ಪಣಜಿ (ಗೋವಾ) :ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಪ್ರತಿನಿಧಗಳು ಗೋವಾ ಪರ್ಯಟನ ಇಲಾಖೆಯ ವತಿಯಿಂದ ಆಯೋಜಿಸಲಾದ ಗೋವಾ ಇಂಟರನ್ಯಾಷನಲ್ ಟ್ರಾವೆಲ್ ಮಾರ್ಟ್ ೨೦೨೪ ರ ಕಾರ್ಯಕ್ರಮದಲ್ಲಿ ಸಹಭಾಗಿ ಆಗಿದ್ದರು. ಈ ಕಾರ್ಯಕ್ರಮವನ್ನು ತಾಳಗಾವನಲ್ಲಿರುವ ಡಾ. ಶ್ಯಾಮಪ್ರಸಾದ ಮುಖರ್ಜಿ ಇಂಡೋರ್ ಸ್ಟೇಡಿಯಂನಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಂತರ್ಗತ ನಡೆದಿರುವ ವಿವಿಧ ಸತ್ರಗಳಲ್ಲಿ ರೀಜನರೇಟಿವ್ ಟೂರಿಸಂ , ಹಿಂಟರ್ ಲ್ಯಾಂಡ್ ಟೂರಿಸಂ ,(ಗ್ರಾಮೀಣ ಪರ್ಯಟನೆ)ಅಡ್ವೆಂಚರ್ ಟೂರಿಸಂ, ಕಲ್ಚರಲ್ ಟೂರಿಸಂ, ಡಿಜಿಟಲ್ ನಾಮೆಡಿಕ್ ಟೂರಿಸಂ , ಮುಂತಾದ ವಿಷಯಗಳ ಬಗ್ಗೆ ಅಧ್ಯಯನ ಪೂರ್ಣ ಸಂವಾದ ನಡೆಯಿತು. ಈ ಸಮಯದಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಪ್ರತಿನಿಧಿಗಳು ಆಧ್ಯಾತ್ಮಿಕ ಪರ್ಯಟನೆಯ ದೃಷ್ಟಿಯಿಂದ ಪರ್ಯಟನಾ ಕ್ಷೇತ್ರದ ಜೊತೆಗೆ ಸಂಬಂಧಿತ ಸಂಸ್ಥೆಯ ಪ್ರತಿನಿಧಿಗಳ ಜೊತೆಗೆ ಸಂವಾದ ನಡೆಸಿದರು.
ಪ್ರವಾಸಿಗರಿಗಾಗಿ ಗೋವಾ ರಾಜ್ಯದಲ್ಲಿನ ಆಧ್ಯಾತ್ಮಿಕ ಪರ್ಯಟನೆಯ ಜೊತೆಗೆ ಸಂಬಂಧಿತ ವಿವಿಧ ಪರ್ಯಾಯ ಉಪಲಬ್ಧ ಮಾಡಿಕೊಡುವ ದೃಷ್ಟಿಯಿಂದ ವಿಶ್ವವಿದ್ಯಾಲಯದ ಪ್ರತಿನಿಧಿಗಳು ಅವರ ಜೊತೆಗೆ ಚರ್ಚಿಸಿದರು. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ಭಾರತ ಸಹಿತ ವಿಯೆಟ್ನಾಮ್, ದಕ್ಷಿಣ ಕೋರಿಯಾ, ನೇಪಾಳ, ಸಂಯುಕ್ತ ಅರಬ್ ಒಕ್ಕೂಟ, ಅಮೇರಿಕಾ, ಪನಾಮಾ, ಆಫ್ರಿಕಾದ ದೇಶಗಳು, ಯುರೋಪಿಯನ್ ದೇಶಗಳು ಮುಂತಾದ ೨೫ ದೇಶದಿಂದ ಬಂದಿರುವ ಪರ್ಯಟನೆಯ ಕ್ಷೇತ್ರಕ್ಕೆ ಸಂಬಂಧಿಸಿದ ಕಂಪನಿಯ ಪ್ರತಿನಿಧಿಗಳಿಗೆ, ವಿಶಿಷ್ಟವಾದ ಆಧ್ಯಾತ್ಮಿಕ ಅನುಭೂತಿಯ ಮಹತ್ವವನ್ನು ವಿವರಿಸಿದರು.ಪ್ರತಿನಿಧಿಗಳು ವಿಶ್ವವಿದ್ಯಾಲಯದ ವಿಷಯ ತಿಳಿದುಕೊಂಡು ಮತ್ತು ಆಧ್ಯಾತ್ಮಿಕ ಪರ್ಯಟನೆಗೆ ಚಾಲನೆ ನೀಡುವುದಕ್ಕಾಗಿ ಸಾಧ್ಯವಿರುವ ಸಹಕಾರ ನೀಡುವ ಆಸಕ್ತಿಯನ್ನೂ ತೋರಿಸಿದರು.
