ಬೆಂಗಳೂರು/ಉತ್ತರ ಪ್ರದೇಶ: ಉಪ್ಪಾರ ಸಮಾಜದ ವಿಧಾನ ಪರಿಷತ್ ಸದಸ್ಯರಾದ ದಾರಾಸಿಂಗ್ ಚೌಹಾಣ್ ಅವರು ಉತ್ತರ ಪ್ರದೇಶ ಸರ್ಕಾರದ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಇವರಿಗೆ ಅಭಿನಂದನೆ ಗಳನ್ನು ಜಿಲ್ಲಾ ಉಪ್ಪಾರ ಸಮಾಜದ ಜಿಲ್ಲಾಧ್ಯಕ್ಷ ಎಂ ಜಯಕುಮಾರ್ ಅವರು ತಿಳಿಸಿದರು.
ಚಾಮರಾಜನಗರ ಜಿಲ್ಲೆ ಉಪ್ಪಾರ ಸಮಾಜದ ಹಿರಿಯರಾದ ದಾರಾ ಸಿಂಗ್ ಚೌಹಾಣ್ ಅವರು 2017 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸೇರುವ ಮೊದಲು ಬಹುಜನ ಸಮಾಜ ಪಕ್ಷದಲ್ಲಿದ್ದರು. ಅದಾದ ಬಳಿಕ 2022 ರ ಚುನಾವಣೆಗೆ ಮೊದಲು ಎಸ್ಪಿಗೆ ಸೇರಿದರು. ಬಳಿಕ ಬಿಜೆಪಿಗೆ ಮರಳಿದ್ದರು. ಸದ್ಯ , ಪೂರ್ವ ಉತ್ತರಪ್ರದೇಶದಲ್ಲಿ ಉಪ್ಪಾರ ಸಮುದಾಯದ ಪ್ರಮುಖ ನಾಯಕರಾಗಿದ್ದಾರೆ.
2022 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ SP ಅಭ್ಯರ್ಥಿಯಾಗಿ ಚೌಹಾಣ್ ಘೋಸಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 2017 ಮತ್ತು 2022 ರ ನಡುವೆ ಯೋಗಿ ಸರ್ಕಾರದಲ್ಲಿ ಸಚಿವರಾಗಿದ್ದರು. ಈಗ ವಿಧಾನಪರಿಷತ್ ಸದಸ್ಯರಾಗಿದ್ದು ಮತ್ತೇ ಯೋಗಿ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ. ದಾರಾಸಿಂಗ್ ಚೌಹಾಣ್ ಅವರಿಗೆ ಅಭಿನಂದನೆಗಳು ಹಾಗೂ ಶುಭಹಾರೈಕೆಗಳು.