ಬೆಂಗಳೂರು: ಬೆಂಗಳೂರು ನಗರ ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದರ ಚುನಾವಣೆಗೆ ಹಾಲಿ ಸಂಸದ ಪಿ ಸಿ ಮೋಹನ್ ಸ್ಪರ್ಧೆ ಮಾಡಿದ್ದು ಶಾಂತಿನಗರ ವಾರ್ಡ್ನಲ್ಲಿ ಅದ್ದೂರಿಯಾಗಿ ಬಹಿರಂಗ ಪ್ರಚಾರ ನಡೆಸಿದರು.
ಇನ್ನು ಬೆಂಗಳೂರು ಕೇಂದ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮನ್ಸೂರು ಅಲ್ಲಿ ಖಾನ್ ಅವರು ಸ್ಪರ್ಧೆ ಮಾಡಿದ್ದು, ಪಿಸಿ ಮೋಹನ್ ವಿರುದ್ಧ ಶತಾಯಗತಾಯ ಈ ಬಾರಿ ಗೆಲ್ಲಲೇ ಬೇಕೆಂಬ ಆಟದಿಂದ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ.
ಮನ್ಸೂರ್ ಆಲಿಖಾನ್ ಅವರ ವಿರುದ್ಧ ಪಿಸಿ ಮೋಹನ್ ಗೆಲ್ಲಲೇ ಬೇಕೆಂಬ ಹಂಬಲದಿಂದ ರಸ್ತೆಗಳಲ್ಲಿ ತೆರೆದ ವಾಹನದ ಮೂಲಕ ಪ್ರಚಾರಭರಾಟ ನಡೆಸುತ್ತಿದ್ದಾರೆ. ಶಾಂತಿನಗರ ಕ್ಷೇತ್ರದ ಎಲ್ಲಾ ಬಡಾವಣೆಗಳಲ್ಲಿಯೂ ಸಹ ತೆರೆದ ವಾಹನದಲ್ಲಿ ಬಿಜೆಪಿ ಆಡಳಿತ ಸುಧಾರಣೆಗಳು ಹಾಗೂ ಅನುಷ್ಠಾನಕ್ಕೆ ತಂದಿರುವ ಕಾರ್ಯಗಳ ಬಗ್ಗೆ ಜನರಿಗೆ ಮನವರಿಕೆ ಮಾಡುವ ಮೂಲಕ ಮೋದಿ ಗ್ಯಾರಂಟಿಗೆ ಜನಸಾಮಾನ್ಯರು ಮತ ಹಾಕಿ ಎಂದು ಮನವರಿಕೆ ಮಾಡಿದರು.
ಟಿಸಿ ಮೋಹನ್ ಅವರಿಗೆ ಶಾಂತಿನಗರದ ಗೊಂಬೆಗಳ ನಗರದಲ್ಲಿ ಬಿಜೆಪಿ ಮುಖಂಡ ಬೈರಪ್ಪ ಸಾತ್ ನೀಡಿದರು ಅಲ್ಲದೆ ಕಾರ್ಯಕ್ರಮದ ನೇತೃತ್ವವನ್ನು ವಹಿಸಿಕೊಂಡಿದ್ದರು ಇವೆಲ್ಲದರ ಜೊತೆಗೆ ಪಿಕೆ ಮೋಹನ್ ಅವರಿಗೆ ಪ್ರಚಾರದಲ್ಲಿ ಸಾತ್ ನೀಡಿ ಮತಯಾಚನೆ ಮಾಡಿದರು. ಹಾಲಿ ಸಂಸದ ಪ್ರೀತಿ ಮೋಹನ್ ಅವರ ಪಕ್ಕದಲ್ಲಿಯೇ ಸುಮಾರು ಎರಡು ಮೂರು ಗಂಟೆಗಳ ಕಾಲ ಪಿಸಿ ಮೋಹನ್ ಅವರ ಪಕ್ಕದಲ್ಲಿಯೇ ನಿಂತುಕೊಂಡು ಪ್ರಚಾರ ಬರಾಟೆಯಲ್ಲಿ ತೊಡಗಿರುವುದನ್ನು ನೋಡಬಹುದಾಗಿದೆ.
ಪಿಸಿ ಮೋಹನ್ ಅವರು ಕೈಗೊಂಡಿರುವ ಕಾರ್ಯಗಳ ಬಗ್ಗೆ ಹಾಗೂ ಅಭಿವೃದ್ಧಿ ಮಾಡಿರುವ ವಿಚಾರಗಳ ಬಗ್ಗೆ ಭೈರಪ್ಪ ಅವರು ಸಾರ್ವಜನಿಕರಿಗೆ ತಿಳಿಸುವ ಪ್ರಯತ್ನ ಮಾಡಿದರು.
ಶಾಂತಿನಗರದಲ್ಲಿ ನಡೆದ ಬಹಿರಂಗ ಪ್ರಚಾರದಲ್ಲಿ ಪಿಸಿ ಮೋಹನ್ಗೆ ಬಿಬಿಎಂಪಿ ಮಾಜಿ ಮೇಯರ್ ಗೌತಮ್ ಸೇರಿದಂತೆ ವಾರ್ಡ್ನ ಅಧ್ಯಕ್ಷರು ಬ್ಲಾಕ್ ನ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ನೂರಾರು ಜನ ಕಾರ್ಯಕರ್ತರು ಇದೇ ಉಪಸ್ಥಿತರಿದ್ದರು.