ಬೆಂಗಳೂರು: ರಾಜ್ಯದಲ್ಲಿ ತಾಪಾಮಾನ ಹೆಚ್ಚಾಗಿದ್ದು ಬಿಸಿಲಬೇಗೆಗೆ ರಾಜಧಾನಿ ಜನ ತತ್ತರಿಸಿದ್ದು 34 ಡಿಗ್ರಿಗಿಂತ ಹೆಚ್ಚಾಗಿದ್ದು ನ್ಯಾಯಾಲಯಗಳಲ್ಲಿ ವೃತ್ತಿ ನಿರತರಾಗಿರುವ ವಕೀಲರು ವಸ್ತ್ರ ಸಂಹಿತೆಯನ್ನು ಬದಲಾಯಿಸುವಂತೆ ಹೈ ಕೋರ್ಟ್ ನ ರಿಜಿಸ್ಟ್ರಾರ ಜನರಲ್ ಮತ್ತು ಕರ್ನಾಟಕ ರಾಜ್ಯ ವಕೀಲರ ಪರಿಷತ್ ಗೆ ವಕೀಲರಾದ ಜಗದೀಶ್ ಜಿ ಕುಂಬಾರ್, ಆತ್ಮ ವಿ ಹಿರೇಮಠ್, ತ್ರಿವಿಕ್ರಮ್ ಎಸ್ ರವರು ಮನವಿ ಸಲ್ಲಿಸಿದರು.
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಬೇಸಿಗೆ ಜಳ ಹೆಚ್ಚಾಗಿರುವ ಹಿನ್ನೆಲೆ ವಕೀಲರು ಕೋರ್ಟ್ ವಸ್ತ್ರದ ಸಮೇತ ಕೆಲಸ ಮಾಡಲು ಕಷ್ಟವಾಗುತ್ತಿರುವ ಹಿನ್ನೆಲೆ ವಸ್ತ್ರ ಸಂಹಿತೆಗೆ ಬೇಸಿಗೆ ಮುಗಿಯುವ ತನಕ ರಿಲೀಫ್ ನೀಡಬೇಕೆಂದು ವಕೀಲರ ಕೂಟದಿಂದ ಮನವಿ ಸಲ್ಲಿಸಿದರು.
ಬೇಸಿಗೆ ಅವಧಿಯು ಮುಗಿಯುವತನಕ ವಕೀಲರ ಹಿತಾದೃಷ್ಟಿಯಿಂದ ವಸ್ತ್ರ ಸಂಹಿತೆಗೆ ಸಡಲಿಕೆ ನೀಡುವಂತೆ ಹೈ ಕೋರ್ಟಿನ ರಿಜಿಸ್ಟ್ರಾರ ಜನರಲ್ ಮತ್ತು ಕರ್ನಾಟಕ ರಾಜ್ಯ ವಕೀಲರ ಪರಿಷತ್ ಗೆ ವಕೀಲರಾದ ಜಗದೀಶ್ ಜಿ ಕುಂಬಾರ್, ಆತ್ಮ ವಿ ಹಿರೇಮಠ್, ತ್ರಿವಿಕ್ರಮ್ ಎಸ್ ರವರು ಮನವಿ ಸಲ್ಲಿಸಿದರು,
ಮನವಿ ಸ್ವೀಕರಿಸಿದ ಪ್ರಾಧಿಕಾರವು ಕೂಡಲೇ ಸೂಕ್ತ ಕ್ರಮ ಜರುಗಿಸುವುದಾಗಿ ತಿಳಿಸಿದರು!