ಬೆಂಗಳೂರು: ವೃತ್ತಿ ಶಿಕ್ಷಣ ಕೋರ್ಸ್ ಗಳಿಗೆ ಪೂರ ಸಿಗತೆ ಸೇವೆಗಳನ್ನು ಒದಗಿಸುವಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮುಂಚೂಣಿಯಲ್ಲಿರುವ ಆಕಾಶ ಎಜುಕೇಶನಲ್ ಸರ್ವಿಸ್ ಲಿಮಿಟೆಡ್ ನ ಬೆಂಗಳೂರು ಮೂಲದ ಇಬ್ಬರು ವಿದ್ಯಾರ್ಥಿಗಳು ಜೆಇಇ ಈ ಮುಖ್ಯ ಪರೀಕ್ಷೆ 2014ರಲ್ಲಿ ಎರಡನೇ ಸೆಷನ್ ನಲ್ಲಿ ಅಭೂತಪೂರ್ವ ಸಾಧನೆ ಮಾಡಿದ್ದಾರೆ ಎಂದು ಆಕಾಶ ಬೈಜಸ್ ಸಂಸ್ಥೆಯ ಬಿಜಿನೆಸ್ ಹೆಡ್ ಆದ ಧೀರಜ್ ಮಿಶ್ರ ತಿಳಿಸಿದರು.
ಜಯನಗರದ ಆಕಾಶ್ ಬೈಜುಸ್ ಕಾರ್ಪೊರೇಟ್ ಸಂಸ್ಥೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಜೆಇಇ ಮುಖ್ಯ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಸಾನ್ವಿ ಜೆನ್ 34ನೇ ರ್ಯಾಂಕ್ ಪಡೆದರೆ, ಇನ್ನೂ ಕೃಷ್ಣ ಸಾಯಿ ಶಿಶಿರ್ ಬಿ ಉಪ್ಪಳ ಅವರು 72ನೇ ರ್ಯಾಂಕ್ ಗೆ ತೃಪ್ತಿಪಟ್ಟಿದ್ದಾರೆ.
ಈ ಮೂಲಕ ಸಾನ್ವಿ ಜೈನ್ ಕರ್ನಾಟಕದ ಟಾಪರ್ ಆಗಿ ಹೊರಹೊಮ್ಮಿದ್ದಾರೆ ಸಾನ್ವಿ ಭೌತಶಾಸ್ತ್ರ ಮತ್ತು ಗಣಿತದಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದಿದ್ದರೆ ಕೃಷ್ಣ ಅವರು ರಾಸಾಯನಶಾಸ್ತ್ರ ಮತ್ತು ಗಣಿತದಲ್ಲಿ ಶೇಕಡ 100 ಕ್ಕೆ 100 ಅಂಕಗಳನ್ನು ಪಡೆದುಕೊಂಡಿದ್ದಾರೆ. ಅವರ ಅಭೂತಪೂರ್ವ ಸಾಧನೆಯು ಅಚಲವಾದ ಪದ್ಧತಿಯನ್ನು ಒತ್ತಿ ಹೇಳುತ್ತದೆ, ಭಾರತ ಅತ್ಯಂತ ಸವಾಲಿನ ಪರೀಕ್ಷೆಗಳಲ್ಲಿ ಒಂದಾಗಿದ್ದು ಜೆಇಇ,
ವಿದ್ಯಾರ್ಥಿಗಳ ಅಭೂತಪೂರ್ವ ಸಾಧನೆಯು ಎಇಎಸ್ ಬದ್ಧತೆಗೆ ಸಾಕ್ಷಿಯಾಗಿದೆ, ನಮ್ಮ ಸಂಸ್ಥೆಯು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ಸಾಕಷ್ಟು ಕಾಳಜಿ ಹಾಗೂ ಸಮರ್ಪಣೆಯನ್ನು ತೋರಿಸುತ್ತದೆ ವಿದ್ಯಾರ್ಥಿಗಳಿಗೆ ಸಮಗ್ರ ಕೋಚಿಂಗ್ ಮತ್ತು ನಾವಿನ್ಯತೆಯ ಕಲಿಕಾ ಪರಿಹಾರಗಳನ್ನು ಒದಗಿಸುವ ಮೂಲಕ ಅವರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧಗೊಳಿಸುತ್ತೇವೆ, ಈ ಸಾಧನೆ ಮಾಡಿರುವ ವಿದ್ಯಾರ್ಥಿಗಳ ಭವಿಷ್ಯ ಇನ್ನೂ ಯಶಸ್ವಿಯಾಗಲಿ ಎಂದು ಇದೇ ವೇಳೆ ಹಾರೈಸಿದರು.
ಆಕಾಶ್ ಸಂಸ್ಥೆಯ ಬೋಧಕ ಸಿಬ್ಬಂದಿಯ ಅಚಲವಾದ ಮಾರ್ಗದರ್ಶನವಿಲ್ಲದೆ ಮತ್ತು ಅವರು ಕಾಲಮಿತಿಯಲ್ಲಿ ನಮಗೆ ಹಲವಾರು ವಿಷಯಗಳನ್ನು ಕಲಿಸಿಕೊಡದಿದ್ದಲ್ಲಿ ನಮಗೆ ಈ ಪರೀಕ್ಷೆ ದಸ್ತರವಾದ ಸವಾಲಾಗಿರುತ್ತದೆ ಎಂದು ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು
ಇನ್ನೂ ಆಕಾಶ್ ಬೈಜೂಸ್ ಶಿಕ್ಷಣ ಸಂಸ್ಥೆಯಲ್ಲಿ ವಿವಿಧ ಕೋರ್ಸ್ ಗಳಲ್ಲಿ ತರಬೇತಿ ಪಡೆದು ವಿವಿಧ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿರುವ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಿ ಪುರಸ್ಕರಿಸಿದರು. ಅಲ್ಲದೆ ಜೆಇಇ ಮೇನ್ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ತೆರ್ಗಡೆಯಾದ ಸಾನ್ವಿ ಜೈನ ಮತ್ತು ಕೃಷ್ಣ ಸಾಯಿ ಶಿಶಿರ್ ಅವರಿಗೆ ಸನ್ಮಾನವನ್ನು ಸಹ ಮಾಡಲಾಯಿತು.