ಬೆಂಗಳೂರು: ಆಹಾರ ಪದಾರ್ಥಗಳ ಉತ್ಪನ್ನಗಳಲ್ಲಿ ಮುಂಚೂಣಿಯಲ್ಲಿರುವ MTR ಸಂಸ್ಥೆ ಇದೀಗ 100 ವರ್ಷಗಳ ಶತಮಾನವನ್ನು ವಿಶೇಷವಾಗಿ ಆಚರಿಸಿಕೊಂಡಿತು.
ಬೆಂಗಳೂರಿನ ಹೊಸೂರು ಮುಖ್ಯ ರಸ್ತೆಯಲ್ಲಿರುವ ದೊಡ್ಡ ಬೊಮ್ಮಸಂದ್ರದಲ್ಲಿ MTR ಸಂಸ್ಥೆ 100 ವರ್ಷಗಳ ಪೂರೈಸಿದ ಹಿನ್ನೆಲೆ 120 ಅಡಿ ವಿಶ್ವದ ಅತೀ ಉದ್ದದ ದೋಸೆ ನಿರ್ಮಿಸಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್” ದಾಖಲೆಯೊಂದಿಗೆ ನೂರನೇ ವರ್ಷವನ್ನು ವಿಶೇಷವಾಗಿ ಆಚರಿಸಿಕೊಂಡಿತು.
MTR ಕ್ಯುಸಿನ್ ಸೆಂಟರ್ ಆಫ್ ಎಕ್ಸೆಲೈನ್ಸ್ ಮಾರ್ಗದರ್ಶನದಲ್ಲಿ ಅನುಭವಿ ತಜ್ಞರು, ಉದಯೋನ್ಮುಖ ಪಾಕ ಶಾಲೆಯ ಪ್ರತಿಭೆಗಳನ್ನು ಪಾಲ್ಗೊಂಡಿರುವ 75 ಕ್ಕಿಂತ ಹೆಚ್ಚು ಬಾಣಸಿಗರ ತಂಡವು ವಿಶ್ವ ಗಿನ್ನಿಸ್ ದಾಖಲೆಗೆ ಸೇರಿಸುವ ಮೂಲಕ ಈ ಹಿಂದೆ ಇದ್ದ ದಾಖಲೆಯನ್ನು ಮುರಿಯುವ ಪ್ರಯತ್ನವನ್ನು ಎತ್ತಿ ತೋರಿಸಿದೆ.
MTR ಸಂಸ್ಥೆಗೆ 100 ವರ್ಷ ಸಂದಿರುವ ಬಗ್ಗೆ ಸಂಸ್ಥೆಯ ಸಿಇಒ ಸುನೈ ಭಾಸಿನ್ ಮಾತನಾಡಿ, ಒಂದು ಶತಮಾನದಲ್ಲಿ ಮಾವಳ್ಳಿ ಟಿಫನ್ ರೂಮ್ ಚಿಕ್ಕದಾಗಿ ಇದೀಗ 100 ವರ್ಷ ಪೂರೈಸಿರುವ ಸುಲಭವಾದ ಮಾತಲ್ಲ, 100 ಅಡಿ ಉದ್ದದ ದೋಸೆ ಮಾಡಲು ಪ್ರಯತ್ನ ಮಾಡುತ್ತಿದ್ದೇವೆ, ಆದರೆ ಅದನ್ನು ಮೀರಿ ಇದೀಗ 120 ಅಡಿ ಉದ್ದದ ದೋಸೆ ನಿರ್ಮಾಣ ಮಾಡಿ ದೊಡ್ಡ ಹೆಸರು ಮಾಡಿದೆ. ದೋಸೆ ಎಂಟಿಆರ್ ಪರಂಪರೆಯ ಭಾಗವಾಗಿದ್ದು, MTR ನ ಪ್ರೀತಿಯ ಉತ್ಪನ್ನಗಳಲ್ಲಿ ಒಂದಾಗಿದೆ. ದಕ್ಷಿಣ ಭಾರದಲ್ಲಿ ಹೆಚ್ಚು ಹೆಸರು ಮಾಡಿರುವ ಖಾದ್ಯವಾಗಿದೆ. ಗ್ರಾಹಕರು ನೆಚ್ಚಿನ ಖಾದ್ಯದೊಂದಿಗೆ ತಮ್ಮ ಬಾಂಧವ್ಯವನ್ನು ಹೆಚ್ಚಿಸಿಕೊಂಡಿದೆ ಎಂದು ಸಂಸ್ಥೆಯ 100 ವರ್ಷಗಳ ಸಾಧನೆಯನ್ನು ಮೆಲುಕು ಹಾಕಿದರು.
