ಬೆಂಗಳೂರು: ಜೆಪಿ ನಗರದಲ್ಲಿ ಡಾ. ಎಪಿಜೆ ಅಬ್ದುಲ್ ಕಲಾಂ ಸೇವಾ ಸಮಿತಿ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು, ಆರೋಗ್ಯ ತಪಾಸಣಾ ಶಿಬಿರದಲ್ಲಿ ನೂರಾರು ಜನ ಭಾಗವಹಿಸಿ ಚಿಕಿತ್ಸೆ ಪಡೆದುಕೊಳ್ಳುವ ಮೂಲಕ ಸದುಪಯೋಗ ಪಡೆದುಕೊಂಡರು ಎಂದು ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಸೇವಾ ಸಮಿತಿಯ ರಾಜ್ಯಾಧ್ಯಕ್ಷೆ ಶಾಲಿನಿ ಗಿರಿ ಅವರು ತಿಳಿಸಿದರು.
ಇನ್ನೂ ಡಾ. ಎಪಿಜೆ ಅಬ್ದುಲ್ ಕಲಾಂ ಸೇವಾ ಸಮಿತಿಯ ರಾಜ್ಯಾಧ್ಯಕ್ಷರಾದ ಶಾಲಿನಿ ಗಿರಿಯವರು ಜೆಪಿ ನಗರದ ತಮ್ಮ ನಿವಾಸದ ಬಳಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜನೆ ಮಾಡಿದರು. ಬೆಂಗಳೂರಿನ ಪ್ರತಿಷ್ಠಿತ ಆರೋಗ್ಯ ಸಂಸ್ಥೆಗಳಾದ ಜಯದೇವ ಹಾಗೂ ಕಿದ್ವಾಯಿ ಆಸ್ಪತ್ರೆಗಳ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿ ಕೊಳ್ಳಲಾಗಿದೆ , ಬೆಳಿಗ್ಗೆಯಿಂದ ಸಂಜೆವರೆಗೂ ಸಹ ಜೆಪಿ ನಗರದ ನಿವಾಸಿಗಳು ಈ ಒಂದು ಆರೋಗ್ಯ ತಪಾಸಣೆಯ ಶಿಬಿರದ ಪ್ರಯೋಜನವನ್ನು ಸದುಪಯೋಗ ಪಡೆದುಕೊಂಡರು.
ಶಿಬಿರದಲ್ಲಿ ಚಿಕಿತ್ಸೆಗಳ ವಿವರ:
ಇನ್ನು ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ರಕ್ತದ ಒತ್ತಡ, ಸಕ್ಕರೆ ಕಾಯಿಲೆ, ಸ್ತ್ರೀರೋಗಕ್ಕೆ ಸಂಬಂಧಿಸಿದಂತೆ ಕಾಯಿಲೆಗಳು ಹೆಣ್ಣು ಮಕ್ಕಳಿಗೆ ಕ್ಯಾನ್ಸರ್ ಸಂಬಂಧಿಸಿದಂತ ಕಾಯಿಲೆಗಳು, ಬ್ಲಡ್ ಶುಗರ್ ಈಸಿಜಿ ಸೇರಿದಂತೆ ಪ್ರಾಥಮಿಕ ಆರೋಗ್ಯ ತಪಾಸಣೆಯನ್ನು ಆ ಯೋಚನೆ ಮಾಡಲಾಗಿತ್ತು.
ಎಪಿಜೆ ಅಬ್ದುಲ್ ಕಲಾಂ ಸೇವಾ ಸಮಿತಿ ಪ್ರಾರಂಭವಾಗಿ 6-7 ತಿಂಗಳು ಕಳೆದಿದ್ದು, ಕಲಾಂ ಅವರ ಕಾರ್ಯವೈಕರಿ ನೆನೆದು ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದು, ಅವರು ಹಾಕಿಕೊಟ್ಟ ಹಾದಿಯಲ್ಲಿಯೇ ಮುಂದುವರಿಸಿಕೊಂಡು ಹೋಗುತ್ತೇನೆ ಎಂದು ತಿಳಿಸಿದರು. ಕಲಾಂ ಅವರು ನಮಗೆ ಒಂದು ಶಕ್ತಿಯಾಗಿ ಪ್ರೇರಣೆಯಾಗಿದ್ದು, ಸಮಾಜ ಸೇವೆ ಮಾಡುವ ಮೂಲಕ ಅವರ ಕೆಲಸ ಕಾರ್ಯಗಳನ್ನು ಕಾಣುತ್ತೇವೆ ಎಂದರು.
ಪ್ರಯೋಜನ ಪಡೆದುಕೊಂಡ ಜೆಪಿ ನಗರ ನಿವಾಸಿಗಳು:
ಆರೋಗ್ಯದ ಹಿತದೃಷ್ಟಿಯಿಂದ ಜೆಪಿ ನಗರದ ನಿವಾಸಿಗಳಿಗೆ ಉಚಿತವಾಗಿ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳುವ ಸಲುವಾಗಿ ಈ ಒಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಬಡಾವಣೆಯ ಸಾಕಷ್ಟು ನಿವಾಸಿಗಳು ಆಗಮಿಸಿ ತಮ್ಮ ಆರೋಗ್ಯವನ್ನು ತಪಾಸಣೆ ಮಾಡಿಸಿಕೊಂಡರು. ಇನ್ನು ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಗೆ ಸಂಬಂಧಿಸಿದಂತೆ ಅನೇಕ ರೋಗಗಳು ಕಂಡುಬರುತ್ತಿದ್ದು, ಅದರಲ್ಲೂ ಮಹಿಳೆಯರಿಗೆ ವಿವಿಧ ರೀತಿಯಲ್ಲಿ ಕ್ಯಾನ್ಸರ್ ತಪಾಸಣೆ ಟೆಸ್ಟ್ ಗಳನ್ನು ಮಾಡಲಾಯಿತು.
