ಬೆಂಗಳೂರು: ಶ್ರೀ ರಾಮ ಕಲ್ಯಾಣೋತ್ಸವ ಹಿನ್ನೆಲೆ ಬೆಂಗಳೂರಿನ ಸದ್ದುಗುಂಟೆಪಾಳ್ಯದಲ್ಲಿನ ವಿವಿಧ ದೇವಾಲಯಗಳಲ್ಲಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಶ್ರೀ ರಾಮೋತ್ಸವ ಹಿನ್ನೆಲೆ ದೇವಾಲಯಗಳಲ್ಲಿ ವಿಜಯ ಪೂಜೆ ಪುನಸ್ಕಾರ ಸಾರ್ವಜನಿಕರಿಗೆ ಮಜ್ಜಿಗೆ ಪಾನಕ ಕೋಸಂಬರಿ ನೀಡುವ ಮೂಲಕ ಶ್ರೀರಾಮ ಕಲ್ಯಾಣ ವಿಜೃಂಭಣೆಯಿಂದ ಆಚರಿಸಲಾಯಿತು ಎಂದು ಕವಿತಾ ಕಲ್ಪತರು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರೂ, ಕರ್ನಾಟಕ ಮಹಿಳಾ ಕಾಂಗ್ರೆಸ್ ಸಮಿತಿಯ ಪ್ರದಾನ ಕಾರ್ಯದರ್ಶಿಗಳಾದ ಕವಿತಾ ಶ್ರೀನಾಥ್ ಅವರು ತಿಳಿಸಿದರು.
ಇನ್ನೂ ಇದೆ ವೇಳ ಸುದ್ಧಗುಂಟೆಪಾಳ್ಯದ ವಾರ್ಡಿನ ಕಾರ್ಯಕರ್ತರಿಗೆ ಹಾಗೂ ರಾಜಕೀಯ ಪ್ರತಿನಿಧಿಗಳಿಗೆ ದೇವಾಲಯದ ವತಿಯಿಂದ ಹಾಗೂ ಕವಿತಾ ಅವರು ಸನ್ಮಾನಿಸಿದ್ದು ಮತ್ತೊಂದು ವಿಶೇಷವಾಗಿತ್ತು,
ಶ್ರೀರಾಮ ಕಲ್ಯಾಣೋತ್ಸವ ಹಿನ್ನೆಲೆ ಸದ್ದುಗುಂಟೆಪಾಳ್ಯದಲ್ಲಿ ಮಹಿಳೆಯರಿಗೆ ಭಾಗೀನ ನೀಡಿ ಸತ್ಕರಿಸಿರುವುದು ಕವಿತಾ ಅವರ ಮತ್ತೊಂದು ಸಮಾಜಮುಖಿ ಕೆಲಸಗಳ ಹೆಗ್ಗಳಿಕೆಯಾಗಿದೆ ಎಂದರು. ಇನ್ನು ಈ ಒಂದು ಕಾರ್ಯಕ್ರಮದಲ್ಲಿ ಸದ್ದುಗುಂಟೆಪಾಳ್ಯದ ನಿವಾಸಿಗಳು ಕವಿತಾ ಶ್ರೀ ರವರ ಬಂಧು ಮಿತ್ರರು ಸ್ನೇಹಿತರು ಹಾಗೂ ನೆಚ್ಚಿನ ಕಾರ್ಯಕರ್ತರು ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಶೇಷವಾಗಿದೆ.