ಬೆಂಗಳೂರು: ಸಿಲಿಕಾನ್ ಸಿಟಿಯ ಫೀನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿ ವಿಶ್ವವಿಖ್ಯಾತ ಬಾಣಸಿಗ ಗ್ಯಾರಿ ಮೆಹಿಗನ್ ಮಾಸ್ಟರ್ ಕ್ಲಾಸ್ ಅವರು ಆಧುನಿಕ ಪಾಕ ಪದ್ದತಿಯನ್ನು ಅನಾವರಣಗೊಳಿಸಿದರು.
ಬೆಂಗಳೂರಿನಲ್ಲಿ ಅತ್ಯಂತ ಜನಪ್ರಿಯ ಹಾಗೂ ಹೆಚ್ಚು ಹೆಸರುವಾಸಿಯಾಗಿರುವ ಶಾಪಿಂಗ್ ತಾಣವಾಗಿರುವ ಫೀನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿ ಅಡುಗೆ ಮಾಡುವ ಮಾಸ್ಟರ್ ಕ್ಲಾಸನ್ನು ಏರ್ಪಡಿಸಲಾಗಿತ್ತು, ನಗರ ಮತ್ತು ಸುತ್ತಮುತ್ತಲಿನ ಅಡುಗೆ ಉತ್ಸಾಹಿಗಳು ಸುವಾಸನೆ ಪರಿಣತಿ ಮತ್ತು ಗ್ಯಾಸ್ಟ್ರೋನೋಮಿಕ್ ಡಿಲೀಟ್ಗಳೊಂದಿಗೆ ಹೆಚ್ಚು ಅನುಭವವನ್ನು ಪಡೆದರು.
ಜಾರಿನಿಗನೂರು ಕೆಲವು ರುಚಿಕರವಾದಂತಹ ಫ್ರೆಂಚ್ ಭಕ್ಷ್ಯ ತಯಾರಿಸುವ ಮೂಲಕ ತಮ್ಮ ಪರಿಣತಿ ಮತ್ತು ಆಹಾರ ಪದಾರ್ಥಗಳನ್ನು ತಯಾರಿಸುವ ನವೀನ ವಿಧಾನಗಳನ್ನು ಪ್ರೇಕ್ಷಕರಿಗೆ ಉಣಬಡಿಸಿದರು. ಮಲ್ಲಿಗೆ ಭೇಟಿ ನೀಡುವ ಪ್ರತಿಯೊಬ್ಬ ಗ್ರಾಹಕರಿಗೂ ಸಹ ಊಟದ ಅನುಭವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ ಪ್ರಕೃತಿಯ ವಿಚಾರದಲ್ಲಿ ಕೇಂದ್ರಬಿಂದುವಾಗಿದ್ದು ಎಲ್ಲಾ ರೀತಿಯ ಆಕರ್ಷಣ ಕೇಂದ್ರವೆನಿಸಿದೆ ಸ್ಟಾರ್ ಬಾಕ್ಸ್, ಟೆಕ್ ಹಾರ್ಟನ್ಸ್, ಪೆರ್ಚ್ ಆಂಡ್ರಿಯಾಸ್ ಬ್ರಾಸೆರಿ ಮತ್ತು ಮಂಗೋಲಿಯ ಬೇಕರಿ ಅಂತಹ ಅನೇಕ ಅಂತಾರಾಷ್ಟ್ರೀಯ ಕೆಫೆಗಳಿಂದ ಗ್ರಾಹಕರಿಗೆ ನೆಚ್ಚಿನ ತಾಣವಾಗಿದೆ, ಅಲ್ಲದೆ ಭೋಜನ ಪ್ರಿಯರಿಗೆ ಹೊಸದಾದ ಅನುಭವವನ್ನು ನೀಡುತ್ತಿದೆ ಎಂದರು.
ಜನರ ಸುಮ್ಮುಖದಲ್ಲಿಯೇ ಕೆಲ ಬೇಕಿಂಗ್ ಪದಾರ್ಥಗಳನ್ನು ಲೈವ್ ಆಗಿ ಮಾಡಿ ತೋರಿಸಿದರು. ಇದಲ್ಲದೆ ಪಾಕ ತಯಾರಿಕಾ ಕೆಲಸ ಆಸಕ್ತಿಗಳಿಗೆ ಅನುಮಾನಗಳು, ಪ್ರಶ್ನೆಗಳಿಗೆ ಉತ್ತರಿಸಿದರು.ಇಡೀ ವೇಳೆ ಭಾರತೀಯ ಪಾಕ ಪದ್ದತಿಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು.
ಇಂಗ್ಲಿಷ್ ಆಸ್ಟ್ರೆ ಆಸ್ಟ್ರೇಲಿಯನ್ ಚೆಫ್ ಮತ್ತು ರೆಸ್ಟೋರೆಂಟ್ ಉದ್ಯಮಿಯಾಗಿರುವ ಗ್ಯಾರಿ ಮೆಹಿಗನ್ ಅವರು ವಿಶ್ವದ ಅತ್ಯಂತ ಜನಪ್ರಿಯ ಬಾಣಸಿಗರಲ್ಲಿ ಒಬ್ಬರು. ಇವರು ಮಾಸ್ಟರ್ ಚಿಫ್ ಆಸ್ಟ್ರೇಲಿಯಾದ ಮುಖ್ಯ ತೀರ್ಪುಗಾರರಾಗಿದ್ದರು. ದೇಶ ವಿದೇಶಗಳಲ್ಲಿ ಪಾಕಶಾಲೆಗಳ ಸಂಸ್ಥೆಗಳಲ್ಲಿ ಪಾಕ ಪ್ರವೀಣರಾಗಿ ಸೇವೆ ಸಲ್ಲಿಸಿದ್ದಾರೆ. ಫಾರ್ ಫ್ಲಂಗ್ ವಿಥ್ ಗ್ಯಾರಿ ಮೆಹಿಗನ್ ಎಂದು ಹೆಸರು ವಾಸಿಯಾಗಿದ್ದಾರೆ.
ಪಾಕ ತಯಾರಿಕಾ ಕಾರ್ಯಕ್ರಮದಲ್ಲಿ ನೂರಾರು ಜನ ವಿದ್ಯಾರ್ಥಿಗಳು, ಅಭಿರುಚಿ ಉಳ್ಳ ಪಾಕ ಪ್ರಿಯರು ಅಡುಗೆ ತಯಾರಿಕೆ ಬಗ್ಗೆ ಹೊಸ ಹೊಸ ಐಡಿಯಾ ತಿಳಿದುಕೊಂಡರು.