ಕಲಾಂ ಸೇವಾ ಸಮಿತಿಯ ಮುಖ್ಯ ಉದ್ದೇಶಗಳು:
ಎಪಿಜೆ ಅಬ್ದುಲ್ ಕಲಾಂ ಸೇವಾ ಸಮಿತಿಯ ಮುಖ್ಯ ಯೋಜನೆ ಹಣ್ಣಿನ ಗಿಡಗಳನ್ನು ರಾಜ್ಯದ ಎಲ್ಲಾ ಕಡೆ ನೆಟ್ಟು ಮೂರು ವರ್ಷಗಳ ಕಾಲ ಬೆಳೆಸುವ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರಲಾಗುತ್ತಿದೆ. ಈ ಹಣ್ಣುಗಳು ಪ್ರಾಣಿ ಪಕ್ಷಿಗಳಿಗೆ ಹಾಗೂ ರೋಗಿಗಳಿಗೆ ಜನಸಾಮಾನ್ಯರಿಗೆ ಸಿಗುವ ನಿಟ್ಟಿನಲ್ಲಿ ಈ ಒಂದು ಯೋಜನೆಯನ್ನು ಮುಂದುವರಿಸ್ಕೊಂಡು ಬರಲಾಗುತ್ತಿದೆ. ಅಬ್ದುಲ್ ಕಲಾಮ್ ಅವರ ದೂರ ದೃಷ್ಟಿ ಆಲೋಚನೆಗಳನ್ನು ಯುವ ಸಮೂಹಕ್ಕೆ ತಲುಪಿಸುವ ನಿಟ್ಟಿನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ. ವಿಜ್ಞಾನ ಹಾಗೂ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಶಾಲೆಗಳಲ್ಲಿ ಮಕ್ಕಳಿಗೆ ವಿಶೇಷ ತರಬೇತಿಗಳು ಹಾಗೂ ಚಟುವಟಿಕೆಗಳನ್ನು ಮಾಡಿಸಿಕೊಂಡು ಬರುತ್ತಿದ್ದೇವೆ ಎಂದರು.
ನಾವು ಜೆಪಿ ನಗರದಲ್ಲಿ 15 ವರ್ಷಗಳಿಂದ ವಾಸ ಮಾಡುತ್ತಿದ್ದು, ಇಲ್ಲಿನ ನಿವಾಸಿಗಳಿಗೆ ಒಂದು ಆರೋಗ್ಯ ತಪಾಸಣೆಸಿಬಿರವನ್ನು ಹಮ್ಮಿಕೊಳ್ಳಲು ಯೋಜನೆಯನ್ನು ಮಾಡಿದ್ದೇವೆ. ಯಾರು ಸಹ ಈ ಒಂದು ಕಾರ್ಯಕ್ರಮವನ್ನು ಮಾಡಿರಲಿಲ್ಲ, ಹೀಗಾಗಿ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆರೋಗ್ಯ ತಪಾಸಣೆಯನ್ನು ಮಾಡಿದ್ದೇವೆ ಎಂದರು. ಪ್ರತಿ ತಿಂಗಳು ಸಹ ಒಂದಲ್ಲ ಒಂದು ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದೇವೆ. ಇದಕ್ಕೆ ಇಲ್ಲಿನ ಸ್ಥಳೀಯರು ಹಾಗೂ ನಮ್ಮ ಸಮಿತಿಯ ಪದಾಧಿಕಾರಿಗಳು, ಸಹಪಾಠಿಗಳು, ಕುಟುಂಬದವರು ನೆರೆಹೊರೆಯವರು, ವೈದ್ಯರ ಸಹಕಾರದಿಂದ ಇವೆಲ್ಲವೂ ಸಹ ಮಾಡಲು ಸಾಧ್ಯವಾಯಿತು ಎಂದು ತಮ್ಮ ಸಂಸ್ಥೆಯ ಪದಾಧಿಕಾರಿಗಳ ಕಾರ್ಯ ವೈಖರಿಯನ್ನು ಮೆಚ್ಚಿಕೊಂಡರು.
ಎಪಿಜೆ ಅಬ್ದುಲ್ ಕಲಾಂ ಸೇವಾ ಸಮಿತಿ ವತಿಯಿಂದ ನಡೆಸಿಕೊಂಡು ಹೋಗುತ್ತಿರುವ ಸಮಾಜಮುಖಿ ಕೆಲಸಗಳನ್ನು ಹೀಗೆ ಮುಂದಿನ ದಿನಗಳಲ್ಲಿ ಮುಂದುವರಿಸಿಕೊಂಡು ಹೋಗುತ್ತೇವೆ, ಯಾವುದೇ ಕಾರಣಕ್ಕೂ ಇದು ಒಂದು ದಿನಕ್ಕೆ ಒಂದು ವರ್ಷಕ್ಕೆ ಸೀಮಿತವಾಗುವುದಿಲ್ಲ, ನಿರಂತರವಾಗಿ ಮಾಡಿಕೊಂಡು ಹೋಗುತ್ತೇವೆ ಎಂದು ತಮ್ಮ ಸಮಾಜಮುಖಿ ಕೆಲಸಗಳನ್ನು ಜನರಿಗೆ ತಿಳಿಯಪಡಿಸಿದರು.