವಾಜಿನಗರ ಬಸ್ ನಿಲ್ದಾಣ – ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ) ಹವಾನಿಯಂತ್ರಿತ ಮತ್ತು ಸಾಮಾನ್ಯ ಸಾರಿಗೆ ಸೇವೆಗಳನ್ನು ಒದಗಿಸಿ ಸರ್ಜಾಪುರ ಬಸ್ ನಿಲ್ದಾಣದ ಬಳಿ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಆನೇಕಲ್ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿ.ಶಿವಣ್ಣ, ಬೆಂ.ಮ.ಸಾ.ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ರಾಮಚಂದ್ರನ್.ಅರ್, ಭಾ.ಆ.ಸೇ., ನಿರ್ದೇಶಕರು (ಮಾತo) ರವರಾದ ಶಿಲ್ಪ ಎಂ, ಭಾ.ಆ.ಸೇ, ಸುನೀತಾ ಎಂ, ಅಧ್ಯಕ್ಷರು, ಸರ್ಜಾಪುರ ಗ್ರಾ.ಪಂ,ಶ್ರೀ ಎ ಸತೀಶ್ ಕುಮಾರ್, ಉಪಾಧ್ಯಕ್ಷರು, ಸರ್ಜಾಪುರ ಗ್ರಾ.ಪಂ, ಆನೇಕಲ್ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರು ಹಾಗೂ ಮಾಜಿ ಅಧ್ಯಕ್ಷರು, ಸದಸ್ಯರು, ಮಾಜಿ ಕಾಂಗ್ರೆಸ್ ಸದಸ್ಯರು ಮತ್ತು ಸಂಸ್ಥೆಗಳ ಹಿರಿಯ ಅಧಿಕಾರಿಗಳುಉಪಸ್ಥಿತರಿದ್ದರು.