ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ಹಾಗೂ ಅರೆ ಸರ್ಕಾರಿ ಪರಿಶಿಷ್ಟ ಜಾತಿ, ಪಂಗಡದ ನೌಕರರ ಶ್ರೇಯೋಭಿವೃದ್ಧಿಗೆ ನಿರಂತರವಾಗಿ ಶ್ರಮಿಸಲಾಗುತ್ತದೆ ಎಂದು ಸಂಘದ ರಾಜ್ಯಾಧ್ಯಕ್ಷರಾದ ಮಹೇಶ್ ಸಿ ಹುಬಳಿ ತಿಳಿಸಿದರು.
ಬೆಂಗಳೂರಿನ ಗಾಂಧಿನಗರದ ಶಿರೂರು ಪಾರ್ಕ್ ನಲ್ಲಿರುವ ಗುಂಡೂರಾವ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಹಾಗು ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲಾ ಶಾಖೆಗಳ ಉದ್ಘಾಟನೆ, ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಸ್ಸಿ, ಎಸ್ಟಿ ನೌಕರರ ಸಂಘವು ಮೂಲತಃ ಕಲಬುರಗಿಯಲ್ಲಿ ಹಲವು ವರ್ಷಗಳ ಹಿಂದಿನಿಂದಲೂ ಕಲಬುರಗಿ ಜಿಲ್ಲಾ ಮಟ್ಟದಲ್ಲಿ ಇತ್ತು, ಆದರೆ ಈಗ ದೂರದ ಉತ್ತರದ ಕರ್ನಾಟಕದಿಂದ ರಾಜ್ಯ ರಾಜಧಾನಿ ಬೆಂಗಳೂರಿಗೆ ಬಂದು ಎಸ್ಸಿ, ಎಸ್ಟಿ ನೌಕರರ ಕಷ್ಟ ಕಾರ್ಪಣ್ಯಗಳನ್ನು ಅವಲೋಕಿಸಲು ಸದಾ ಎಚ್ಚರಿಕೆಯಿಂದ ಕಾರ್ಯಪ್ರವೃತ್ತರನ್ನಾಗಿ ಮಾಡುತ್ತಿದ್ದಾರೆ ಎಂದರು.
ಎಸ್ಸಿ, ಎಸ್ಟಿ ನೌಕರರ ಸಂಸ್ಥೆಗಳು ಹಲವು ವರ್ಷ ಗಳಿಂದ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಲೇ ಬಂದಿದ್ದಾರೆ, ಆದರೆ ಇಂತಹ ಸಂಘ ರಾಜ್ಯದಲ್ಲಿ ಬೇರೆ ಎಲ್ಲೋ ಇಲ್ಲ, ನೌಕರರ ಬೇಡಿಕೆ, ಸಮಸ್ಯೆಗಳನ್ನು ಬಗೆಹರಿಸುವ ಒಟ್ಟಿನಲ್ಲಿ ರಾಜ್ಯದಲ್ಲಿ ಸಂಚರಿಸಿ ಅಹವಾಲುಗಳನ್ನು ಸ್ವೀಕರಿಸಲಾಗುತ್ತದೆ ಎಂದರು.
ಸಂಘದ ರಾಜ್ಯ ಗೌರವ ಅಧ್ಯಕ್ಷರಾದ ಅಂಬಣ್ಣ ಬಿ ಮಹಾ ಗಾಂವಕರ್ ಮಾತನಾಡಿ, ರಾಜ್ಯದಲ್ಲಿ ಸರ್ಕಾರ, ಅರೆ ಸರ್ಕಾರಿ ಇಲಾಖೆಗಳು ಸುಮಾರ 80 ಕ್ಕಿಂತ ಹೆಚ್ಚು ಬರುತ್ತವೆ. ಎಲ್ಲಾ ವಿಭಾಗದವರು ಇದರ ಅಡಿಯಲ್ಲಿ ಬರುತ್ತಾರೆ, ಮಾಹಿತಿ ಕೊರತೆಯಿಂದ ಆದರೆ ಯಾರಿಗೆ ಸರಿಯಾಗಿ ಗೊತ್ತಿಲ್ಲ. ಸಂಘ ಹುಟ್ಟಿದ್ದು ಚಿಕ್ಕದಾಗಿ ಕಲಬುರ್ಗಿಯಲ್ಲಿ ಅದನ್ನು ಈಗ ಬೆಂಗಳೂರು ನಗರಕ್ಕೆ ಪಾದಾರ್ಪಣೆ ಮಾಡಿದ್ದಾರೆ. ರಾಜ್ಯದಲ್ಲಿ ನೌಕರರ ಸಂಘದ ಸೇವೆ ಸಮರ್ಪಕವಾಗಿ ಬಳಕೆಯಾಗಲಿ ಎಂದು ತಿಳಿಸಿದರು.
ಅಂಬೇಡ್ಕರ್ ರಚಿಸಿರುವ ಭಾರತದ ಸಂವಿಧಾನವನ್ನು ಬದಲಾಯಿಸುವ ಮಾತುಗಳನ್ನು ಹೇಳುತ್ತಿದ್ದಾರೆ, ಅಷ್ಟು ಸುಲಭವಾಗಿ ಮಾತಲ್ಲ, ಕೇವಲ ಎಸ್ಸಿ, ಎಸ್ಟಿ ಅವರಿಗೆ ಮಾತ್ರವಲ್ಲ, ಎಲ್ಲರಿಗೂ ಬೇಕಾಗಿದೆ. ಕೇವಲ ಬಾಯಿಂದ ಮಾತ್ರ ಹೇಳಲು ಸಾಧ್ಯ, ಅದನ್ನು ಬಿಟ್ಟು ಬುದ್ದಿಯಿಂದ ಹೇಳಿ ಎಂದರು. ಸಂವಿಧಾನದಿಂದ ಲೇ ಪ್ರಜಾಪ್ರಭುತ್ವ, ನಾವು ನೀವು ಉಳಿದಿರೋದು, ಇಲ್ಲದಿದ್ದರೆ, ಅಸಮರ್ಥರಾಗಿ ಸರ್ಕಾರಿ ಕೆಲ್ಸ ದಲ್ಲಿ ಇಲ್ಲದೆ ಯಾವುದೋ ಮೂಲೆಯಲ್ಲಿ ಇರಬೇಕಾದ ಅನಿವಾರ್ಯತೆ ಇರುತಿತ್ತು ಎನ್ನುವ ಮೂಲಕ ದಲಿತರಿಗೆ ಅಂಬೇಡ್ಕರ್ ನೀಡಿದ ಹಕ್ಕುಗಳ ಬಗ್ಗೆ ಪ್ರತಿಪಾದಿಸಿದರು.
ಉಪನ್ಯಾಸಕರಾದ ಲಕ್ಷಣ ಚಂದ್ರಪ್ಪ ಬಕ್ಕೈ ಅವರು ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್, ಮತ್ತು ಸರ್ಕಾರಿ ಅಧಿಕಾರಿಗಳು, ನೌಕರರು ಪಾತ್ರದ ಕುರಿತು ವಿಚಾರ ಸಂಕಿರಣ ನಡೆಸಿದರು. ಅಂಬೇಡ್ಕರ್ ಹಾಕಿಕೊಟ್ಟ ಹಾದಿಯಲ್ಲಿ ಯಾರು ನಡೆಯುತ್ತಿದ್ದರೆ. ಸಂವಿಧಾನ, ಅಂಬೇಡ್ಕರ್ ಮೂಲಕ ನೌಕರರ, ಅಧಿಕಾರಿಗಳ ನಡುವಿನ ಪಾತ್ರ ಬಹಳಷ್ಟಿದೆ. ಮೇಲ್ವರ್ಗದವರ ದಬ್ಬಾಳಿಕೆ, ಕಷ್ಟ, ಶೋಷಣೆ ಎಲ್ಲವನ್ನೂ ಅನುಭವಿಸಿ ದಲಿತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಅದನ್ನು ಚಾಚುತಪ್ಪದೆ ಒಳ್ಳೆಯದಕ್ಕೆ ಬಳಸಿಕೊಂಡು ಸಮಾಜದಲ್ಲಿ ಮುಂದೆ ಬರಲು ಸಾಧ್ಯವಾಗುತ್ತದೆ.
ಮೊದಲು ಅಂಬೇಡ್ಕರ್ ತರ ಜ್ಞಾನ ವಂತರಾಗಬೇಕು, ಪ್ರತಿಯೊಂದಕ್ಕೂ ಪ್ರಶ್ನೆ ಮಾಡುವ ಹಕ್ಕನ್ನು ಬೆಳೆಸಿಕೊಳ್ಳಬೇಕು, ವಿದ್ಯಾವಂತರಾಗಬೇಕು, ಸಂವಿಧಾನದ ಆಶಯಗಳನ್ನು ಎಲ್ಲರೂ ತಿಳಿದುಕೊಳ್ಳಬೇಕು. ಅಂಬೇಡ್ಕರ್ ಹಾಗೂ ಸಂವಿಧಾನವನ್ನು ರಾಜಕೀಯಕ್ಕೆ ಬಳಸದೆ ಕಾನೂನಿನ ಚೌಕಟ್ಟಿನಲ್ಲಿ ಅರ್ಥ ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಜಿಲ್ಲೆಯ ಅಧ್ಯಕ್ಷರಾದ ವೆಂಕಟೇಶ್ ಡಿ, ಬೆಂಗಳೂರು ಗ್ರಾಮಾಂತರದ ಅಧ್ಯಕ್ಷ ಪಿ ಪ್ರಸನ್ನ ಕುಮಾರ್ ಅವರನ್ನು ನೇಮಕಮಾಡಲಾಯಿತು. ಈ ವೇಳೆ ಸಂಘದ ಅಧ್ಯಕ್ಷರಾದ ಬಸವರಾಜು ಹೆಚ ಎಂ, ಸಂಘದ ರಾಜ್ಯ ಕಾರ್ಯಾಧ್ಯಕ್ಷರಾದ ಡಾ.ಅಂಬರಾಯ ರುದ್ರವಾಡಿ, ಗೌರವ ಕಾರ್ಯದರ್ಶಿ ನಾಗಭೂಷಣ ಎಲ್.ಎನ್, ರಾಜ್ಯ ಕಾರ್ಯಾಧ್ಯಕ್ಷರಾದ ರಂಜಿತ ಬಿ ಮಾನಕರ್, ಬೆಂಗಳೂರು ನಗರದ ರಾಜ್ಯ ಸಂಘಟನಾ ಕಾರ್ಯದರ್ಶಿ ಸುಧಾಕರ್ ಎಸ್ ಜಡಗಿ, ಖಜಾಂಚಿ ರವೀಂದ್ರ ಯು ನಾಯಕ, ಹನುಮಂತರಾಜು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಎಸ್ಸಿ ಎಸ್ಟಿ ನೌಕರರ ಸಂಘದ ಪದಾಧಿಕಾರಿಗಳು, ಕಲಬುರಗಿ, ಬೀದರ್ ಜಿಲ್ಲೆಯಿಂದ ಆಗಮಿಸಿ ಅನೇಕ ವಿಚಾರಗಳ ಬಗ್ಗೆ ಚರ್ಚೆ ನಡಿಸಿದರು.