ಲೋರ್ಮನ್ ಕಿಚನ್ ಎಕ್ಸಿಫ್ರೆಂಟ್ ಪ್ರೈ. ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಚಂದ್ರ ಮೌಳಿ ಮಾತನಾಡಿ, ವಿಶ್ವದ ಅತೀ ಉದ್ದವಾದ ದೋಸೆಯನ್ನು ವಿಶೇಷವಾಗಿ ನಿರ್ಮಿಸಿದ ಹೆಗ್ಗಳಿಕೆ ಎಂಟಿಆರ್ ಪರಂಪರೆಯನ್ನು ತಿಳಿಸುತ್ತದೆ, ದೋಸೆಯನ್ನು ಅತಿ ಉದ್ದದ ಇಂಡಕ್ಷನ್ ಸೇವ್ನಲ್ಲಿ ಬೇಯಿಸಲಾಗುತ್ತಿದೆ. ಇದು ಲೋರ್ಮನ್ ನಿರ್ಮಿಸಿದ ಅತೀ ಉದ್ದದ ಸ್ಟೌವ್ ಆಗಿದೆ. ಇಂಡಕ್ಷನ್ ಅಡುಗೆ ಉಪಕರಣಗಳು ಹೆಚ್ಚು ಪರಿಣಾಮಕಾರಿ, ಸಮರ್ಥನೀಯ ಮತ್ತು ಪರಿಸರ ಸ್ನೇಹಿಯಾಗಿದ್ದು, ಬಾಣಸಿಗರಿಗೆ ಸುರಕ್ಷಿತ ಪರಿಸರ ವ್ಯವಸ್ಥೆಯನ್ನು ನಿರ್ಮಿಸುತ್ತದೆ. ಈ ಐತಿಹಾಸಿಕ ಕ್ಷಣದಲ್ಲಿ ಎಂಟಿಆರ್ ನೊಂದಿಗೆ ಪಾಲುದಾರರಾಗಲು ನಾವು ಹೆಮ್ಮೆಪಡುತ್ತೇವೆ ಎಂದರು.
120 ಅಡಿ ಉದ್ದದ ದೋಸೆಯನ್ನು MTR ಸಂಸ್ಥೆ ಕೇವಲ ಸಿಬ್ಬಂದಿಗಳಲ್ಲದೆ ಶಾಲಾ ಮಕ್ಕಳು, ಸ್ಥಳೀಯರೊಂದಿಗೆ, ಸಮುದಾಯಗಳ ಸದಸ್ಯರೊಂದಿಗೆ ಮಾಹಿತಿ, ಅನುಭವನ್ನು ಹಂಚಿಕೊಂಡಿದ್ದಾರೆ.
120 ಅಡಿ ಉದ್ದದ ದೋಸೆ ನಿರ್ಮಾಣ ಮಾಡಿದ ಹಿನ್ನೆಲೆ 70ಕ್ಕಿಂತ ಹೆಚ್ಚಿನ ಬಾಣಸಿಗರು ಕುಣಿದು ಕುಪ್ಪಳಿಸಿದ್ದು, ಸಂತೋಷಕ್ಕೆ ಪಾರವೇ ಇಲ್ಲದಂತೆ ಆಗಿತ್ತು.ಕಾರ್ಯಕ್ರಮದಲ್ಲಿ ಎಂಟಿಆರ್ ಸಂಸ್ಥೆಯ ಕಾರ್ಯದರ್ಶಿ,ಮಾರುಕಟ್ಟೆ ವಿಭಾಗದ ಮುಖ್ಯಸ್ಥರು, ವ್ಯವಸ್ಥಾಪಕರು, ನೂರಾರು ಜನ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.