ದಾವಣಗೆರೆ: ಒಬ್ಬ ರೈತನ ಮಗ…ರೈತರ ಸಂಕಷ್ಟಕ್ಕೆ ಸದಾ ಮರಗುವ ಜೀವ..ಇಂತಹ ವ್ಯಕ್ತಿಯೊಬ್ಬರು ಇಫ್ಕೊ ಆರ್ ಜಿಬಿ ಸದಸ್ಯರಾಗಿದ್ದಾರೆ. ಈ ಮೂಲಕ ದಾವಣಗೆರೆಗೆ ಉನ್ನತ ಸ್ಥಾನ ದೊರಕಿದೆ.
ಹುಬ್ಬಳ್ಳಿಯ ಪಾಲಿಕೆ ಸಭಾಂಗಣದಲ್ಲಿ ಚುನಾವಣೆ ನಡೆದಿದ್ದು, ಅತಿ ಹೆಚ್ಚುಮತಗಳ ಅಂತರದಿಂದ ಗೆದ್ದು ಬೀಗಿದರು. ಹಾಗಾದ್ರೆ ಅವರು ಯಾರು ಎಂಬ ಕುತುಹೂಲ ನಿಮಗೆ ಇದ್ದೇ ಇರುತ್ತದೆ.ದಾವಣಗೆರೆ ಎಚ್.ಬಿ.ಭೂಮೇಶ್ವರಪ್ಪ ದಾವಣಗೆರೆ-ಧಾರವಾಡದ ಸ್ಫರ್ಧಿಯಾಗಿದ್ದು, ಬಹು ಮತಗಳ ಅಂತರದಿಂದ ಎದುರಾಳಿಯನ್ನು ಉಡೀಸ್ ಮಾಡಿದ್ದು, ಇಪ್ಕೋ ಆರ್ ಜಿಬಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ದಾವಣಗೆರೆ-ಧಾರವಾಡದಿಂದ ಎ.ಎಮ್.ಉಮೇಶ್, ಎಚ್.ಬಿ.ಭೂಮೇಶ್ವರಪ್ಪ, ,ಕಲ್ಲನಗೌಡ ಎಂಬ ಮೂರು ಸ್ಪರ್ಧಾಳುಗಳು ಅಖಾಡಕ್ಕೆ ಇಳಿದಿದ್ದರು. ಇವರಲ್ಲಿ ಎ.ಎಮ್.ಉಮೇಶ್, ಎಚ್.ಬಿ.ಭೂಮೇಶ್ವರಪ್ಪ ರ ನಡುವೆ ಭಾರೀ ಪೈಪೋಟಿ ಏರ್ಪಟ್ಟಿತ್ತು. ಮತದಾನದ ವೇಳೆ ಮತದಾರ ಯಾರಿಗೆ ಸ್ವಸ್ತಿಕ್ ಚಿಹ್ನೆ ಒತ್ತುತ್ತಾನೆ ಎಂದು ಕುತುಹೂಲದಿಂದ ಸ್ಪರ್ಧಾಳುಗಳು ಕಾಯುತ್ತಿದ್ದರು. ಇನ್ನೂ ಎಣಿಕೆ ವೇಳೆ ಎಚ್.ಬಿ.ಭೂಮೇಶ್ವರಪ್ಪ ಮೊದಲಿನಿಂದಲೂ ಲೀಡ್ ಕೊಡುತ್ತಾ ಹೋದರು. ಅಂತಿಮವಾಗಿ ಭೂಮೇಶಪ್ಪ ಜಯಶಾಲಿಯಾಗಿ ಹೊರ ಹೊಮ್ಮಿದರು.
ಎಷ್ಟು ಮತದಾರರು
ಇಫ್ಕೊ ಆರ್ ಜಿಬಿ ಸದಸ್ಯರಿಗೆ ಮತ ಹಾಕಲು 46 ಜನರಿಗೆ ಹಕ್ಕು ನೀಡಲಾಗಿತ್ತು. ಇದರಲ್ಲಿ 42 ಮತದಾರರು ತಮ್ಮ ಹಕ್ಕು ಚಲಾಯಿಸಿದರು. ಇನ್ನುಳಿದ ನಾಲ್ಕು ಮತದಾರರು ಗೈರಾಗಿದ್ದರು. ಆರಂಭದಲ್ಲಿ ಮತದಾನ ಮಂದವಾದರೂ, ಬಳಿಕ ಚುರುಕುಗೊಂಡಿತು. ಮಧ್ಯಾಹ್ನ 12.30 ರಿಂದ ಮತದಾನ ಶುರುವಾಗಿತ್ತು. ಮಧ್ಯಾಹ್ನ ಎರಡು ಮೂವತ್ತರ ತನಕ ಮತದಾನ ಮಾಡಲು ಅವಕಾಶ ಕೊಡಲಾಗಿತ್ತು. ಬಿಸಿಲಿದ್ದರು, ಸಹ ಮತದಾರರು ತಮಗೆ ಬೇಕಾದವರನ್ನು ಆಯ್ಕೆ ಮಾಡಿದರು.
ದಾವಣಗೆರೆ ಜಿಲ್ಲೆಯಿಂದ ಹೊರಟ ಮತದಾರರು
ಇಪ್ಕೋ ಚುನಾವಣೆಗೆ ಮತ ಹಾಕಲು ವಾಹನ, ಊಟದ ವ್ಯವಸ್ಥೆ ಮಾಡಲಾಗಿತ್ತು, ದಾವಣಗೆರೆಯಿಂದ 16, ಜಗಳೂರಿನಿಂದ 2, ಹರಿಹರದಿಂದ 6, ಹರಪನಹಳ್ಳಿ 4, ಚನ್ನಗಿರಿಯಿಂದ 3 ಮತದಾರರು ಹುಬ್ಬಳ್ಳಿಗೆ ಹೋಗಿ ಮತದಾನ ಮಾಡಿದರು.
