ನವದೆಹಲಿ:ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ರಾಷ್ಟ್ರೀಯ ಡೇಟಾಬೇಸ್ಅನ್ನು ಉದ್ಘಾಟಿಸಿದರು. ಸಹಕಾರಿ ಆಂದೋಲನದೊಂದಿಗೆ ಸಂಬಂಧ ಹೊಂದಿರುವ ಶಾ, ‘ಸಹಕಾರಿ ಕ್ಷೇತ್ರದ ವಿಸ್ತರಣೆ, ಅಭಿವೃದ್ಧಿ ಮತ್ತು ವಿತರಣೆಯನ್ನು ಡೇಟಾಬೇಸ್ ಮೂಲಕ ಖಚಿತಪಡಿಸಿಕೊಳ್ಳಲಾಗುವುದು’ ಎಂದು ಹೇಳಿದರು.
ಸ್ವಾತಂತ್ರ್ಯ ಬಂದು ದಶಕಗಳೇ ಕಳೆದರೂ ಪ್ರತ್ಯೇಕ ಸಹಕಾರ ಸಚಿವಾಲಯದ ರಚನೆಯ ಬೇಡಿಕೆಯಡೆಗೆ ಯಾವ ಸರಕಾರವೂ ಗಮನ ಹರಿಸಲಿಲ್ಲ. ಇದರಿಂದ ಸಹಕಾರಿ ಕ್ಷೇತ್ರದ ಸ್ಥಿತಿ ಹದಗೆಡುತ್ತಲಿತ್ತು. 2021 ರಲ್ಲಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೂರದರ್ಶನದ ಭಾಷಣದಲ್ಲಿ, ಪ್ರತ್ಯೇಕ ಸಹಕಾರ ಸಚಿವಾಲಯವನ್ನು ಸ್ಥಾಪಿಸುವ ಕಾರ್ಯಕ್ಕೆ ಮುನ್ನುಡಿ ಬರೆದು, ಅದರ ಹೊಣೆಯನ್ನು ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿಯ ವರಿಷ್ಠ ನಾಯಕ ಅಮಿತ್ ಶಾರವರಿಗೆ ವಹಿಸಿದರು. ತಮ್ಮ ಆರಂಭದ ದಿನಗಳಿಂದಲೂ ಸಹಕಾರಿ ಕ್ಷೇತ್ರದೊಂದಿಗೆ ಒಡನಾಟ ಹೊಂದಿರುವ ಶಾ, ಕೆಲವೇ ವರ್ಷಗಳಲ್ಲಿ ಸರ್ವತೋಮುಖ ಪ್ರಯತ್ನಗಳ ಮೂಲಕ ಸಹಕಾರಿ ಸಂಘಗಳನ್ನು ಸಬಲೀಕರಣಗೊಳಿಸುವಲ್ಲಿ ಯಶಸ್ವಿಯಾದರು.
ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವ ಮತ್ತು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರ ನುರಿತ ಮಾರ್ಗದರ್ಶನದಲ್ಲಿ, ಒಂದು ಕಾಲದಲ್ಲಿ ತೆವುಳುತ್ತಾ ಸಾಗುತ್ತಿದ್ದ ಸಹಕಾರಿ ಸಂಘಗಳು ಇಂದು ಚೇತನದೊಂದಿಗೆ ಎದ್ದು ನಿಂತಿವೆ. ದೇಶವು ಈಗ ಕೇಂದ್ರೀಕೃತವಾಗಿದೆ, ಹಾಗೇ ಗಣಕೀಕರಣಗೊಂಡಿದೆ. ದೇಶಾದ್ಯಂತ ಪ್ರಾಥಮಿಕ ಕೃಷಿ ಪತ್ತಿನ ಸಂಘಗಳನ್ನು (PACS) ಬಹುಕ್ರಿಯಾತ್ಮಕವಾಗಿ ಮಾಡಲಾಗುತ್ತಿದೆ. ‘ಅಂತ್ಯೋದಯ’ (ಉನ್ನತಿ) ರಾಜಕೀಯಕ್ಕೆ ಹೆಸರುವಾಸಿಯಾಗಿರುವ ಅಮಿತ್ ಶಾ ಅವರು 2027 ರ ವೇಳೆಗೆ ದೇಶದ ಪ್ರತಿ ಪಂಚಾಯತ್ಗೆ ಒಂದು PACS ಇರಲಿದೆ ಎಂದು ಪದೇ ಪದೇ ಪ್ರತಿಪಾದಿಸುತ್ತಾ ಬಂದಿದ್ದಾರೆ.
