ಬೆಂಗಳೂರು: ಹೋಳಿ ಆಚರಣೆಗೆ ರೈನ್ ಡ್ಯಾನ್ಸ್ ಆಯೋಜಿಸುವುದಾಗಿ ಪ್ರಕಟಿಸಿದ್ದ ಮೈಸೂರು ರಸ್ತೆಯ ಜೆ.ಕೆ ಗ್ರಾಂಡ್ ಅರೆನಾ ಹಾಗೂ ಜಯಮಹಲ್ ಪ್ಯಾಲೇಸ್ ಹೋಟೆಲ್ಗಳಿಗೆ ಇಂದು ಜಲಮಂಡಳಿ ಅಧಿಕಾರಿಗಳು ಭೇಟಿ ನೀಡಿ ರೈನ್ ಡ್ಯಾನ್ಸ್ ಗೆ ಕಾವೇರಿ ಹಾಗೂ ಕೊಳವೆ ಬಾವಿ ನೀರು ಬಳಸದಂತೆ ನೊಟೀಸ್ ನೀಡಿದರು.
ಸಾಂಸ್ಕೃತಿ ಹಬ್ಬವಾಗಿ ಆಚರಣೆಗೆ ಯಾವುದೇ ನಿಷೇಧ ಇಲ್ಲ. ಆದರೆ ವಾಣಿಜ್ಯ ಉದ್ದೇಶಗಳಿಗಾಗಿ ರೈನ್ ಡ್ಯಾನ್ಸ್ ಹಾಗೂ ಪೂಲ್ ಡ್ಯಾನ್ಸ್ ಆಯೋಜಿಸುವುದರಿಂದ ನೀರು ಪೊಲಾಗುತ್ತದೆ. ಇದನ್ನ ತಡೆಯುವ ನಿಟ್ಟಿನಲ್ಲಿ ಈಗಾಗಲೇ ಸೂಚನೆಗಳನ್ನು ನೀಡಲಾಗಿದೆ ಎಂದು ಹೊಟೇಲ್ ಸಿಬ್ಬಂದಿಗಳಿಗೆ ಮಾಹಿತಿ ನೀಡಲಾಯಿತು.
ಇದಕ್ಕೆ ಪೂರಕವಾಗಿ ಸ್ಪಂದಿಸಿದ ಹೊಟೇಲ್ ಸಿಬ್ಬಂದಿಗಳು ಮಂಡಳಿಯ ನಿರ್ದೇಶನದಂತೆ ರೈನ್ ಡ್ಯಾನ್ಸ್ ಹಾಗೂ ಪೂಲ್ ಡ್ಯಾನ್ಸ್ ಮಾಡುವುದಿಲ್ಲ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ನಲ್ಲಿಗಳಿಗೆ ಏರಿಯೇಟರ್ ಅಳವಡಿಸುವಂತೆ ಸೂಚನೆ ನೀಡಲಾಯಿತು.