ಬೆಂಗಳೂರು: ಶಿವೋಹಂ ಶಿವ ದೇವಾಲಯದಲ್ಲಿ ಲಕ್ಷಾಂತರ ಭಕ್ತರು ಮಹಾ ಶಿವರಾತ್ರಿಯನ್ನು ಮುಂಜಾನೆಯಿಂದಲೇ ಸಂಭ್ರಮ ಸಡಗರದಿಂದ ಆಚರಿಸಿದರು.
ಶಿವ ಮತ್ತು ಪಾರ್ವತಿ ದೇವಿಯ ವಿವಾಹವನ್ನು ಆಚರಿಸುವ ಹಿಂದೂ ಹಬ್ಬವಾದ ಮಹಾ ಶಿವರಾತ್ರಿಯನ್ನು ಬೆಂಗಳೂರಿನ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಶಿವೋಹಂ ಶಿವ ದೇವಾಲಯದಲ್ಲಿ ವೈಭವದಿಂದ ಆಚರಿಸಲಾಯಿತು. 65-ಅಡಿ ಎತ್ತರದ ಶಿವನ ವಿಗ್ರಹವನ್ನು ಕಣ್ಣುತುಂಬಿಕೊಳ್ಳಲು ದೇವಾಲಯದಲ್ಲಿ ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸುತ್ತಿದ್ದಾರೆ.
AiR-Atman in Ravi, ದೇವಾಲಯದ ಸಂಸ್ಥಾಪಕರು ಮತ್ತು ಅವರ ತಂಡವು ವಿಶೇಷವಾಗಿ ಶಿವರಾತ್ರಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ನಂತರ ಮಾನತ್ನಾಡಿದ ಅವರು, ಶಿವರಾತ್ರಿ ಹಬ್ಬವು ‘ಇದು ಅತ್ಯಂತ ಪವಿತ್ರ ಹಬ್ಬವಾಗಿದೆ ಮತ್ತು ಈ ವರ್ಷದ ವಿಶೇಷವೆಂದರೆ “ದೇವರ ಸಾಕ್ಷಾತ್ಕಾರದ” ಬಗ್ಗೆ ಕೇಂದ್ರೀಕರಿಸಲಾಗಿದೆ, ದೇವರನ್ನು ಹೇಗೆ ಅರಿತುಕೊಳ್ಳುವುದು? ನಾವು ಭಕ್ತಿಯನ್ನು ಮೀರಿ ದೇವರನ್ನು ಹುಡುಕಬೇಕು, ದೇವರಿಗಾಗಿ ಹಾತೊರೆಯಬೇಕು ಮತ್ತು ದೇವರನ್ನು ಉತ್ಸಾಹದಿಂದ ಪ್ರೀತಿಸಬೇಕು. ದೇವರನ್ನು ಅರಿತುಕೊಳ್ಳುವ ಮಾರ್ಗವೆಂದರೆ ಆತ್ಮಸಾಕ್ಷಾತ್ಕಾರ. ನಮ್ಮ ಆಧ್ಯಾತ್ಮಿಕ ಪ್ರಯಾಣದಲ್ಲಿ, ಮೊದಲು, ನಾವು ಯಾರು ಎಂಬ ಸತ್ಯವನ್ನು ಅರಿತುಕೊಳ್ಳುತ್ತೇವೆಯೋ, ನಮ್ಮ ಹೃದಯದ ದೇವಾಲಯದಲ್ಲಿ ದೇವರನ್ನು ಅರಿತುಕೊಳ್ಳಲು ವಿಕಸನಗೊಳ್ಳುತ್ತೇವೆ. ದೇವರು ಎಲ್ಲೆಲ್ಲೂ ಇದ್ದಾನೆ ಮತ್ತು ಎಲ್ಲದರಲ್ಲೂ ಇದ್ದಾನೆ ಎಂಬುದು ಸತ್ಯ.
