ಬೆಂಗಳೂರು: ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಈ ಭಾರಿ ಟಿಕೆ ನೀಡಬೇಕೆಂದು ಬಿಜೆಪಿ ಹೈಕಮಾಂಡ್ ಗೆ ಪಕ್ಷದ ನಿಷ್ಟಾವಂತ ಕಾರ್ಯಕರ್ತ ರಮೇಶ್ ಅವರು ಒತ್ತಾಯ ಮಾಡಿದರು.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಳೇ ಮೈಸೂರು ಭಾಗದಲ್ಲಿ ಭಾರತೀಯ ಜನತಾ ಪಕ್ಷವು ಕಳೆದ ವಿಧಾನಸಭಾ, ಚುನವಾಣೆಯಲ್ಲಿ ಮಾದಿಗ ಜನಾಂಗಕ್ಕೆ ಸೀಟುಗಳನ್ನು ಕೊಟ್ಟಿಲ್ಲ. ಪ್ರತಿ ಬಾರಿಯೂ ಅನ್ಯಾಯ ಮಾಡುತ್ತಲೇ ಬಂದಿದ್ದಾರೆ. ಎಡ ಸಮುದಾಯದವರನ್ನು ಕಡೆಗಣಿಸುತ್ತಿರುವುದು ಸರಿಯಾದ ನಡೆಯಲ್ಲ.
ಎಡಗೈ ಸಮುದಾಯಕ್ಕೆ ಸುಮಾರು 5-10 ಜಿಲ್ಲೆಗಳಲ್ಲಿ ಈ ರೀತಿ ಅನ್ಯಾಯವಾಗಿದೆ.ಸ್ವತಂತ್ರ ಬಂದಾಗಿನಿಂದ ಒಬ್ಬ ಮಾದಿಗನು ಸಂಸತ್ ಸದಸ್ಯನಾಗಿರುವುದಿಲ್ಲ. ಇದು ಹಳೇ ಮೈಸೂರು ಭಾಗಕ್ಕೆ ನಾಚಿಗೇಡಿನ ಸಂಗತಿಯಾಗಿದೆ.
ಭಾರತೀಯ ಜನತಾ ಪಕ್ಷದಲ್ಲಿ ರಾಜ್ಯ ಮಟ್ಟದಲ್ಲಿ ಮಾದಿಗ ಸಮಾಜದ ಒಬ್ಬ ಉಪಾಧ್ಯಕ್ಷನಾಗಲಿ ಅಥವಾ ಪ್ರಧಾನ ಕಾರ್ಯದಶಿಯಾಗಲೀ ಇಲ್ಲದಿರುವುದು ಈ ಸಮಾಜಕ್ಕೆ ಆಗುತ್ತಿರುವ ದೊಡ್ಡ ಅನ್ಯಾಯವಲ್ಲವೇ?
ಬಲಗೈ ಸಮಾಜದ ಸಹೋದರರು ಹಳೇ ಮೈಸೂರು ಭಾಗದಲ್ಲಿ, ಎಡಗೈ ಸಹೋದರರಿಗೂ ಶಾಸಕ ಸ್ಥಾನ ಸಿಗಬೇಕು. ಆಗ ಹಳೆಯ ಮೈಸೂರು ಭಾಗದಲ್ಲಿ ಹೊಲಯ ಮಾದಿಗ ಸಮಾಜದವರು ಒಂದಾಗಿ ಕೆಲಸ ಮಾಡಬಹುದು ಎನ್ನುವ ವಿಶ್ವಾಸ ಇದೆ.
ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಜನಾತ ಪಕ್ಷವು ಚಾಮರಾಜನಗರ ಲೋಕಸಭಾ ಮೀಸಲು ಕ್ಷೇತ್ರಕ್ಕೆ ಎಡಗೈ ಜನಾಂಗಕ್ಕೆ ಸೇರಿದ ರಾಜಕೀಯವಾಗಿ ನ್ಯಾಯ ಒದಗಿಸಬೇಕಾಗಿ ಒತ್ತಾಯಿಸುತ್ತೇನೆ. ಅಭ್ಯರ್ಥಿಯನ್ನು ನೇಮಕ ಮಾಡುವುದರ ಮುಖಾಂತರ ಮಾದಿಗ ಜನಾಂಗಕ್ಕೆ ನ್ಯಾಯ ನೀಡಬೇಕು ಎಂದು ತಿಳಿಸಿದರು.
ಬಿಜೆಪಿ ನಾಯಕರ ಗಮನಕ್ಕೆ ತಂದರು ಪ್ರಯೋಜನವಿಲ್ಲ
ಎಡಗೈ ಸಮುದಾಯಕ್ಕೆ ಟಿಕೆಟ್ ನೀಡುವ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಕೇಂದ್ರ ನಾಯಕರಿಗೂ ತಿಳಿಸಲಾಗಿದೆ, ಆದರೆ ನಮ್ಮ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲ, ನಾನು ಈಗ ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ಇದ್ದೇನೆ, ಟಿಕೆಟ್ ಕೊಡದಿದ್ದರೆ ಸ್ವತಂತ್ರ ಅಭ್ಯರ್ಥಿಯಾಗಿ ಹೋರಾಟ ಮಾಡುತ್ತೇನೆ ಎಂದರು.
ಗೋವಿಂದ ಕಾರಜೋಳ ಅಭಿವೃದ್ದಿ ಶೂನ್ಯ
ಮಾಜಿ ಮಂತ್ರಿಯಾಗಿರುವ ಗೋವಿಂದ ಕಾರಜೋಳ ಅವರನ್ನು ಎಡಗೈ ಬಲಗೈ ಸಮುದಾಯಗಳ ಎರಡಕ್ಕೂ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಆದರೆ ಯಾವ ಸಮುದಾಯಕ್ಕೆ ಏನು ಮಾಡಿದ್ದಾರೆ ಎಂಬುದನ್ನು ತೋರಿಸಲು ಆಗಲ್ಲ, ಅಧಿಕಾರ ದಾಹವಸ್ತೆ ಕೆಲಸದಲ್ಲಿ ಶೂನ್ಯ ಸಾಧನೆ. ಎಡಗೈ ಸಮುದಾಯದಲ್ಲಿ 1.50 ಲಕ್ಷ ಓಟು ಇದೆ, ಬಲಗೈ ಸಮುದಾಯಗಳಲ್ಲಿ 2 ಲಕ್ಷ ಇದೆ, ಅಷ್ಟೇ, ಏನು ಗೊತ್ತಾಗದ ಕಾರಜೋಳರನ್ನು ಅಧ್ಯಕ್ಷರನ್ನಾಗಿ ಮಾಡಿರುವುದು ಸಮುದಾಯಕ್ಕೆ ದೊಡ್ಡ ಪೆಟ್ಟು. ಕುಟುಂಬ ರಾಜಕಾರಣ ಮಾಡಿಕೊಂಡು ಬರುತ್ತಿದ್ದಾರೆ. ಇದೀಗ ಪುತ್ರನಿಗೆ ಅಧಿಕಾರಕ್ಕೆ ತರಲು ಮುಂದಾಗಿದ್ದಾರೆ.