ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಹೊಂದಾಣಿಕೆ ಸುಗಮವಾಗಿ ನಡೆಯುತ್ತಿದ್ದು, ಇದೇ ಮೈತ್ರಿ ಮುಂದಿನ ಚುನಾವಣೆಯಲ್ಲಿ 28 ಕ್ಷೇತ್ರಗಳಿಗೆ 28 ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸವನ್ನು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ವ್ಯಕ್ತಪಡಿಸಿದರು.
ಸಭೆಯ ನಂತರ ಮಾಧ್ಯಮ ವನ್ನು ಉದ್ದೇಶಿಸಿ ಆರ್ ಅಶೋಕ್ ರವರು ಮತ್ತು ಎಚ್ ಡಿ ಕುಮಾರಸ್ವಾಮಿ ರವರು ಮಾತನಾಡಿದರು.ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್ ಅವರು ಮಾತನಾಡುತ್ತಾ ಜೆಡಿಎಸ್ ಮತ್ತು ಬಿಜೆಪಿ ಹೊಂದಾಣಿಕೆ ರಾಜ್ಯದ ಎಲ್ಲಾ ಕಡೆ ಸುಗಮವಾಗಿ ಸಾಗುತ್ತಿದ್ದು ಈ ಮೈತ್ರಿ ಮುಂದಿನ ಚುನಾವಣೆಗಳಲ್ಲಿ 28ಕ್ಕೆ 28 ಸ್ಥಾನವನ್ನು ಗೆಲ್ಲುವ ವಿಶ್ವಾಸವಿದೆ ಎಂದು ತಿಳಿಸಿದರು. ಭಾರತದ ಮಾಜಿ ಪ್ರಧಾನಿಗಳಾದ ಎಚ್. ಡಿ ದೇವೇಗೌಡ ರವರು ಪ್ರಧಾನಿ ಗಳಾದ. ನರೇಂದ್ರ ಮೋದಿ ಅವರ ಬಗ್ಗೆ ಅತ್ಯಂತ ವಿಶ್ವಾಸವನ್ನು ಹೊಂದಿದ್ದು ಈ ಮೈತ್ರಿಯಿಂದ ಮುಂಬರುವ ಚುನಾವಣೆಯಲ್ಲಿ ಎನ್ ಡಿ ಎ ಮೈತ್ರಿ ಕೂಟಕ್ಕೆ ಅನುಕೂಲವಾಗುತ್ತದೆಂದು ತಿಳಿಸಿದರು.
ರಾಜ್ಯ ಸರ್ಕಾರ ಬೆಂಗಳೂರಿಗೆ ಕುಡಿಯುವ ನೀರನ್ನು ಸಮರ್ಪಕವಾಗಿ ಸರಬರಾಜು ಮಾಡುತ್ತಿಲ್ಲ ಕಾಂಗ್ರೆಸ್ ಪಕ್ಷ ಘೋಷಿಸಿರುವ ಭಾಗ್ಯಗಳು ಜನರಿಗೆ ಸರಿಯಾಗಿ ತಲುಪುತ್ತಿಲ್ಲ ರಾಜ್ಯದಲ್ಲಿ ವಿದ್ಯುತ್ ಸರಬರಾಜಿನ ಬಿಕ್ಕಟ್ಟು ತಲೆದೊ ರಿದೆ ರಾಜ್ಯದ ಜನತೆ ನಾವು ಯಾಕಾದರೂ ಕಾಂಗ್ರೆಸ್ ಪರ ಮತ ಚಲಾಯಿಸಿದೆವು ಎಂದು ಪಶ್ಚಾತಾಪ ಪಡುತ್ತಿದ್ದಾರೆ. ಲೋಕಸಭಾ ಚುನಾವಣೆ ಫಲಿತಾಂಶದ ನಂತರ ರಾಜ್ಯ ರಾಜಕಾರಣದಲ್ಲಿ ಬದಲಾವಣೆಗಳು ಆಗುವ ಸಂಭವ ಬಹಳ ಹೆಚ್ಚಿದೆ ಎಂದು ಹೇಳಿದರು.
ಮಾಜಿ ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿ ರವರು ಮಾತನಾಡುತ್ತಾ ತೇಜಸ್ವಿ ಸೂರ್ಯ ರವರು ದಿನಾಂಕ 4ನೇ ಏಪ್ರಿಲ್ ನಂದು ನಾಮಪತ್ರ ಸಲ್ಲಿಸಲಿದ್ದಾರೆ ಅದೇ ದಿನ ನಾನು ಸಹ ಮಂಡ್ಯದಿಂದ ನಾಮಪತ್ರವನ್ನು ಸಲ್ಲಿಸುತ್ತಿದ್ದೇನೆ ಅವರ ಚುನಾವಣೆಗೆ ಶುಭ ಕೋರುವ ಸಲುವಾಗಿ ಇಂದು ನಾನು ಶ್ರೀ ತೇಜಸ್ವಿ ಸೂರ್ಯ ರವರನ್ನು ಮತ್ತು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದೇನೆ ಎಂದು ತಿಳಿಸಿದರು.
ರಾಜ್ಯ ಸರ್ಕಾರಕ್ಕೆ ರಾಜ್ಯದ ಸಮಸ್ಯೆಗಳ ಮೇಲೆ ಗಮನ ಇಲ್ಲ ಸಿಎಂ ಮೂರು ದಿನ ಹೆಚ್.ಡಿ. ಕೋಟೆಯ ರೆಸಾರ್ಟ್ ನಲ್ಲಿ ಹೋಗಿ ವಾಯು ವಿಹಾರ ಮಾಡಿ ಬಂದಿದ್ದಾರೆ.
ಬೆಂಗಳೂರಿನ ನಾಲ್ಕೂ ಕ್ಷೇತ್ರಗಳಲ್ಲಿ ಗೆಲ್ಲಲು ಸ್ಟ್ರ್ಯಾಟಜಿ ಮಾಡಿಕೊಂಡಿದ್ದೇವೆ.ಎರಡೂ ಪಕ್ಷಗಳ ಮೈತ್ರಿಯಿಂದ ದೇಶಕ್ಕೆ ಮತ್ತು ನಾಡಿನ ಜನತೆಗೆ ಸಂದೇಶ ಹೋಗಿದೆ. ರಾಜ್ಯದ ಜನರು ಜೆಡಿಎಸ್ ಮತ್ತು ಬಿಜೆಪಿ ಅವರದು ನ್ಯಾಚುರಲ್ ಅಲಯನ್ಸ್ ಎಂದು ಅಭಿಪ್ರಾಯ ಪಡುತ್ತಿದ್ದಾರೆ ಎಂದು ತಿಳಿಸಿದರು
ಗ್ಯಾರಂಟಿ ಹೆಸರಿನಲ್ಲಿ ಹಣ ಲೂಟಿ?
ಕಾಂಗ್ರೆಸ್ ಪಕ್ಷದವರು ನಮ್ಮ ನೀರು ನಮ್ಮ ಹಕ್ಕು ಪಾದಯಾತ್ರೆ ಮಾಡಿದರು ಆದರೆ ಅವರ ಗುಂಪಿನಲ್ಲಿರುವ ಡಿಎಂಕೆ ಪ್ರಣಾಳಿಕೆಯಲ್ಲಿ ಮೇಕೆದಾಟು ಸ್ಥಗಿತ ಮಾಡುವ ಘೋಷಣೆ ಮಾಡಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳು ಈ ಬಗ್ಗೆ ಯಾವ ಹೇಳಿಕೆಯನ್ನು ನೀಡಿಲ್ಲ ಎಂದು ತಿಳಿಸಿದರು.
