ಬೆಂಗಳೂರು: ಹೆಸರಾಂತ ಹೃದ್ರೋಗ ಸಂಸ್ಥೆ ಜಯದೇವ ಆಸ್ಪತ್ರೆಯಲ್ಲಿ ಕಳೆದ ವರ್ಷಗಳಿಂದ ನಿರಂತರವಾಗಿ ವೈದ್ಯಕೀಯ ಸೇವೆಯಲ್ಲಿ ಮತ್ತು ಸಂಸ್ಥೆಯ ನಿರ್ದೇಶಕರಾಗಿ ಡಾ. ಸಿಎನ್ ಮಂಜುನಾಥ್ ಅವರು ಸೇವೆ ಸಲ್ಲಿಸಿದ್ದು, ಅವರ ಕಾಲಾವಧಿಯಲ್ಲಿ ಬ್ರಹ್ಮಂಡ ಭ್ರಷ್ಟಾಚಾರ ನಡೆದಿದೆ ಎನ್ನಲಾದ ಧಾಖಲೆ ಸಮೇತ ಬಿಡುಗಡೆಯನ್ನು ಧಮ್ಮ ದೀವಿಗೆ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ರಾದ ಮಲ್ಲಿಕಾರ್ಜುನ್ ಅವರು ಗಂಭೀರ ಆರೋಪ ಮಾಡಿದರು.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಮಾತನಾಡಿದ ಅವರು, ಜಯದೇವ ಆಸ್ಪತ್ರೆಯಲ್ಲಿ ಕಳೆದ 17 ವರ್ಷಗಳಿಂದ ಯಾರಿಗೂ ನಿರ್ದೇಶಕರ ಸ್ಥಾನ ಬಿಟ್ಟುಕೊಡದೆ ಅವರೇ ನಿರಂತರವಾಗಿ ಮುಂದುವರೆಸಿ ಕೊಂಡು ಬಂದಿದ್ದು, ಅದರಲ್ಲೂ ಮಾಜಿ ಪ್ರಧಾನ ಮಂತ್ರಿ ದೇವೆಗೌಡರ ಅಳಿಯ ಎಂಬ ಒಂದೇ ಎನ್ನುವ ಕಾರಣಕ್ಕೇನೋ ಅವರ ಕೃಪಾಕಟಾಕ್ಷದಿಂದಲೇನೋ ಅವರೇ ಮುಂದುವರೆದಿದ್ದಾರೆ ಎಂದು ಆರೋಪ ಮಾಡಿದರು.
ಮಂಜುನಾಥ್ ಪ್ರಭಾವಿಗಳ ಹೃದಯವಂತ!
ಜಯದೇವ ಆಸ್ಪತ್ರೆಯಲ್ಲಿ ಮಂಜುನಾಥ್ ಆಡಳಿತದ ಕಾಲಾವಧಿಯಲ್ಲಿ ಬ್ರಹ್ಮಾಂಡ ಬ್ರಷ್ಟಾಚಾರ ನಡೆದಿದೆ ಎನ್ನಲಾದ ಆರೋಪವನ್ನು ದಾಖಲೆ ಸಮೇತ ಬಿಡುಗಡೆ ಮಾಡಿದರು. ಡಾ. ಸಿಎನ್ ಮಂಜುನಾಥ್ ಅವರು ಮೇಲ್ನೋಟಕ್ಕೆ ಜನರಿಗೆ ಹೃದಯವಂತ ಎಂದು ಬಿರುದನ್ನು ಸಹಾ ಪಡೆದಿದ್ದಾರೆ. ಆದರೆ ಒಳ ಮರ್ಮ ಮಾತ್ರ ಯಾರಿಗೂ ತಿಳಿಯದ ರೀತಿಯಲ್ಲಿದೆ. ಜಯದೇವ ಸಂಸ್ಥೆ ಈ ಹಿಂದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇತ್ತು, ಇದನ್ನು ಅಂದಿನ ನಿರ್ದೇಶಕರಾಗಿದ್ದ ಡಾ. ಎನ್ ಪ್ರಭುದೇವ್ ಅವರನ್ನು ಬಲವಂತದಿಂದ ಕೆಳಗಿಳಿಸಿದ್ದಲ್ಲದೆ ನಿರ್ದೇಶಕರಾಗಬೇಕಿದದ 5 ಜನ ಹೃದ್ರೋಗ ತಜ್ಞರಿಗೆ ತನ್ನ ಪ್ರಭಲವನ್ನು ಬಳಸಿಕೊಂಡು ಅವರಿಗೆ ಅವಕಾಶ ನೀಡದೆ ನಿರ್ದೇಶಕರ ಸ್ಥಾನದಿಂದ ಹೊರಗುಳಿಯುವಂತೆ ಮಾಡಿದ್ದಲ್ಲದೆ ಪರೋಕ್ಷವಾಗಿ ದೌರ್ಜನ್ಯವನ್ನು ಮಾಡಿದ್ದಾರೆಂದು ಆರೋಪಿಸಿದರು.
