ಬೆಂಗಳೂರು: ಬೆಂಗಳೂರು ಉತ್ತರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರೊ. ರಾಜೀವ್ ಗೌಡ ಹಾಗೂ ಬೆಂಗಳೂರು ಕೇಂದ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಮನ್ಸೂರ್ ಅಲಿ ಖಾನ್ ನಾಮಪತ್ರ ಸಲ್ಲಿಕೆ ಮಾಡಿದರು. ಉಮೇದುವಾರಿಕೆ ಸಲ್ಲಿಕೆಗೂ ಮುನ್ನ ಕಾರ್ಯಕರ್ತರ ಸಮಾವೇಶ ಮಾಡುವ ಮೂಲಕ ಶಕ್ತಿ ಪ್ರದರ್ಶನ ನಡೆಸಿದರು.
ನಗರದ ಫ್ರೀಡಂ ಪಾರ್ಕ್ನಲ್ಲಿ ಸಮಾವೇಶ ನಡೆದ ರಾಜೀವ್ ಗೌಡ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಹತ್ತು ವರ್ಷದಲ್ಲಿ ಮೋದಿ ಸರ್ಕಾರ ಬೆಲೆ ಏರಿಕೆ, ನಿರುದ್ಯೋಗ, ನೋಟ್ ರದ್ದತಿ ಕೊಡುಗೆಯಾಗಿದೆ. ಹೀಗಿರುವಾಗ ಬಿಜೆಪಿಗೆ ಏಕೆ ಓಟು ಮಾಡಬೇಕು? ನಮಗೆ ಡಮ್ಮಿ ಎಂಪಿ ಬೇಡ, ಕರ್ನಾಟಕ ರಾಜ್ಯದ ಹಿತದ ಬಗ್ಗೆ ಮಾತನಾಡುವವರು ಸಂಸದರಾಗಲಿ. ಒನ್ ನೇಷನ್ ಲಾಸ್ಟ್ ಎಲೆಕ್ಷನ್ ಆಗಲಿದೆ. ಸಂವಿಧಾನ, ಪ್ರಜಾಪ್ರಭುತ್ವ ನಾಶ ಮಾಡಲು ಕೆಲಸ ಮಾಡ್ತಾ ಬಂದಿದ್ದಾರೆ. ಬಿಜೆಪಿಗೆ ಹೆದರಿಕೆ ಆಗಿದೆ. ಅವರು ನಡಗ್ತಾ ಇದ್ದಾರೆ ಎಂದರು.
ಉಡುಪಿ – ಚಿಕ್ಕಮಗಳೂರಿನಲ್ಲಿ ಬಿಜೆಪಿಯಿಂದಲೇ ತಿರಸ್ಕಾರಗೊಂಡ ಶೋಭಾ ಕರಂದ್ಲಾಜೆ ಬೆಂಗಳೂರು ಉತ್ತರಕ್ಕೆ ಏಕೆ? ಎಂದು ಸಚಿವ ಕೃಷ್ಣ ಬೈರೇಗೌಡ ಪ್ರಶ್ನಿಸಿದ್ದಾರೆ. ಇದೇವೇಳೆ ಅವರ ಪರಿಸ್ಥಿತಿ ಟೂರಿಂಗ್ ಟಾಕೀಸ್ ರೀತಿ ಆಗಿದ್ದು ಮುಂದಿನ ಊರು ಯಾವುದು ಎಂದು ಕಂದಾಯ ಸಚಿವ ಕೃಷ್ಣಭರೇಗೌಡ ಅವರು ವ್ಯಂಗ್ಯವಾಡಿದ್ದಾರೆ.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜೀವ್ ಗೌಡ ನಾಮಪತ್ರ ಸಲ್ಲಿಕೆಗೂ ಮುನ್ನ ನಡೆದ ಸಮಾವೇಶದಲ್ಲಿ ಕಂದಾಯ ಬಸವ ಕೃಷ್ಣ ಭೈರೇಗೌಡ ಮಾತನಾಡಿ, ಬೆಂಗಳೂರು ಜನರ ಸಂಕೇತವಾಗಿದ್ದಾರೆ ರಾಜೀವ್ ಗೌಡ. 25 ವರ್ಷಗಳಿಂದ ಬೆಂಗಳೂರಿನ ಅಭಿವೃದ್ಧಿಗೆ ಕೆಲಸ ಮಾಡಿದ್ದಾರೆ. ಬೆಂಗಳೂರು ಉತ್ತರದಲ್ಲಿ ಬಿಜೆಪಿ 4 ಬಾರಿ ಬಿಜೆಪಿ ಗೆದ್ದಿಗೆ. ಕನ್ನಡ ಮಾತನಾಡಲು ಬಾರದ ಸಾಂಗ್ಲಿಯಾನಗೆ ಬಿಜೆಪಿಗೆ ಟಿಕೆಟ್ ಕೊಟ್ಟಿತ್ತು. ಚಿಕ್ಕಮಗಳೂರಿನಿಂದ ಚಂದ್ರೇಗೌಡರನ್ನು ಕರೆದುಕೊಂಡು ಬಂದು ಎಂಪಿ ಮಾಡಿದ್ದರು. ನಂತರದಲ್ಲಿ ಮಾಜಿ ಸಿಎಂ ಡಿವಿ ಸದಾನಂದ ಗೌಡ ಅವರು ಎರಡು ಅವಧಿಯಲ್ಲಿ ಇಲ್ಲಿ ಎಂಪಿ ಆದರು. ಆದರೆ ಯಾರೂ ಕೆಲಸ ಮಾಡಿಲ್ಲ. ಆದರೆ ಇದೀಗ ಮಂಗಳೂರಿನ ಶೋಭಾ ಕರಂದ್ಲಾಜೆ ಅವರನ್ನು ಕರೆದುಕೊಂಡು ಬಂದಿದ್ದಾರೆ ಎಂದು ಟೀಕಿಸಿದರು.
ದೇಶವನ್ನು ಒಡೆಯುವ ಪಕ್ಷ ಬಿಜೆಪಿ
ಸಮಾವೇಶದಲ್ಲಿ ಸಚಿವ ಬೈರತಿ ಸುರೇಶ್ ಮಾತನಾಡಿ, ದೇಶವನ್ನು ಒಡೆಯುವ ಪಕ್ಷ ಬಿಜೆಪಿ. ಇದು ಭಾರತ ದೇಶದ ಪ್ರಜಾಪ್ರಭುತ್ವ, ರೈತರ, ಮಹಿಳೆಯರ ಪರವಾದ ಚುನಾವಣೆಯಾಗಿದೆ. ಬಿಜೆಪಿ ಪಕ್ಷಕ್ಕೆ ಮತ್ತೊಂದು ಬಾರಿ ಅವಕಾಶ ಮಾಡಿ ಕೊಟ್ಟರೆ ದೇಶ ನಾಶವಾಗುತ್ತದೆ ಎಂದರು. ಬಿಜೆಪಿ ಜಗಳಗಂಟಿ ಪಕ್ಷ. ಹಿಂದೂ ಮುಸ್ಲಿಂ ಎಂದು ವಿಭಜನೆ ಮಾಡ್ತಿದ್ದಾರೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ಬಿಜೆಪಿಗೆ ಫುಟ್ಬಾಲ್ ಆಗಿದೆ. ಸದಾನಂದ ಗೌಡ ಕಣ್ಣಲ್ಲಿ ನೀರು ಹಾಕುವ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದು ಕಿಡಿಕಾರಿದರು.
ಮನ್ಸೂಲ್ ಅಲಿ ಖಾನ್ ನಾಮಪತ್ರ ಸಲ್ಲಿಕೆ
ಇನ್ನು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ನಾಮಪತ್ರ ಸಲ್ಲಿಕೆ ಮಾಡಿದರು. ಚುನಾವಣಾಧಿಕಾರಿ ಹರೀಶ್ ಕುಮಾರ್ ಅವರಿಗೆ ನಾಮಪತ್ರ ಸಲ್ಲಿಕೆ ಮಾಡಿದ ಮನ್ಸೂರ್ ಅಲಿಗೆ ಶಾಸಕ ರಿಜ್ವಾನ್ ಹರ್ಷದ್, ಪುಟ್ಟಣ್ಣ, ಮಾಜಿ ಶಾಸಕ ನಾಗೇಶ್ ಸಾಥ್ ನೀಡಿದರು. ಇನ್ನು ಈ ಇಬ್ಬರು ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಕೂಡಾ ಉಪಸ್ಥಿತರಿದ್ದರು.