ವಿಶ್ವವಿದ್ಯಾಲಯದ ಪ್ರತಿನಿಧಿ ಮತ್ತು ಮಕ್ಕಳ ತಜ್ಞರಾದ ಡಾಕ್ಟರ್ ಅಮೃತಾ ದೇಶಮಾನೆ ಇವರು ಈ ಕಾರ್ಯಕ್ರಮದ ಫಲನಿಷ್ಪತ್ತಿಯ ಬಗ್ಗೆ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಗೋವಾ ಇಂಟರನ್ಯಾಷನಲ್ ಟ್ರಾವೆಲ್ ಮಾರ್ಟ್ ೨೦೨೪ ರ ಕಾರ್ಯಕ್ರಮದಲ್ಲಿ ಪರ್ಯಟನೆಗೆ ಸಂಬಂಧಿತ ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯಕ್ತಿಗಳ ಜೊತೆಗೆ ನಡೆದಿರುವ ಸಂವಾದದಿಂದಾಗಿ ಪಾಲುದಾರಿಕೆ ಮತ್ತು ಸಹಯೋಗ ಈ ವಿಷಯದ ಸಾಧ್ಯತೆ ತೆರೆಯಲ್ಪಟ್ಟಿದೆ ಎಂದು ಅವರು ಹೇಳಿದರು. ಗೋವಾ ಮತ್ತು ಅದರ ಆಚೆಗೆ ಆಧ್ಯಾತ್ಮಿಕ ಪರ್ಯಟನೆಗೆ ಚಾಲನೆ ನೀಡಲು ಹೊಸ ಪರ್ಯಾಯ ಹುಡುಕಲು ನಾವು ಉತ್ಸುಕರಾಗಿದ್ದೇವೆ ಎಂದು ಅವರು ಹೇಳಿದರು.
ಈ ಕಾರ್ಯಕ್ರಮದ ಮಾಧ್ಯಮದಿಂದ ಅರ್ಥಪೂರ್ಣ ಮತ್ತು ಸಮೃದ್ಧ ಅನುಭವದ ಹುಡುಕಾಟದಲ್ಲಿರುವ ಪರ್ಯಟಕರನ್ನು ಆಕರ್ಷಿಸಲು ಗೋವಾದ ಆಧ್ಯಾತ್ಮಿಕ ಪರಂಪರೆಯ ಲಾಭ ಪಡೆಯುವ ದೃಷ್ಟಿಯಿಂದ ಪರ್ಯಟನೆಯ ಪಾಲುದಾರಿಕೆಯಲ್ಲಿ ಹೆಚ್ಚು ಸ್ವಾರಸ್ಯ ಕಂಡು ಬರುತ್ತದೆ. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ಈ ಪ್ರದೇಶದಲ್ಲಿ ಆಧ್ಯಾತ್ಮಿಕ ಪರ್ಯಟನೆಗಾಗಿ ಪಾಲುದಾರಿಕೆ ಹೆಚ್ಚಿಸುವುದಕ್ಕಾಗಿ ಉತ್ಸುಕವಾಗಿದೆ.