ಈ ಹೇಳಿಕೆಯು ನಿಜವಾಗುವ ಸಮಯ ಬಂದಿದೆ, ಕಾರಣ, ರಾಷ್ಟ್ರೀಯ ದತ್ತಸಂಚಯವನ್ನು (ಡೇಟಾಬೇಸ್) ರಚಿಸಲಾಗಿದೆ, ಇದು ದೇಶದ ಸಹಕಾರ ಸಂಘಗಳ ಸಂಖ್ಯೆಯಲ್ಲಿನ ಅಂತರವನ್ನು ಗುರುತಿಸಲು ಸಹಾಯ ಮಾಡುತ್ತದೆ ಮತ್ತು ಸಹಕಾರಿಗಳ ವಿಸ್ತರಣೆಗೆ ಸಹಾಯಕವಾಗಲಿದೆ. ರಾಷ್ಟ್ರೀಯ ಡೇಟಾಬೇಸ್ ಮೂಲಕ, ಸಹಕಾರಿಗಳಿಗೆ ಸಂಬಂಧಿಸಿದ ಮಾಹಿತಿಯು ಒಂದು ಕ್ಲಿಕ್ನಲ್ಲಿ ಲಭ್ಯವಾಗುತ್ತದೆ. ರಾಷ್ಟ್ರೀಯ ಡೇಟಾಬೇಸ್ ನೀತಿ ನಿರೂಪಕರು, ಸಂಶೋಧಕರು ಮತ್ತು ಮಧ್ಯಸ್ಥಗಾರರಿಗೆ ಅಮೂಲ್ಯವಾದ ಸಂಪನ್ಮೂಲವಾಗಿದ್ದು, ಇದು ಅಭಿವೃದ್ಧಿಯ ದಿಕ್ಕಿನೆಡೆಗೆ ದಿಕ್ಸೂಚಿಯಾಗಿ ಕಾರ್ಯನಿರ್ವಹಿಸುತ್ತದೆ. ಈ ಡೇಟಾಬೇಸ್ ಮಾಹಿತಿಯನ್ನು ಸುಧಾರಿತ ತಂತ್ರಜ್ಞಾನದೊಂದಿಗೆ ಅಭಿವೃದ್ಧಿಪಡಿಸಲಾಗಿದೆ ಮತ್ತು ಭಾರತದಲ್ಲಿನ ಸಹಕಾರ ಚಟುವಟಿಕೆಗಳ ಪ್ರತಿಯೊಂದು ಅಂಶಗಳ ಮಾಹಿತಿಯನ್ನು ಹೊಂದಿದೆ. ಡೇಟಾಬೇಸ್ ಪೋರ್ಟಲ್ ಮೂಲಕ, ಸಣ್ಣ ಸಹಕಾರಿ ಸಂಸ್ಥೆಗಳು ತಮ್ಮ ವಿಸ್ತರಣೆಗೆ ಮಾರ್ಗದರ್ಶನವನ್ನು ಪಡೆಯಬಹುದು. ಡೇಟಾಬೇಸ್ PACS ನಿಂದ APEX ಗೆ, ಹಳ್ಳಿಯಿಂದ ನಗರಕ್ಕೆ, ಮಂಡಿಯಿಂದ ಜಾಗತಿಕ ಮಾರುಕಟ್ಟೆಗೆ ಮತ್ತು ರಾಜ್ಯದಿಂದ ಅಂತರರಾಷ್ಟ್ರೀಯ ಡೇಟಾಬೇಸ್ಗಳಿಗೆ ಮಾಹಿತಿಯನ್ನು ಸಂಪರ್ಕಿಸುವ ಸಾಮರ್ಥ್ಯವನ್ನು ಹೊಂದಿದೆ.
ಭೌಗೋಳಿಕ ಅಸಮತೋಲನ, ವಲಯವಾರು ಅಸಮತೋಲನ, ಸಮುದಾಯ ಅಸಮತೋಲನ ಮತ್ತು ಕ್ರಿಯಾತ್ಮಕ ಅಸಮತೋಲನ – ಈ ಎಲ್ಲಾ ಸಮಸ್ಯೆಗಳಿಗೆ ಉಪಕರಣಗಳನ್ನು ಬಳಸಿಕೊಂಡು ಈ ಡೇಟಾಬೇಸ್ನಲ್ಲಿ ಸೂಕ್ಷ್ಮವಾಗಿ ಪರಿಹಾರ ತಿಳಿಸಲಾಗಿದೆ. ಸಹಕಾರಿ ಕ್ಷೇತ್ರದ ಉತ್ಕರ್ಷವನ್ನು ನೋಡಿದರೆ, ಮೋದಿಯವರ ಸಹಕಾರಿ ಸಂಸ್ಥೆಗಳು ಡಿಜಿಟಲ್ ಮೂಲಕ ಏಳಿಗೆ ಮತ್ತು ಅಭಿವೃದ್ಧಿ ತಂದು, ಡೇಟಾಬೇಸ್ ಮೂಲಕ ಲಕ್ಷ್ಯವನ್ನು ಸಾಧಿಸಲಿವೆ. ಪ್ರಸ್ತುತವಾಗಿ, 8 ಲಕ್ಷಕ್ಕೂ ಹೆಚ್ಚು ಸಹಕಾರಿ ಸಂಘಗಳು ನೋಂದಾಯಿಸಲ್ಪಟ್ಟಿವೆ ಮತ್ತು 30 ಕೋಟಿಗೂ ಹೆಚ್ಚು ನಾಗರಿಕರು ಈ ಸಂಘಗಳೊಂದಿಗೆ ಸಂಪರ್ಕ ಹೊಂದಿದ್ದಾರೆ.
ನವ ಭಾರತ ನಿರ್ಮಾಣದಲ್ಲಿ ತೊಡಗಿರುವ ಮೋದಿಯವರು ಮತ್ತು ಅಮಿತ್ ಶಾ ಭಾರತದ ರಾಜಕೀಯಕ್ಕೆ ನವ ದಿಶೆಯನ್ನು ನೀಡಿದ್ದಾರೆ. ಶಾ ಅವರು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಮತ್ತು ಅವುಗಳನ್ನು ಕಾರ್ಯರೂಪಕ್ಕೆ ತರುವುದಕ್ಕೆ ಹೆಸರುವಾಸಿಯಾಗಿದ್ದಾರೆ. ಈ ಕಾರಣದಿಂದಲೇ ಸಹಕಾರ ಸಚಿವಾಲಯವನ್ನು ಸ್ಥಾಪಿಸಲಾಯಿತು, ತತ್ಪರಿಣಾಮವಾಗಿ ಇಂದು ಸಹಕಾರಿ ಕ್ಷೇತ್ರವೂ ಅಭಿವೃದ್ಧಿ ಹೊಸ ಹೊಸ ಆಯಾಮಗಳನ್ನು ಮುಟ್ಟುತ್ತಿದೆ.