ಬೆಂಗಳೂರು: ಆಡಳಿತದ ಜೊತೆಗೆ ಸನಾತನ ಧರ್ಮಗಳನ್ನು ಮೆರೆಯುತ್ತಾ ದೇಶವನ್ನು ವಿಶ್ವ ಗುರುವನ್ನಾಗಿ ಮಾಡಲು ಹೊರಟಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಶಕ್ತಿ ತುಂಬಲು ಅನಾಥ ಫೌಂಡೇಶನ್ ಬೆಂಬಲ ವ್ಯಕ್ತಪಡಿಸಲಾಯಿತು.
ಬೆಂಗಳೂರಿನ ಪ್ರೇಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಅನಾಧ ಫೌಂಡೇಶನ್ ಅಧ್ಯಕ್ಷೆ ರೂಪ ಹಾಗೂ ವಕ್ತಾರ ಧನರಾಜ್ ಮಾತನಾಡಿ, ಕೇಂದ್ರದ nda ಸರ್ಕಾರ ಅದರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ದೂರದೃಸ್ಟಿಯಿಂದ ದೇಶದ ಅಭಿವೃದ್ಧಿಗೆ ಎಲ್ಲಾ ರೀತಿಯಿಂದಲೂ ಒತ್ತು ನೀಡಿದ್ದಾರೆ.
ಎಲ್ಲಾ ರಂಗದಲ್ಲೂ ಸಹ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕಳೆದ ಒಂದು ದಶಕದಿಂದ ಅಭಿವೃದ್ಧಿಯ ಮಂತ್ರವನ್ನು ಜಪಿಸುತ್ತಾ ಡಿಜಿಟಲ್ ಯುಗ ವನ್ನಾಗಿ ಮಾಡಲು ಮೋದಿ ಸತತವಾಗಿ ಶ್ರಮಿಸುತ್ತಾರೆ ಎಂದರು.
ಇವೆಲ್ಲವನ್ನು ಮನಗಂಡು ಅನಾಧ ಸಂಸ್ಥೆ ಈ ಬಾರಿಯ 2024ರ ಲೋಕಸಭಾ ಚುನಾವಣೆಯನ್ನು ಬಿಜೆಪಿಗೆ ಬೆಂಬಲಿಸುವ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕೈ ಬಲಪಡಿಸಲಾಗುತ್ತದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅನಾಧ ಫೌಂಡೇಶನ್ ನ ಪದಾಧಿಕಾರಿಗಳು ಹಾಗೂ ಬಿಜೆಪಿಯ ಮುಖಂಡರುಗಳು ಕಾರ್ಯಕರ್ತರು ಉಪಸ್ಥಿತರಿದ್ದರು.