ಬೆಂಗಳೂರು: ರಾಜ್ಯ ಸರ್ಕಾರವು ಧಾರ್ಮಿಕ ದತ್ತಿ ಇಲಾಖೆಯ ಕೆಲವು ಮಸೂದೆಗಳಿಗೆ ತಿದ್ದುಪಡಿ ತರಲಾಯಿತು, ಈ ಸಂಬಂಧ ರಾಜ್ಯಪಾಲರು ತಿದ್ದುಪಡಿಯನ್ನು ತಿರಸ್ಕರಿಸಿರುವುದಕ್ಕೆ ಕರ್ನಾಟಕ ದೇವಸ್ಥಾನ ಮಹಾಸಂಘಕ್ಕೆ ಒಕ್ಕೂಟದಿಂದ ಸ್ವಾಗತ ಕೋರಿದ್ದಾರೆ.
ಇದು ಕರ್ನಾಟಕ ದೇವಸ್ಥಾನ ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘಕ್ಕೆ ಲಭಿಸಿದ ಜಯ !ಕೆಲವು ದಿನಗಳ ಹಿಂದೆ ಕರ್ನಾಟಕ ಸರಕಾರವು ಧಾರ್ಮಿಕ ದತ್ತಿ ಇಲಾಖೆಯ ಮಸೂದೆಗೆ ತಿದ್ದುಪಡಿ ತಂದಿದ್ದು, ಹೊಸ ತಿದ್ದುಪಡಿ ಮಸೂದೆಯ ಪ್ರಕಾರ ಬಿ ಗ್ರೇಡ್ ದೇವಸ್ಥಾನಗಳು 5% ಆದಾಯ ಮತ್ತು 1 ಕೋಟಿಗಿಂತ ಹೆಚ್ಚು ಆದಾಯ ತರುವ ಎ ಗ್ರೇಡ್ ದೇವಸ್ಥಾನಗಳು 10% ಶೇ. ತೆರಿಗೆಯನ್ನು ಸರಕಾರದ ಕಾಮನ್ ಪೂಲ್ ಫಂಡ್ ಗೆ ನೀಡುವ ಬಗ್ಗೆ ತಿದ್ದುಪಡಿಯನ್ನು ತರಲಾಗಿತ್ತು. ಅಷ್ಟೇ ಅಲ್ಲದೇ ಎ ಗ್ರೇಡ್ ದೇವಾಲಯಗಳ ಮೂಲಭೂತ ಸೌಕರ್ಯದ ನೆಪದಲ್ಲಿ 9 ಜನರ ಜಿಲ್ಲಾ ಮಟ್ಟದ ಉನ್ನತ ಸಮಿತಿ ಮತ್ತು ರಾಜ್ಯ ಮಟ್ಟದ 14 ಜನರ ಸಮಿತಿ ರಚನೆ ಮಾಡಿತ್ತು.
ಈ ಕಾಯ್ದೆಯನ್ನು ಕರ್ನಾಟಕ ದೇವಸ್ಥಾನ ಮಹಾಸಂಘವು ತೀವ್ರವಾಗಿ ಖಂಡಿಸಿತ್ತು ಮತ್ತು ಈ ಕಾಯ್ದೆಯನ್ನು ರದ್ದುಗೊಳಿಸುವಂತೆ ರಾಜ್ಯದ 15 ಕ್ಕೂ ಅಧಿಕ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿತ್ತು. ಈ ಕುರಿತು ಅನೇಕ ಕಡೆಗಳಲ್ಲಿ ಆಂದೋಲನವನ್ನೂ ನಡೆಸಲಾಗಿತ್ತು. ಈ ಬೇಡಿಕೆಗೆ ಬುಧವಾರ 20 ಮಾರ್ಚ್ ರಂದು ಪ್ರತಿಕ್ರಿಯಿಸಿದ ಮಾನ್ಯ ರಾಜ್ಯಪಾಲರು ಈ ಪ್ರಸ್ತಾಪಿತ ಮಸೂದೆಯಲ್ಲಿ ಅನೇಕ ಅಂಶಗಳು ತಾರತಮ್ಯತೆಯಿಂದ ಕೂಡಿದೆ ಎಂದು ಹೇಳಿ ಅದನ್ನು ಸರಕಾರಕ್ಕೆ ವಾಪಾಸ್ ಕಳಿಸಿದ್ದಾರೆ.
ರಾಜ್ಯಪಾಲರಾದ ತಾವರ್ ಚಂದ್ ಗೆಹಲೋಟ್ ಅವರ ಈ ಮಹತ್ವಪೂರ್ಣ ನಿರ್ಣಯವನ್ನು ಕರ್ನಾಟಕ ದೇವಸ್ಥಾನ ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ ಸ್ವಾಗತಿಸುತ್ತದೆ ಮತ್ತು ಹಿಂದೂ ದೇವಸ್ಥಾನಗಳ ರಕ್ಷಣೆಗಾಗಿ ಮಹಾಸಂಘವು ಇದೇ ರೀತಿ ಸನ್ನದ್ಧವಾಗಿರುವುದು ಎಂದು ರಾಜ್ಯ ಸಂಯೋಜಕರಾದ ಮೋಹನ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.