ಜಯದೇವ ಸಂಸ್ಥೆಯ ಅಧೀನದಲ್ಲಿದ್ದ 1.08 ಎಕರೆ ಬೆಲೆಬಾಳುವ ಜಮೀನು ಮುಂಬೈ ಮೂಲದವರಿಗೆ ಹೋಟೆಲ್ ಉದ್ಯಮಿಗೆ ಜಯದೇವ ಸಂಸ್ಥೆ 7ಕೋಟಿ 50 ಲಕ್ಷ ರೂಪಾಯಿ ಹಣವನ್ನು ಸಂಸ್ಥೆಯಿಂದ ಪಾವತಿಸಲು ಆದೇಶವಾಗಿದ್ದು, ಡಾ.ಸಿಎನ್ ಮಂಜುನಾಥ್ ಅವರ ಅಧಿಕಾರದ ಅವಧಿಯಲ್ಲಿ ಅವರ ಕರ್ತವ್ಯ ಲೋಪ, ಬೇಜವಾಬ್ದಾರಿ ತನದ ಪರಿಣಾಮದಿಂದ ಅಪಾರ ಪ್ರಮಾಣದ 7 ವರೆ ಕೋಟಿ ಹಣ ಜಯದೇವ ಸಂಸ್ಥೆಗೆ ನಷ್ಟವಾಗಿದೆ ಎಂದು ದಾಖಲೆಯಲ್ಲಿ ತೋರಿಸಿದರು.
ಆಸ್ಪತ್ರೆ ನೌಕರರು,ಕಾರ್ಮಿಕರ ಪಿಎಫ್, ಇಎಸ್ಐನಲ್ಲಿ ಧೋಖ?
ಆಸ್ಪತ್ರ ಒಳಾಂಗಣದಲ್ಲಿ ಹೈದರಾಬಾದ್ ಮೂಲದ ನಿಜಾಮ್ ಕಂಪನಿಗೆ ಔಷಧಾಲಯ ತೆರೆಯಲು ಸರ್ಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿ ಅವಕಾಶವನ್ನು ಕೊಟ್ಟಿರುವುದಲ್ಲದೆ, ಅವರಿಂದ ಬರುವ ಕಮಿಷನ್ ಆಸೆಗಾಗಿ ಪ್ರತಿಭಾರಿಯೂ ಟೆಂಡರ್ ಅವನ್ನು ಅದೇ ಕಂಪನಿಗೆ ನೀಡಿದ್ದು ಮತ್ತೊಂದು ಪ್ರಮಾದ ಎಸಗುವ ಮೂಲಕ ಸಂಸ್ಥೆಗೆ ದ್ರೋಹ ಬಗೆದಿದ್ದಾರೆಂದರು. ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾವಿರಾರು ಜನ ನೌಕರರ ಇಎಸ್ಐ ಹಾಗೂ ಪಿಎಫ್ ಕ್ರಮಬದ್ಧವಾಗಿ ಪಿಂಚಣಿ ಇಲಾಖಗೆ ಜಮಾವಣೆ ಮಾಡದೆ ಕಾರ್ಮಿಕರ ಬಾಯಿಗೆ ಮಣ್ಣು ಹಾಕಿದ್ದಾರೆ. ಮಾರುಕಟ್ಟೆ ದರಕ್ಕಿಂತ ದುಪ್ಪಟ್ಟು ದರವಿಧಿಸುವ ಕಂಪನಿ ಎನ್ ಕಾರ್ಟ್, ಎಐಎಂಎಸ್ ಮತ್ತು ಇತರ ಔಷಧಿ ಕಂಪನಿಗಳಿಗೆ ಹಿಂಬಾಗಿಲಿನಿಂದ ಒಡಂಬಡಿಗೆ ಮಾಡಿಕೊಂಡು ಕಮಿಷನ್ ಆಸೆಗಾಗಿ ನೂರಾರು ಕೋಟಿ ಮೌಲ್ಯದ ಐಸಿಯು ಬೆಡ್ ಮತ್ತು ಓಟಿ ಟೇಬಲ್ ಗಳನ್ನು ಕ್ಯಾಥ್ ಲ್ಯಾಬ್ಗೆ ಬಳಸುವ ವೈದ್ಯಕೀಯ ಉಪಕರಣಗಳು,ಇತರ ಕಡೆ ಬೇಕಾಗುವ ಸಾಮಾನುಗಳನ್ನು ಸರ್ಕಾರಿ ಹಣವನ್ನು 3 ಪಟ್ಟು ಖರ್ಚು ಮಾಡಿ ಸರ್ಕಾರಕ್ಕೆ ಹಾಗೂ ಸಂಸ್ಥೆಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.
