ಬೆಂಗಳೂರು: ಬೆ.ಮ.ಸಾ.ಸಂಸ್ಥೆಯ ಮುಡಿಗೆ ವಿದ್ಯುತ್ ಚಾಲಿತ ವಾಹನಗಳಾದ “ಅಸ್ತ್ರ” ಬ್ರ್ಯಾಂಡಿಂಗ್ ಉಪಕ್ರಮಕ್ಕಾಗಿ ಎ.ಎಸ್. ಆರ್.ಟಿ.ಯು ಪ್ರಶಸ್ತಿ ಲಭಿಸಿದೆ.
ಬೆಂ.ಮ.ಸಾ.ಸಂಸ್ಥೆಗೆ ಎಲೆಕ್ಟ್ರಿಕ್ ಬಸ್ ಬ್ರ್ಯಾಂಡಿಂಗ್ “ಅಸ್ತ್ರ” ಗಾಗಿ ವಿಶೇಷ ಜ್ಯೂರಿ ಪ್ರಶಸ್ತಿಯು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಒಕ್ಕೂಟದ ಕಚೇರಿ, ನವದೆಹಲಿ ನಡೆದ ಸಮಾರಂಭದಲ್ಲಿ ಕೊಡ ಮಾಡಲಾಯಿತು.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಒಕ್ಕೂಟದ (ASRTU) ವ್ಯಾಪ್ತಿಯಲ್ಲಿ ದೇಶದ 62 ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳು ಸದಸ್ಯತ್ವವನ್ನು ಹೊಂದಿವೆ. ಒಕ್ಕೂಟವು 13-08-1965 ರಲ್ಲಿ ಅಸ್ತಿತ್ವಕ್ಕೆ ಬಂದಿದೆ. ಭಾರತ ಸರ್ಕಾರದ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದ ನಿರ್ದೇಶನದ ಅನುಸಾರ ಕಾರ್ಯನಿರ್ವಹಿಸುತ್ತಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಸಾರಿಗೆಯನ್ನು ಬ್ರ್ಯಾಂಡ್ ಗೊಳಿಸುವಲ್ಲಿ ಮುಂಚೂಣಿಯಲ್ಲಿದ್ದು, ಸಾಮಾನ್ಯ ಸಾರಿಗೆಯಿಂದ ಪ್ರಾರಂಭಿಸಿ ವಾಯು ವಜ್ರದವರೆಗೆ ಈಗ, ಇ-ಬಸ್ಸುಗಳ ಪರಿಚಯದೊಂದಿಗೆ, ಹೊಸ ಪ್ರಯಾಣಿಕರನ್ನು ವ್ಯವಸ್ಥೆಗೆ ಆಕರ್ಷಿಸಲು ಸಿಟಿ ಬಸ್ ವ್ಯವಸ್ಥೆಯನ್ನು ಬ್ರಾಂಡ್ ಮಾಡುವ ಅವಕಾಶವನ್ನು ಸಂಸ್ಥೆಯು ಬಳಸಿಕೊಂಡಿದೆ. ಹೊಸ ಎಲೆಕ್ಟ್ರಿಕ್ ಬಸ್ಸುಗಳು ಪ್ರಯಾಣಿಕರಿಗೆ ಆರಾಮದಾಯಕ, ವಿಶ್ವಾಸಾರ್ಹ ಮತ್ತು ಸುರಕ್ಷಿತ ಪ್ರಯಾಣವನ್ನು ಒದಗಿಸುವ ವ್ಯಾಪಕ ಶ್ರೇಣಿಯ ವೈಶಿಷ್ಟ್ಯಗಳೊಂದಿಗೆ ಬರುತ್ತಿವೆ.
ಬೆ.ಮ.ಸಾ.ಸಂಸ್ಥೆಯು ತನ್ನ ವಿದ್ಯುತ್ ಚಾಲಿತ ಬಸ್ಸುಗಳನ್ನು ಸಂಸ್ಕೃತದಿಂದ ಪಡೆದ ವಿಶಿಷ್ಟ “ಅಸ್ತ್ರ” ಎಂಬ ಹೆಸರಿನ ಬ್ರ್ಯಾಂಡ್ ಮಾಡಲು ನಿರ್ಧಾರವನ್ನು ತೆಗೆದುಕೊಂಡಿತು. ಸಂಸ್ಕೃತ ಭಾಷೆಯಲ್ಲಿ ಅಸ್ತ್ರ ವನ್ನು ಹೆಸರಿಸಲಾಗಿದೆ ಮತ್ತು ವಿದ್ಯುತ್ ಚಾಲಿತ ಬಸ್ಸನ್ನು ಪ್ರತಿಬಿಂಬಿಸುವ ಸಲುವಾಗಿ ವಿವಿಧ ಬಣ್ಣಗಳ ವಿದ್ಯುತ್ ಕೇಬಲ್ ಪ್ಲಗ್ಗಳೊಂದಿಗೆ ವಿಶಿಷ್ಟವಾಗಿ ಚಿತ್ರಿಸಲಾಗಿದೆ. ಬಸ್ಸು ಅತ್ಯಂತ ವಿಶಿಷ್ಟವಾದ ಮತ್ತು ಆಕರ್ಷಕವಾದ ನೇರಳೆ ಬಣ್ಣದಿಂದ ಚಿತ್ರಿಸಲ್ಪಟ್ಟಿದೆ, ಇದು ಗುಂಪಿನ ನಡುವೆ ಎದ್ದು ಕಾಣುತ್ತದೆ ಮತ್ತು ಪ್ರಯಾಣಿಕರಿಗೆ/ಸಾರ್ವಜನಿಕರಿಗೆ ಇಷ್ಟವಾಗುತ್ತಿದೆ.
ಸಮಾರಂಭದಲ್ಲಿ ಸಂಸ್ಥೆಯ ವ್ಯವಸ್ಥಾಪಕರಾದ ರಾಮಚಂದ್ರನ್.ಆರ್, ಭಾ.ಆ.ಸೇ., ರವರ ಪರವಾಗಿ ಸಾರ್ವಜನಿಕ ಸಂಪರ್ಕಾಧಿಕಾರಿ ರವರಾದ ಸುನೀತಾ. ಜೆ. ರವರು ರಾಷ್ಟ್ರೀಯ ರಸ್ತೆ ಮತ್ತು ಹೆದ್ದಾರಿಗಳ ಸಚಿವಾಲಯದ ಕಾರ್ಯದರ್ಶಿಗಳಾದ ಮಾನ್ಯ ಅನುರಾಗ ಜೈನ್, IAS ರವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು.