ಬೆಂಗಳೂರು: ಲೋಕಸಭಾ ಚುನಾವಣೆಗೆ ಬಹುಜನ ಸಮಾಜ ಪಾರ್ಟಿ ರಾಜ್ಯದ 28 ಕ್ಷೇತ್ರಗಳ ಪೈಕಿ 25ಅಭ್ಯರ್ಥಿಗಳ ಪಟ್ಟಿಯನ್ನು ಪಕ್ಷದ ಕಚೇರಿಯಲ್ಲಿ ಮಾರಸಂದ್ರ ಮುನಿಯಪ್ಪ ತಿಳಿಸಿದರು.
ಬೆಂಗಳೂರಿನ ಬಾಂಬುಬಜರ್ ರಸ್ತೆಯಲ್ಲಿರುವ ಬಿಎಸ್ಪಿ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ, 25ಅಭ್ಯರ್ಥಿಗಳ ಪಟ್ಟಿಯನ್ನು ಪಕ್ಷದ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಬಿಡುಗಡೆ ಮಾಡಿ ಮಾತನಾಡಿದ ಅವರು, ಮು೦ಬರುವ ಲೋಕಸಭಾ ಚುನಾವಣೆಯಲ್ಲಿ ಭಾರತ ದೇಶದ ಮಾನ್ಯತೆ ಪಡೆದ ರಾಷ್ಟೀಯ ಪಕ್ಷದಲ್ಲಿ 3ನೇ ಅತೀ ದೊಡ್ಡ ಪಕ್ಷವಾದ ಬಹುಜನ ಸಮಾಜ ಪಾರ್ಟಿಯ ರಾಷ್ಟೀಯ ಅಧ್ಯಕ್ಷರಾದಂತಹ ಬೆಹನ್ ಕುಮಾರಿ ಮಾಯವತಿಯವರ ಆದೇಶದಂತೆ ಕರ್ನಾಟಕ ರಾಜ್ಯದ 28 ಕ್ಷೇತ್ರಗಳ ಪೈಕಿ ಮೊದಲನೇ ಪರ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ರಾಜ್ಯದಲ್ಲಿ 3 ಜಿಲ್ಲೆಗಳನ್ನು ಹೊರತುಪಡಿಸಿ 25 ಜಿಲ್ಲೆಗಳ ಎಲ್ಲಾ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಸೂಕ್ತ ಅಭ್ಯರ್ಥಿಗಳನ್ನು ಅಕ್ಕ ಮಾಯಾವತಿಯವರೇ ಅಂತಿಮಗೊಳಿಸಿದ್ದಾರೆ. ನಮ್ಮ ಪಕ್ಷದಲ್ಲಿ ಯಾವುದೇ ಹಣ, ಮಧ್ಯ, ಹುಡುಗೊರೆ ನೀಡದೆ, ಯಾವುದೇ ಪಕ್ಷದ ಪ್ರಣಾಳಿಕೆಯನ್ನು ನೀಡದೆ, ಸಂವಿಧಾನವೇ ನಮ್ಮ ಪ್ರಣಾಳಿಕೆಯಾಗಿದೆ ಎಂದು ತಿಳಿಸಿದರು.
ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಲ್ಲಿರುವ ಹಾಗೆ ಸಾರ್ವಜನಿಕರಿಗೆ ಯಾವುದೇ ಆಮಿಷಗಳನ್ನು ಒದ್ದುವುದಿಲ್ಲ, ಜನರು ಪಕ್ಷ ಒಪ್ಪಿ,ಕೆಲಸ ಕಾರ್ಯಗಳನ್ನು ಗಮನದಲ್ಲಿ ಇಟ್ಟುಕೊಂಡು ಮತ ನೀಡಬೇಕೆಂದು ಕೇಳಿಕೊಂಡರು. ರಾಷ್ಟ್ರೀಯ ಪಕ್ಷಗಳು ಹಿಂದಿನಿಂದಲೂ, ಈಗಲೂ ವಾಮ ಮಾರ್ಘದಲ್ಲಿ ಚುನಾವಣೆಯನ್ನು ಗೆಲ್ಲುತ್ತಿರುವುದು ನೋಡುತಿದ್ದೇವೆ, ಅವೆಲ್ಲವನ್ನೂ ಬಿಟ್ಟು ಚುನಾವಣೆಯಲ್ಲಿ ಗೆಲುವನ್ನು ಪಡೆಯಲಿ ಎಂದು ಸವಾಲಾಕಿದರು. ಇನ್ನು ಇದೇವೇಳೆ ಈ ಭಾರಿಯ ಚುನಾವಣೆಯಲ್ಲಿ 2ರಿಂದ 3 ಸೀಟುಗಳನ್ನು ಗೆಲ್ಲುತ್ತೇವೆ ಎಂದು ಮಾರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಬಹುಜನ ಸಮಾಜ ಪಾರ್ಟಿಯ ರಾಜ್ಯ ಖಜಾಂಚಿ ಡಾ. ಚಿನ್ನಪ್ಪ ವೈ.ಚಿಕ್ಕಹಾಗಡೆ ಮಾತನಾಡಿ, ಬೆಂಗಳೂರು ಗ್ರಾಮಾಂತರದಿಂದ ಅದರಲ್ಲೂ ಆನೇಕಲ್ ಕ್ಷೇತ್ರದಿಂದ ಸ್ಪರ್ಧೆ ಮಾಡಲಾಗಿದೆ, ನನಗೆ ಉತ್ತಮ ಸ್ಪಂದನೆ ಸಿಕ್ಕಿದೆ, ಹೀಗಾಗಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಜನರ ಕಷ್ಟ, ನೋವು, ನಲಿವು ತಿಳಿಯುವ, ಜನರ ಸೇವೆ ಮಾಡುವ ಅವಕಾಶ ಸಿಕ್ಕಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಎಸ್ಪಿ ಪಕ್ಷದ ಉತ್ತರ, ದಕ್ಷಿಣ ಜಿಲ್ಲಾಧ್ಯಕ್ಷರು, ಟಿಕೆಟ್ ಸಿಕ್ಕಿರುವ ಅಭ್ಯರ್ಥಿಗಳು, ಪಕ್ಷದ ಮುಖಂಡರು ಉಪಸ್ಥಿತರಿದ್ದರು.