ಗ್ಯಾರಂಟಿ ಹೆಸರಿನಲ್ಲಿ ಕೂಡಾ ಹಣ ಲೂಟಿ ಆಗುತ್ತಿದೆ. ಯೋಜನೆಗಳು ಫಲಾನುಭವಿಗಳಿಗೆ ಸರಿಯಾಗಿ ತಲುಪುತ್ತಿಲ್ಲ. ಈ ಎಲ್ಲಾ ವಿಚಾರಗಳ ಬಗ್ಗೆ ನಾವು ಸದನ ಹೊರಗೆ ಮತ್ತು ಒಳಗೆ ನಿರಂತರವಾಗಿ ಸರ್ಕಾರದ ಗಮನವನ್ನು ಸೆಳೆದಿದ್ದೇವೆ.
ಸುಮಲತಾ ಅವರ ಬಗ್ಗೆ ಕೇಳಿದಾಗ ನನಗೇನು ಅವರು ಶಾಶ್ವತವಾದ ಶತ್ರುನಾ?. ರಾಜಕೀಯದಲ್ಲಿ ಭಿನ್ನಾಭಿಪ್ರಾಯದಿಂದ ಬೇರೆ ಬೇರೆ ಇರುವುದು ಸಹಜ
ಯಾವುದೂ ದೊಡ್ಡ ಮಟ್ಟದ ಸಮಸ್ಯೆ ಇಲ್ಲ.ಭಿನ್ನಾಭಿಪ್ರಾಯ ಮರೆತು ಮತ್ತೆ ಒಂದಾಗುವುದರಲ್ಲಿ ದೊಡ್ಡ ವಿಚಾರ ಏನಿಲ್ಲ. ಶ್ರೀಮತಿ ಸುಮಲತಾ ರವರು ಕೂಡಾ ನಮಗೆ ಸಹಕಾರ ಕೊಡುತ್ತಾರೆ, ಅವರು ಕೂಡಾ ಆಶೀರ್ವಾದ ಮಾಡುತ್ತಾರೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿಗಳು ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ. ಎಚ್. ಡಿ ಕುಮಾರಸ್ವಾಮಿ ರವರು ಮುಂಬರುವ ಲೋಕಸಭಾ ಚುನಾವಣೆಗಳ ಬಗ್ಗೆ ಚರ್ಚೆಯನ್ನು ನಡೆಸಿದರು.ಈ ಸಭೆಯಲ್ಲಿ ವಿರೋಧ ಪಕ್ಷದ ನಾಯಕರ. ಆರ್ ಅಶೋಕ್ ರವರು ಬೆಂಗಳೂರು ದಕ್ಷಿಣ ಲೋಕಸಭಾ ಅಭ್ಯರ್ಥಿ ತೇಜಸ್ವಿ ಸೂರ್ಯ ರವರು ಬೆಂಗಳೂರು ದಕ್ಷಿಣ ಜಿಲ್ಲೆಯ ಅಧ್ಯಕ್ಷರು ಜಯನಗರ ಶಾಸಕರಾದ ಸಿ. ಕೆ ರಾಮ ಮೂರ್ತಿ ರವರು, ಬೊಮ್ಮನಹಳ್ಳಿಯ ಶಾಸಕರಾದ ಸತೀಶ್ ರೆಡ್ಡಿ ರವರು, ಬಸವನಗುಡಿ ಶಾಸಕರಾದ ರವಿ ಸುಬ್ರಮಣ್ಯ ರವರು, ಚಿಕ್ಕಪೇಟೆ ಶಾಸಕರಾದ ಉದಯ್ ಗರುಡಾಚಾರ್ ರವರು ಬಿಜೆಪಿ ಮುಖಂಡರಾದ ರವೀಂದ್ರ, ಶ್ರೀಧರ್ ರೆಡ್ಡಿ, ವಿಶ್ವನಾಥ್ ರವರು ಸಹ ಈ ಸಭೆಯಲ್ಲಿ ಉಪಸ್ಥಿತರಿದ್ದರು.