ಬೆಂಗಳೂರು: ಕರ್ನಾಟಕದಲ್ಲಿ 2024 ರ ಲೋಕಸಭಾ ಚುನಾವಣೆಗೆ ಆರ್.ಪಿ.ಐ ಪಕ್ಷ ಸನ್ನದವಾಗಿದ್ದು, ಅಂಬೇಡ್ಕರ್ ಪಕ್ಷದಿಂದ ಸ್ಪರ್ಧಿಸುವ 10 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರೆಸ್ ಕ್ಲಬ್ ನಲ್ಲಿ ಬಿಡುಗಡೆ ಮಾಡಲಾಯಿತು.
ಆರ್ ಪಿಐ ಪಕ್ಷದ ರಾಜ್ಯಾಧ್ಯಕ್ಷ ಮಹೇಶ ಗೋರನಾಳಕರ್ ಅವರು ಪಟ್ಟಿ ಬಿಡುಗಡೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಂವಿಧಾನ ಶಿಲ್ಪಿ ಪ್ರಜಾಪ್ರಭುತ್ವದ ಪಿತಾಮಹ, ಭಾರತೀಯ ಪ್ರತಿಯೊಬ್ಬ ನಾಗರಿಕನಿಗೆ ಮತದಾನದ ಹಕ್ಕು ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ರವರ ತತ್ವ ಸಿದ್ಧಾಂತ, ಮತ್ತು ಆಶಯದಂತೆ ಪ್ರಬುದ್ಧ ಭಾರತ ನಿರ್ಮಾಣ ಮಾಡಲು ರಾಜಕೀಯ ಅಧಿಕಾರ ಅತ್ಯವಶವಾಗಿದ್ದು, (ಅಂಬೇಡ್ಕರ್) ಪಕ್ಷದಿಂದ ಕರ್ನಾಟಕದಲ್ಲಿ 2024 ರ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣತಿಳಿಸಲ್ಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ದೀಪಕ್ ಭಾವು ವಿಕಾಳದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ.ಮೋಹನಲಾಲ್ ಪಾಟೀಲ್ ರವರ ಆದೇಶದಂತೆ ತೀರ್ಮಾನಿಸಲಾಗಿದೆ ಎಂದರು.
ಕಾಂಗ್ರೆಸ್ ಮತ್ತು ಬಿಜೆಪಿ ಒಂದು ನಾಣ್ಯದ ಎರಡು ಮುಖಗಳಾಗಿವೆ, ಕಾಂಗ್ರೆಸ್ ಸುಮಾರು 65 ವರ್ಷಗಳ ಕಾಲ ದೇಶದಲ್ಲಿ ಆಡಳಿತ ನಡೆಸಿದೆ ಆದರೆ ಸಂವಿಧಾನ ಸಂಪೂರ್ಣ ಜಾರಿ ಮಾಡಿರುವುದಿಲ್ಲ,ಅದೆ ಮಾರ್ಗದಲ್ಲಿ ಮುಂದುವರಿದ ಬಿಜೆಪಿಯವರು ಸಂವಿಧಾನವನ್ನ ಬದಲಾಯಿಸುವ ಬಗ್ಗೆ ಮಾತನಾಡುತ್ತಿದ್ದಾರೆ, ಆದರೆ ಇದು ಯಾರಿಂದಲೂ ಸಾಧ್ಯವಿಲ್ಲ. ಕೇವಲ ತಿದ್ದುಪಡಿಗೆ ಮಾತ್ರ ಅವಕಾಶವಿದೆ, ಇದೇ ರೀತಿ ಬಿಜೆಪಿಯವರು ಮಾತುಗಳನ್ನು ಅರಿಬಿಟ್ಟರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದರು.
