ಬೆಂಗಳೂರು: ರಾಜ್ಯದಲ್ಲಿ ಮೊದಲನೆಯ ಹಂತದ 14 ಲೋಕಸಭಾ ಕ್ಷೇತ್ರಗಳು 247 ಅಭ್ಯರ್ಥಿಗಳ ಮೊದಲನೇ ಹಂತದ ಮತದಾನ ಮುಕ್ತಾಯವಾಗಿದ್ದು, ಅಭ್ಯರ್ಥಿಗಳ ಭವಿಷ್ಯ ಸ್ಟ್ರಾಂಗ್ ರೂಮ್ನಲ್ಲಿ ಅಡಕವಾಗಿದೆ. ಕೆಲವೊಂದು ಕಡೆ ಆಯುಧಕರ ಘಟನೆಗಳು ನಡೆದಿದ್ದು ಇನ್ನು ಉಳಿದ ಎಲ್ಲಾ ಕಡೆ ಶಾಂತಿಯುತವಾಗಿ ಮತದಾನವಾಗಿದ್ದು ಶೇಕಡ 69% ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಬೆಂಗಳೂರು ಸೇರಿದಂತೆ ಬೆಂಗಳೂರು ಗ್ರಾಮಾಂತರ ಮೈಸೂರು ಚಿತ್ರದುರ್ಗ ತುಮಕೂರು ಕೋಲಾರ ಇನ್ನು ಇತರ ಕಡೆ ಲೋಕಸಭಾ ಕ್ಷೇತ್ರಗಳಲ್ಲಿ ಮೊದಲನೇ ಹಂತದ ಮತದಾನ ಮುಕ್ತಾಯವಾಗಿದೆ. ವಯಸ್ಕರ ಯುವ ಉತ್ಸಾಹಗಳು ಮೊದಲನೇ ಬಾರಿಗೆ ಮತದಾನ ಮಾಡುವ ಯುವಕರು ವೃದ್ಧರು ಶತಾಯುಷಿಗಳು ಅಧಿಕಾರಿಗಳು ಸೆಲೆಬ್ರಿಟಿಗಳು ಸಿನಿ ತಾರೆಯರು ಎಲ್ಲರೂ ಸಹ ಖುಷಿಯಾಗಿ ಮತದಾನವನ್ನು ಮಾಡಿದರು.
ನಿನ್ನೆ ನಡೆದ ಮತದಾನ ಪ್ರಕ್ರಿಯೆಯಲ್ಲಿ ಬೆಳಿಗ್ಗೆ 7:00 ಯಿಂದ ಸಂಜೆ 6 ಗಂಟೆಯ ತನಕ ಮತದಾನ ಪ್ರಕ್ರಿಯೆ ನಡೆಯಿತು ಕೆಲವೊಂದು ಕಡೆ ಮತದಾರರ ಸಂಖ್ಯೆ ಹೆಚ್ಚು ಇದ್ದ ಕಾರಣ ಕೆಲವೊಂದು ಭೂತಗಳಲ್ಲಿ ಒಂಬತ್ತು ಗಂಟೆ ತನಕ ಸಹ ಮತದಾನ ಪ್ರಕ್ರಿಯೆ ನಡೆಯಿತು.
ಈ ಬಾರಿ ಸಹ ಮತದಾನದಲ್ಲಿ ಕೊಂಚ ಇಳಿಮುಖ ಕಂಡಿದ್ದು ಸಾಕಷ್ಟು ಜನ ಬಿಸಿಲಿನ ಜಳದಿಂದ ಅನಿವಾರ್ಯ ಕಾರಣಗಳಿಂದ ಮತದಾನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿಲ್ಲದಿರುವುದು ಮತದಾನದ ಬಳಿಕ ತಿಳಿದು ಬಂದಿದೆ.