65 ಅಡಿ ಎತ್ತರದ ಶಿವನ ಪ್ರತಿಮೆಯು ನಗರದ ಅತ್ಯಂತ ಎತ್ತರದ ವಿಗ್ರಹವಾಗಿದೆ. ದೇವಾಲಯವು 32-ಅಡಿ ಗಣೇಶನ ಪ್ರತಿಮೆ, ಸುಂದರವಾಗಿ ಮರುಸೃಷ್ಟಿಸಲಾದ ‘ಅಮರನಾಥ ಯಾತ್ರೆ’, ‘ಹನ್ನೆರಡು ಜ್ಯೋತಿರ್ಲಿಂಗಗಳ ಯಾತ್ರೆ’ ಮತ್ತು ಅಭಿಷೇಕ’ ಮುಂತಾದ ಅನೇಕ ಆಕರ್ಷಣೆಗಳನ್ನು ಹೊಂದಿದೆ.
ಭಗವಾನ್ ಶಿವನ ದರ್ಶನದ ಅನುಭವವನ್ನು ಭಕ್ತರು ಪಡೆಯಲಿ ಎಂದು ಸಂಘಟನಾ ತಂಡವು ಶ್ರಮಿಸಿತ್ತು. ಈ ಪ್ರಯತ್ನಗಳು ಭಕ್ತರಿಗೆ ಅಪೂರ್ವವಾದ, ಅತಿವಾಸ್ತವಿಕವಾದ, ದೈವಿಕ ಅನುಭವಕ್ಕೆ ಸಾಕ್ಷಿಯಾಗಲು ಕಾರಣವಾಯಿತು. ಶಿವರಾತ್ರಿ – ಪ್ರತಿ ಎರಡು ಗಂಟೆಗಳಿಗೊಮ್ಮೆ ಶಿವ ಆರತಿ, ವಿಶೇಷ ಬೆಳಕು ಮತ್ತು ಧ್ವನಿ ಪ್ರದರ್ಶನ, ಮಂತ್ರಗಳ ನಿರಂತರ ಪಠಣ, ರಾತ್ರಿಯಿಡೀ ಜಾಗರಣೆಯ ಜೊತೆಗೆ ಭಜನೆ ಮುಂತಾದ ಆಚರಣೆಗಳನ್ನು ಒಳಗೊಂಡಿದ್ದು ಭಕ್ತರನ್ನು ದೈವಿಕ ಪ್ರೀತಿಯಲ್ಲಿ ಮುಳುಗಿಸಿತ್ತು.
ಎಲ್ಲ ಭಕ್ತರು ನಾವು ತುಂಬಾ ಕೃತಜ್ಞರಾಗಿರುತ್ತೇವೆ, ಏಕೆಂದರೆ ಅವರು ಸರ್ವೋಚ್ಚ ದೇವರ ಮೇಲಿನ ಭಕ್ತಿಯನ್ನು ತೋರಿಸಲು ದೇವಾಲಯಕ್ಕೆ ಭೇಟಿ ನೀಡಿದ್ದಲ್ಲದೆ ಉದಾರವಾಗಿ ದೇಣಿಗೆ ನೀಡಿದ್ದಾರೆ. ದೇವಾಲಯದಲ್ಲಿ ಸಂಗ್ರಹವಾದ ಹಣವನ್ನು ದೇವರ ಕೆಲಸವನ್ನು ಮಾಡಲು ಬಳಸಲಾಗುವುದು – AiR ಮಾನವೀಯ ಮನೆಗಳಲ್ಲಿ ಆಶ್ರಯ ನೀಡಲಾಗಿರುವ ನಿರ್ಗತಿಕರಿಗೆ, ಬಡವರಿಗೆ ಮತ್ತು ನಿರಾಶ್ರಿತರಿಗೆ ಸೇವೆ ಸಲ್ಲಿಸಲು ಉಪಯೋಗಿಸಲಾಗುತ್ತದೆ.