ಜಯದೇವ ಸಂಶೋಧನ ಕೇಂದ್ರವು ಸಂಶೋಧನ ವಿದ್ಯಾರ್ಥಿಗಳನ್ನು ಸೃಷ್ಟಿಸಬೇಕಿದ್ದ ಇವರ ಅಧಿಕಾರದ ಅವಧಿಯಲ್ಲಿ ಸಂಶೋಧನ ವಿದ್ಯಾರ್ಥಿಗಳಿಗೆ ಅಗತ್ಯ ಉಪಕರಣಗಳೂ, ಸಲಕರಣಗೆಗಳನನು ನೀಡದೆ, ಇಲ್ಲಿಯೂ ಸಹಾ ಕೆಲಸ ಔಷಧ ಕಂಪನಿಗಳ ಜೊತೆ ಶಾಮೀಲಾಗಿ ಯಾವುದೇ ಮಾಹಿತಿ ನೀಡದೆ ಬಡವರ ಮೇಲೆ ಅಂದರೆ ಬಿಪಿಎಲ್ ಕಾರ್ಡ್ ಹೊಂದಿರುವ ರೋಗಿಗಳನ್ನು ಗುರಿಯಾಗಿಸಿಕೊಂಡು ಔಷಧಿಯ ಅಡ್ಡಪರಿನಾಮ ವಿವರಿಸದೆ ಹೊಸ ಔಷಧಿಗಳ ಪ್ರಯೋಗ ನಡೆಸಿ ಔಷಧಿ ಕಂಪನಿಗಳಿಂದ ನೂರಾರು ಕೋಟಿ ಹಣ ಜಯದೇವ ಸಂಸ್ಥೆಯಲಿರುವ ಕೆನರಾ ಬ್ಯಾಂಕ್ ಸೇರಿ ಇತರೆ ಬ್ಯಾಂಕ್ ಗಳಲ್ಲಿ ಡಾ.ಸಿಎನ್ ಮಂಜುನಾಥ್ ಹಾಗೂ ಡಾ.ಪ್ರಭಾವತಿ, ಸಾತ್ವಿಕ್ ಮಂಜುನಾಥ್ ಹಾಗೂ ಸಿಂಡಿಕೇಟ್ ವೈದ್ಯರುಗಳಿಗೆ ಈ ಹಣವನ್ನು ತಮ್ಮ ಸ್ವಂತಕ್ಕೆ ಬಳಸಿಕೊಂಡಿರುವುದು ದಾಖಲೆಗಳಿಂದ ತಿಳಿದುಬಂದಿದೆ.
ಔಷಧಿ,ಸ್ಟಂಟ್,ಉಪಕರಣದಲ್ಲೂ ಅವ್ಯವಹಾರ?
ವಿದೇಶಗಳಲ್ಲಿ ವೈದ್ಯಕೀಯ ಹಾಗೂ ಔಷಧಿ ಉತ್ಪಾದನ ಕ್ಷೇತ್ರದಲ್ಲಿ ಉತ್ಪಾಧಿಸುವ ಹೃದಯಕ್ಕೆ ಹೃದ್ರೋಗಕ್ಕೆ ಸಂಬಂಧಿಸಿದ ಸ್ಟಂಟ್ಗಳನ್ನು ತನ್ನ ಕಂಪನಿ ತಯಾರಿಸಿದ ಉಪಯೋಗಕ್ಕೆ ಬಾರದ ಸ್ಟಂಟ್ಗಳನ್ನು ಅವಧಿ ಮೀರುವ 3 ತಿಂಗಳ ಮುಂಚಿತವಾಗಿ ಬಿಸಾಡುತ್ತಾರೆ. ಅಂತಹ ಸ್ಟಂಟ್ಗಳನ್ನು ಕಂಪನಿಗಳಿಂದ ಮಂಜುನಾಥ್ ಅವರು ಅತ್ಯಂತ ಕಡಿಮೆ ಬೆಲೆಯಲ್ಲಿ ಕೊಂಡು ಅದನ್ನು ನಖಲಿ ಲೇಬಲ್ ಮಾಡಿ ಅವುಗಳನ್ನು ಜಯದೇವ ಆಸ್ಪತ್ರೆಗಳಲ್ಲಿ ಉಪಯೋಗಿಸುತ್ತಿರುವುದು ಜನರ ಜೀವಗಳ ಜೊತೆ ಆಟವಾಡುವ ಮೂಲಕ ವೈದ್ಯಕೀಯ ದಂದೆ ಮಾಡಿಕೊಂಡು ಆಕ್ರೋಶ ವ್ಯಕ್ತಪಡಿಸಿದರು.
