ಬೆಂಗಳೂರು:ಮಾಜಿ ಶಾಸಕ ನೆ.ಲ.ನರೇಂದ್ರಬಾಬುರವರು ಹುಟ್ಟುಹಬ್ಬದ ಅಚರಣೆಯನ್ನು ಅಭಿಮಾನಿಗಳು, ಸ್ನೇಹಿತರು ಮತ್ತು ಪಕ್ಷದ ಕಾರ್ಯಕರ್ತರು ಅದ್ದೂರಿಯಾಗಿ ಅಚರಿಸಿದರು.
ಕೇಕ್ ಕತ್ತರಿಸಿ ಸಿಹಿ ವಿತರಿಸಿಲಾಯಿತು ನಂತರ ಇದೇ ಸಂದರ್ಭದಲ್ಲಿ ನೆ.ಲ.ನರೇಂದ್ರಬಾಬುರವರಿಗೆ ಸನ್ಮಾನಿಸಲಾಯಿತು. ಜನರ ಪ್ರೀತಿ ವಿಶ್ವಾಸದಿಂದ ಮಹಾನಗರ ಪಾಲಿಕೆ ಸದಸ್ಯನಾಗಿ ಮತ್ತು ರಾಜಾಜಿನಗರ ಮತ್ತು ಮಹಾಲಕ್ಷ್ಮಿಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕನಾಗಿ ಸೇವೆ ಮಾಡುವ ಸೌಭಾಗ್ಯ ನನ್ನದಾಗಿತ್ತು. ಬಿಜೆಪಿ ಪಕ್ಷದಲ್ಲಿ ಹಿಂದುಳಿದ ವರ್ಗದ ರಾಜ್ಯ ಘಟಕದ ಅಧ್ಯಕ್ಷನಾಗಿ ಸೇವೆ ಮಾಡುತ್ತಿದ್ದೇನೆ.
ಜನರ ಸಂಕಷ್ಟ ನಿವಾರಣೆ, ಜನರ ನಡುವೆ ಒಡನಾಡಿಯಾಗಿ ಸ್ನೇಹಿತನಾಗಿ ನನ್ನ ಸೇವೆ ನಿರಂತರ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದೇನೆ,ರಾಜಕೀಯ ನಿಂತ ನೀರಲ್ಲ, ಜನರು ಮತದಾರರ ಆಶೀರ್ವಾದ, ಸಹಕಾರ ಸದಾ ನೀಡಿ ಹಾರೈಸುತ್ತಿದ್ದಾರೆ ಎಂದರು.
ಪ್ರಧಾನಿ ನರೇಂದ್ರಮೋದಿರವರ 10ವರ್ಷದ ಆಡಳಿತದ ಪರಿಣಾಮವಾಗಿ ದೇಶ ಬಲಿಷ್ಠ ರಾಷ್ಟವಾಗಿ ಹೊರಹೊಮ್ಮಿದೆ.ಹಿಂದುಳಿದ ವರ್ಗಗಳು, ಧ್ವನಿ ಇಲ್ಲದ ಸಮಾಜದವರಿಗೆ ಧ್ವನಿಯಾಗಿ ಕೇಂದ್ರ ಸರ್ಕಾರದ ವಿಶ್ವಕರ್ಮ , ಉಜ್ವಲ, ಮುದ್ರ ಯೋಜನೆಗಳು ಆರ್ಥಿಕವಾಗಿ ಹಿಂದುಳಿದ ವರ್ಗದ ಕುಟುಂಬಗಳು ಆರ್ಥಿಕವಾಗಿ ಸಬಲರಾಗಲು ಕಾರಣವಾಗಿದೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ್ಯಂತ ಹಿಂದುಳಿದ ವರ್ಗ ಸಮುದಾಯದ ಸಂಘಟನೆ ಮಾಡಿ ರಾಜ್ಯದಲ್ಲಿ ಅತ್ಯಧಿಕ ಲೋಕಸಭಾ ಸ್ಥಾನ ಗೆಲಿಸುವಲ್ಲಿ ಶ್ರಮಿಸುವುದಾಗಿ ನೆ.ಲ.ನರೇಂದ್ರಬಾಬುರವರು ಹೇಳಿದರು.
ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ರಾಜೇಂದ್ರಕುಮಾರ್, ಶ್ರೀನಿವಾಸ್,ಮಹದೇವ್, ಮತ್ತು ಆನಿತಾ ನೆ.ಲ.ನರೇಂದ್ರಬಾಬು, ನೆ.ಲ.ಮಹೇಶ್, ಬಿ.ಎಂ.ಶ್ರೀನಿವಾಸ್, ಚನ್ನಕೇಶವ, ಜಯಸಿಂಹ,ಸುಧಾಕರ್, ರಾಘವೇಂದ್ರ ನಿಸರ್ಗ ಜಗದೀಶ್, ಸೋಸಲೆ ಸಿದ್ದರಾಜು, ಪರಿಸರ ರಾಮಕೃಷ್ಣ ರವರು ಪಾಲ್ಗೊಂಡಿದ್ದರು.