ಯಾರ್ಯಾರು ಎಷ್ಟು ಮತಗಳನ್ನು ಪಡೆದರು
ಇಫ್ಕೊ ಆರ್ ಜಿಬಿ ಸದಸ್ಯತ್ವ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎಚ್.ಬಿ.ಭೂಮೇಶ್ವರಪ್ಪ 26 ಮತಗಳನ್ನು ಪಡೆದು ಜಯಶಾಲಿಯಾದರು. ಎದುರಾಳಿ ಉಮೇಶ್ 7 ಮತಗಳನ್ನು ಪಡೆದರೆ ಕಲ್ಲನಗೌಡ ಕೇವಲ 1 ಮತ ಪಡೆಯುಬ ಮೂಲಕ ಪರಾಜಿತರಾದರು. ಚುನಾವಣಾಧಿಕಾರಿಯಾಗಿ ಇಪ್ಕೋ ಫೀಲ್ಡ್ ಆಫೀಸರ್ ಗಣೇಶ್ ಕಾರ್ಯನಿರ್ವಹಿಸಿದರು.
ಹಾರ ಹಾಕಿ ಸಂಭ್ರಮಾಚಾರಣೆ
ಆರ್ ಜಿಬಿ ಸದಸ್ಯತ್ವ ಸ್ಥಾನಕ್ಕೆ ಭೂಮೇಶ್ವರಪ್ಪ ಆಯ್ಕೆಯಾದ ಬಳಿಕ ಬೆಂಬಲಿಗರು ಹಾರ ಹಾಕಿ, ಸಿಹಿ ತಿನಿಸಿ ಸಂಭ್ರಮಾಚಾರಣೆ ಮಾಡಿದರು. ಅಲ್ಲದೇ ಹೆಗಲ ಮೇಲೆ ಕೂರಿಸಿಕೊಂಡು ಕುಣಿದು ಕುಪ್ಪಳಿಸಿದರು.
ಎಸ್.ಎಸ್.ಮಲ್ಲಿಕಾರ್ಜುನ್ ಸೇರಿದಂತೆ ಶಾಸಕರಿಗೆ ಅಭಿನಂದನೆ ಸಲ್ಲಿಸಿದ ಭೂಮೇಶ್ವರಪ್ಪಆರ್ ಜಿಬಿ ಸದಸ್ಯತ್ವ ಸ್ಥಾನಕ್ಕೆ ಭೂಮೇಶ್ವರಪ್ಪ ನಿಂತಿದ್ದು, ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಶಾಮನೂರು ಶಿವಶಂಕರಪ್ಪ, ಶಿವಗಂಗಾ ಬಸವರಾಜ್, ಕೆ.ಎಸ್.ಬಸವಂತಪ್ಪ, ಶಾಂತನಗೌಡ, ದೇವೇಂದ್ರಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಮುದೇಗೌಡ್ರು ಗಿರೀಶ್, ಬಿ.ಕರಿಬಸಪ್ಪ, ಬಿ.ಶೇಖರಪ್ಪ, ಕಾಂಗ್ರೆಸ್ ನಾಯಕ ಬಿ.ಕೆ.ಪರಶುರಾಮ್, ಜಿ.ಡಿ.ಗುರುಸ್ವಾಮಿ, ದಾವಣಗೆರೆ ವಿಎಸ್ ಎಸ್ ಎನ್ ಅಧ್ಯಕ್ಷರಾದ ಕೆ.ಎಚ್ ರುದ್ರಪ್ಪ,
ದಾವಣಗೆರೆ ಜಿಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನೌಕರರ ಒಕ್ಕೂಟದ ಅಧ್ಯಕ್ಷ ಜಿ.ಎನ್. ಮಹೇಶ್ವರಪ್ಪ, ನಿರ್ದೇಶಕರಾದ ಬಿ.ಎಸ್.ಶಿವಕುಮಾರ, ಎಚ್.ಕೆ.ದೇವರಾಜ್, ಎಂ.ಶೇಖರಪ್ಪ, ಎ.ಶಿವಕುಮಾರ್ ಪರೋಕ್ಷವಾಗಿ ಕೆಲಸ ಮಾಡಿದ್ದಕ್ಕೆ ಅಭ್ಯರ್ಥಿ ಭೂಮೇಶ್ವರಪ್ಪ ಕೃತಜ್ಞತೆ ಅರ್ಪಿಸಿದರು.
ಭೂಮೇಶಪ್ಪ ಹೇಳಿದ್ದೇನು?
ನಾನು ರೈತನ ಮಗ ರೈತನ ಏಳ್ಗೆಗಾಗಿ ದುಡಿಯುತ್ತೇನೆ. ಅವರಿಗೆ ಸಕಾಲದಲ್ಲಿ ಗೊಬ್ಬರ ಕೊಡಿಸಲು ಸಹಾಯ ಮಾಡುತ್ತೇನೆ. ಯಾವುದೇ ಸಮಯದಲ್ಲಿ ರೈತರೊಂದಿಗೆ ಇರುವೆ. ನನ್ನನ್ನು ಬಹುಮತಗಳ ಅಂತರದಿಂದ ಆಯ್ಕೆ ಮಾಡಿದ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೆನೆ ಅಂದ್ರು. ಒಟ್ಟಾರೆ ಇಪ್ಕೋ ಸಂಸ್ಥೆಗೆ ದೇವನಗರಿಯಿಂದ ಅದರಲ್ಲೂ ಬಹುಮತದಿಂದ ಗೆದ್ದಿರೋದು ವಿಶೇಷ.