ಬೆಂಗಳೂರು: ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಎನ್.ಡಿ.ಎ ಅಭ್ಯರ್ಥಿಯಾದ ಕು.ಶೋಭಾ ಕರಂದ್ಲಾಜೆರವರು ಮೈಸೂರು ಬ್ಯಾಂಕ್ ವೃತ್ತದ ಕಂದಾಯ ಭವನದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದವರು, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ನಾನು ಪಣತೊಟ್ಟು ಕೆಲಸ ಮಾಡುತ್ತೇನೆ, ನಿಮ್ಮೆಲ್ಲರ ಸಹಕಾರ ನನಗೆ ಅವಶ್ಯಕತೆ ಬೇಕಾಗಿದೆ ಎಂದರು. ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕೆಂಬ ಉದ್ದೇಶದಿಂದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಕೈಜೋಡಿಸಿರುವುದು ಮತ್ತಷ್ಟು ಬಲಬಂದಂತಾಗಿದೆ ಎಂದರು.
ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಎರಡು ಶಕ್ತಿಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಹಾಗೂ ಕಾಂಗ್ರೆಸ್ನ ದುರಾಡಳಿತವನ್ನು ಈ ಚುನಾವಣೆಯಲ್ಲಿ ತೊಡಗಿಸುವ ನಿಟ್ಟಿನಲ್ಲಿ ಕೈಜೋಡಿಸಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು. ನರೇಂದ್ರ ಮೋದಿ ಅವರ ಸಾಧನೆಯನ್ನು ತಿಳಿಸಲು ಹಳ್ಳಿಯ ಪ್ರತಿಯೊಂದು ಮನೆ ಮನೆಗೆ ತೆರಳ ಅವರ ವಿಚಾರಧಾರೆಗಳನ್ನು ತಿಳಿಸುವ ಮಾಡಬೇಕೆಂದು ಕಾರ್ಯಕರ್ತರಿಗೆ ಮತ್ತು ಪಕ್ಷದ ನಾಯಕರಿಗೆ ತಿಳಿಸಿದರು.
ನನಗೆ ವಿಶ್ವಾಸವಿದ್ದು ರಾಜ್ಯದಲ್ಲಿ 28 ಕ್ಷೇತ್ರಗಳಿಗೆ ಬಿಜೆಪಿ 28 ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿದರು. ಜೆಡಿಎಸ್ ಹಾಗೂ ಬಿಜೆಪಿ ಎರಡು ಪಕ್ಷದವರು ಸೇರಿಕೊಂಡು ಬಿಜೆಪಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಚುನಾವಣೆಯನ್ನು ಎದುರಿಸಬೇಕಾಗಿದೆ ಎಂದರು. ಈ ಮೂಲಕ ಅತ್ಯಧಿಕ ಮತಗಳನ್ನು ಬಿಜೆಪಿಗೆ ಜನತೆಯ ಆಶೀರ್ವಾದ ನೀಡಿ ಮತ್ತೊಮ್ಮೆ ಮೋದಿಯನ್ನು ಪ್ರಧಾನಿಯನ್ನಾಗಿ ಮಾಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ, ಮಹಾಲಕ್ಷ್ಮೀ ಲೇಔಟ್ʼನ ಶಾಸಕರಾದ ಕೆ.ಗೋಪಾಲಯ್ಯ ಅವರು, ದಾಸರಹಳ್ಳಿ ಶಾಸಕರಾದ ಎಸ್. ಮುನಿರಾಜು ಅವರು, ಕೆ.ಆರ್.ಪುರಂ ಶಾಸಕರಾದ ಭೈರತಿ ಬಸವರಾಜು ಅವರು, ವಿಧಾನಪರಿಷತ್ ಸದಸ್ಯರಾದ ಗೋಪಿನಾಥ್ ರೆಡ್ಡಿಯವರು, ಭಾರತೀ ಶೆಟ್ಟಿಯವರು, ಚಲವಾದಿ ನಾರಾಯಣ ಸ್ವಾಮಿಯವರು, ಜಿಲ್ಲಾಧ್ಯಕ್ಷರಾದ ಹರೀಶ್ ಅವರು, ಚುನಾವಣಾ ಸಂಚಾಲಕರಾದ ಸಚ್ಚಿದಾನಂದ ಮೂರ್ತಿಯವರು, ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ತಮ್ಮೇಶ್ ಗೌಡರು, ಜೆಡಿಎಸ್ ಯಶವಂತಪುರದ ಅಧ್ಯಕ್ಷರಾದ ಜವರಾಯಿ ಗೌಡರು, ಕಟ್ಟಾ ಜಗದೀಶ್ ಅವರು, ಮುರಳಿಯವರು, ಮಾಜಿ ಶಾಸಕರಾದ ನೆಲ ನರೇಂದ್ರ ಬಾಬುರವರು, ಮಾಜಿ ಜಿಲ್ಲಾಧ್ಯಕ್ಷರಾದ ನಾರಾಯಣ ಗೌಡರು ಹಾಗೂ ಎರಡೂ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಪಿ ಸಿ ಮೋಹನ್ ಉಮೇದುವಾರಿಕೆ ಸಲ್ಲಿಕೆ
ಇನ್ನು ಬೆಂಗಳೂರು ಕೇಂದ್ರದಿಂದ ಪಿಸಿ ಮೋಹನ್ ಅವರು ತಮ್ಮ ಉಮೇದುವಾರಿಕೆಯನ್ನು ಬಿಬಿಎಂಪಿ ಕಚೇರಿಯಲ್ಲಿ.
ಲೋಕಸಭಾ ಚುನಾವಣೆ ಹಿನ್ನೆಲೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೆತ್ರದ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾಗಿ ಪಿ.ಸಿ ಮೋಹನ್ ರವರು ಬುಧವಾರ ಪಾಲಿಕೆ ಕೆಂದ್ರ ಕಛೇರಿಯಲ್ಲಿರುವ ನಾಮಪತ್ರ ಸಲ್ಲಿಕೆಯ ಕೇಂದ್ರಕ್ಕೆ ತೆರಳಿ ಬೆಂಗಳೂರು ಕೇಂದ್ರ ಚುನಾವಣಾಧಿಕಾರಿಯಾದ ಡಾ. ಕೆ. ಹರೀಶ್ ಕುಮಾರ್ ರವರಿಗೆ ಮತ್ತೊಮ್ಮೆ ನಾಮಪತ್ರ ಸಲ್ಲಿಸಿದರು.