ಮಂಜುನಾಥ್ ಅವರ ಅಧಿಕಾರದ ಅವಧಿಯಲ್ಲಿ ನೋರಾರು ಕೋಟಿ ಹಣಕಾಸಿನ ಅವ್ಯವಹಾರಗಳ ಬಗ್ಗೆ ಈಗಾಗಲೇ ಆಡಿಟ್ ಇಲಾಖೆ ಗಂಭೀರ ಆಕ್ಷೇಪಣೆ ಎತ್ತಿದ್ದರೂ ಸಹಾ ಮಂಜುನಾಥ್ ತಮ್ಮ ಕುಟುಂಬದ ಪ್ರಭಾವ ಬಳಸಿಕೊಂಡು ಪ್ರಕರಣ ಮುಚ್ಚಿಸಿರುತ್ತಾರೆ? ಹೀಗೆ ಹತ್ತು ಹಲವು ಕೃತ್ಯಗಳಲ್ಲಿ ಸುಮಾರು ೧೭ ವರ್ಷಗಳ ಕಾಲ ಇದೇ ಅವ್ಯವಹಾರವನ್ನು ಮಾಡಿಕೊಂಡು ಜನರಿಗೆ ಮಂಕುಭೂದಿ ಹಚ್ಚುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬಂದಿರುವ ಮಂಜುನಾಥ್ ಅವರ ಬ್ಯಾಂಕ್ ಖಾತೆಗಳಿಂದ ಹಾಗೂ ಇವರೇ ಸೃಷ್ಟಿ ಮಾಡಿಕೊಂಡಿರುವ ಜಂಟಿ ಖಾತೆಗಳಿಂದ ಕುಟುಂಬ ಸದಸ್ಯರು ಸೇರಿದಂತೆ, ಯಾರಿಗೆ ಹಣ ವರ್ಗಾವಣೆಯಾಗಿದೆ ಎಂಬುದರ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಲು ಸಂಬAಧಪಟ್ಟ ಇಲಾಖೆಗೆ ಮನವಿಯನ್ನು ಮಲ್ಲಿಕಾರ್ಜುನ್ ಅವರು ಮಾಡಿಕೊಂಡರು.
ಮಂಜುನಾಥ್ ಅವರ ಕಾಲಾವಧಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರದ ಆರೋಪಗಳು ಇಷ್ಟೆಲ್ಲಾ ಇದ್ದರೂ ಸಹಾ ಚುನಾವಣೆ ಆಯೋಗಕ್ಕೆ ವಂಚಿಸಿ ಹಲವು ಹಣಕಾಸಿನ ವ್ಯವಹಾರಗಳನ್ನು ಮುಚ್ಚಿಟ್ಟು ಸುಳ್ಳು ಪ್ರಮಾಣ ಪತ್ರ ಘೋಷಿಸಿದ್ದಾರೆ. ಹೀಗಿದ್ದರೂ ಅಧಿಕಾರಿಗಳ ಏಕೆ ಮೌನ ವಹಿಸಿದ್ದಾರೆ? ಬೆಂಗಳೂರು ಗ್ರಾಮಾಂಗರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಸ ನೀಡಿದ್ದಾರೆಂದು ತಿಳಿಯುತ್ತಿಲ್ಲ, ಈಗಲಾದರೂ ಸಹಾ ಕ್ಷೇತ್ರದ ಜನತೆ ಅವರ ಘೋಮುಖ ವ್ಯಗ್ರತನ್ನವನ್ನು ಕಂಡು ಅವರನ್ನು ಸೋಲಿಸುವಂತೆ ಮನವಿ ಮಾಡಿದರು.