ಸರ್ಕಾರಗಳು ಸಂವಿಧಾನದ ಸದಾಶಯದ ವಿರುದ್ಧ ನಡೆದುಕೊಳ್ಳುತ್ತಿರುವ ನಿರುದ್ಯೋಗಿಗಳಿಗೆ, ಕಾರ್ಮಿಕರಿಗೆ,ಮಹಿಳೆಯರಿಗೆ ಶೋಷಿತರಿಗೆ ಮತ್ತು ದೀನದಲಿತರಿಗೆ ಉದ್ಯೋಗ, ನಾಗರಿಕರಿಗೆ ಭೂಮಿ ಸಮಾನ ಹಂಚಿಕೆ, ಬಡತನ ನಿರ್ಮೂಲನೆ, ಅಸ್ಪೃಶ್ಯತೆ ನಿರ್ಮೂಲನೆ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಸಮಾನತೆ ನೀಡುವುದನ್ನು ಮರೆತು ಜಾತಿ ರಾಜಕಾರಣ, ಪವರ್ ಪಾಲಿಟಿಕ್ಸ್ ಮಾಡುತ್ತಿರುವುದು ಎಸಿಗೆಯ ಸಂಘತಿ. ಭಾರತವು ಶಾಂತಿ ಸೌಹಾರ್ದತೆ, ಬಂಧುತ್ವದ ಮತ್ತು ಅಭಿವೃದ್ಧಿ ಪಥದಲ್ಲಿ ಸಾಗಬೇಕಾದರೆ ಬುದ್ಧ ಬಸವ ಅಂಬೇಡ್ಕರ್ ತತ್ವದ ಮೇಲೆ ನಿಂತ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಅಂಬೇಡ್ಕರ್ ಪಕ್ಷ ಅಧಿಕಾರಕ್ಕೆ ಬಂದಾಗ ಮಾತ್ರ ಇವೆಲ್ಲವೂ ಸಾಧ್ಯ ಎಂದರು.
ಮತ ಹಾಕಿಸಿಕೊಳ್ಳುವಾಗ ಮತದಾರರಿಗೆ ಯಾವುದೇ ರೀತಿಯ ಆಮಿಷ ಒಡ್ಡುವುದಿಲ್ಲ. ಒಂದು ವೇಳೆ ಹಣ , ಹೆಂಡ, ಬೆಲೆಬಾಳುವ ವಸ್ತುಗಳು, ಉಡುಗೊರೆಗಳು, ಆಮಿಷಗಳಿಗೆ ಬಲಿಯಾದರೆ, ಅಂಬೇಡ್ಕರ್ ಅವರನ್ನು ಹತ್ಯೆ ಮಾಡಿದಂತೆ ಎಂದು ಮತದಾರರಿಗೆ ಮನವಿ ಮಾಡಿದರು.
ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಬ್ಬಾಳ ವೆಂಕಟೇಶ್ ಮಾತನಾಡಿ, ರಾಷ್ಟ್ರೀಯ ಅಧ್ಯಕ್ಷರ ಆದೇಶದ ಮೇರೆಗೆ ಮೊದಲ ಪಟ್ಟಿಯಲ್ಲಿ ವಿಜಯಪುರ, ಬೆಳಗಾವಿ, ಬಾಗಲಕೋಟೆ, ಕಲಬುರಗಿ, ಬೀದರ್,ಯಾದಗಿರಿ, ಬೆಂಗಳೂರು ಉತ್ತರ,ಬೆಂಗಳೂರು ಕೇಂದ್ರ,ಕೊಪ್ಪಳ,ಕೋಲಾರ ಜಿಲ್ಲೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ 2ನೇ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ, ಅದರಲ್ಲಿ ಮಹಿಳೆಯರಿಗೆ ಸ್ಥಾನವನ್ನು ನೀಡಲಾಗುತ್ತದೆ ಎಂದರು.
ಮತದಾರರು ಲೋಕಸಭಾ ಚುನಾವಣೆಯಲ್ಲಿ RPI ಪಕ್ಷಕ್ಕೆ ಓಟನ್ನು ಹಾಕುವ ಮೂಲಕ ರಾಜ್ಯದಲ್ಲಿ ಆರ್ ಪಿಐ ಪಕ್ಷವನ್ನು ಬಳಪಡಿಸಬೇಕೆಂದರು. ಹಲವು ಯೋಜನೆಗಳನ್ನು ಹಾಕಿಕೊಂಡಿದ್ದರು, ಪ್ರಣಾಳಿಕೆಯನ್ನು ಸಹ ಬಿಡುಗಡೆ ಮಾಡಲಾಗುತ್ತದೆ ಎಂದರು. ಸುದ್ದಿಗೋಷ್ಠಿಯಲ್ಲಿ RPI ನ ಪದಾಧಿಕಾರಿಗಳು, ಬೆಂಬಲಿಗರು ಇದೇ ವೇಳೆ ಉಪಸ್ಥಿತರಿದ್ದರು.