ನವದೆಹಲಿ: ಉಪ್ಪಾರ ಸಮಾಜದ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನವದೆಹಲಿಯ 60 ಕಿಮೀ ದೂರದಲ್ಲಿರುವ ಲೋನಿ ಪಟ್ಟಣದ ವರೆಗೆ ಪಾದಯಾತ್ರೆ ಹಮ್ಮಿಕೊಳ್ಳುವ ಮೂಲಕ ಬೃಹತ್ ಸಮಾವೇಶ ಮಾಡಲಾಯಿತು.
ರಾಷ್ಟ ಮಟ್ಟದ ಭಗೀರಥ ಜನ ಕಲ್ಯಾಣ ರಥಯಾತ್ರಾ 29-ಫೆಬ್ರವರಿ 2024 ರಂದು ನವ ದೆಹಲಿಇಂದ 41 km ದೂರದಲ್ಲಿರುವ ಗಾಜಿಯಬಾದ್ ಜಿಲ್ಲಾ ಕೇಂದ್ರದಿಂದ 25 km ದೂರದಲ್ಲಿರುವ ಲೋನಿ ಪಟ್ಟಣದಲ್ಲಿ ಬೃಹತ್ ಸಮಾವೇಶ ನೆರೆವೇರಿತು.
ಉಪ್ಪಾರ ಸಮಾಜದ ಜ್ವಲಂತ ಸಮಸ್ಯೆಗಳಾದ SC/ST ಮೀಸಲಾತಿ ಪಡೆಯುವ, ವಿಚಾರ ಆ ಸಮಾವೇಶದಲ್ಲಿ ರಾಷ್ಟ್ರಮಟ್ಟದಲ್ಲಿ ಕೇಂದ್ರ ಸರ್ಕಾರ ಪ್ರತಿನಿದಿಸುವ ಯಾವ ನಾಯಕರಿಗೂ ಹಾಕ್ಕೋತ್ತಾಯ ಮಾಡುವ ಉದ್ದೇಶದ ಕಾರ್ಯ ಆಗಲಿಲ್ಲ ಅನ್ನೋದೇ ಬೇಸರ ಸಂಗತಿ.
ಸಮುದಾಯದವರು ವಿವಿಧ ರಾಜ್ಯಗಳ ಭೇಟಿಮಾಡಿ ಅಲ್ಲಿ ಅದ್ದೂರಿ ಯಾತ್ರೆ ಆಚರಿಸಿಕೊಂಡು ಕೊನೆಗೆ ಒಂದು ತಾಲೂಕ ಮಟ್ಟದ ಕಾರ್ಯಕ್ರಮ ಸಹ ಮೀರಿಸದೆ ಹೋಯಿತು. ಅಂದಿನ ರಾಷ್ಟ್ರ ಮಟ್ಟದ ಕಾರ್ಯಕ್ರಮ ಇದು ರಾಷ್ಟಮಟ್ಟದಲ್ಲಿ ನಮ್ಮ ಸಮಾಜ ತಲೆ ತಗ್ಗಿಸುವ ಕಾರ್ಯ ಹಾಗೋಯ್ತು ಎನ್ನುವುದೇ ಬೇಸರದ ಸಂಗತಿ.