ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಮಹಿಳೆಯರ ಮೇಲಿನ ಲೈಂಗಿಕ ಮಾಡಿದ್ದಾರೆ ಎನ್ನಲಾದ ಆರೋಪಕ್ಕೆ ಸಂಬಂಧಿಸಿದಂತೆ ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಕಾಂಗ್ರೆಸ್ ಭವನದ ಮುಂದೆ ಪಂಜಿನ ಮೆರವಣಿಗೆ ನಡೆಸಲಾಯಿತು.
ಪ್ರಜ್ವಲ್ ಅವರ ನೀಚ ಕೃತ್ಯವನ್ನು ಖಂಡಿಸಿ ಬೀದಿಗಿಳಿದು ಹೋರಾಟ ಮಾಡಲಾಯಿತು. ಪ್ರಜ್ವಲ್ ಅವರನ್ನು SIT ಅಧಿಕಾರಿಗಳು ಕೂಡಲೇ ಬಂಧಿಸ ಬೇಕೆಂದು ಆಗ್ರಹಿಸಿದರು. ರಾಜ್ಯದಲ್ಲಿನ ಮಹಿಳೆಯರ ಮಾನ ಹಾನಿಯಾಗಿದೆ, ಹೆಣ್ಣು ಮಕ್ಕಳಿಗೆ ಗೌರವ ಕೊಡದೆ ಲೈಂಗಿಕ ಕೃತ್ಯಕ್ಕೆ ಬಳಸಿಕೊಂಡಿದ್ದಾನೆ ಎಂದು ಆರೋಪಿಸಿದರು.
ಇಂತಹ ಕೃತ್ಯಗಳು ರಾಜ್ಯದಲ್ಲಿ ನಡೆದಿಲ್ಲ, ಪ್ರಜ್ವಲ್ ಮೇಲೆ ಎಷ್ಟೆಲ್ಲ ಆರೋಪಗಳು ಚುನಾವಣೆಗಿಂತಲು ಹಿಂದೆ ನಡೆದಿರುವ ಘಟನೆ, ಇಷ್ಟೆಲ್ಲಾ ಇದ್ದರೂ ಸಹಾ ಪ್ರಜ್ವಲ್ ಅವರಿಗೆ ಸಮ್ಮಿಶ್ರ ಪಕ್ಷದಲ್ಲಿ ಏಕೆ ಟಿಕೆಟ್ ನೀಡಿದರು ಎಂಬುದು ಯಕ್ಷ ಪ್ರಶ್ನೆಯಾಗಿದೆ. ಇದೆಲ್ಲವೂ ಬಿಜೆಪಿಯವರಿಗೆ ಗೊತ್ತಿದ್ದರೂ ಗೊತ್ತಿಲದೇ ರೀತಿ ವರ್ತನೆ ಮಾಡಿ ಟಿಕೆಟ್ ನೀಡಿ ಪೀಚಿಗೆ ಸಿಲುಕಿಕೊಂಡಿದ್ದಾರೆ ಎಂದು ಬಿಜೆಪಿ ಪಾಲೆಯ ವಿರುದ್ಧ ಗರಂ ಆದರು.
ಪ್ರಜ್ವಲ್ ರೇವಣ್ಣ ಅವರ ನೀಚ ಕೃತ್ಯ ಖಂಡಿಸಿ ಸಂಜೆ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ ಚಂದ್ರಶೇಖರ್ ಹಾಗೂ ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಹಾಗೂ ರಾಜ್ಯ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಮಂಜುನಾಥಗೌಡ ಅವರ ನೇತೃತ್ವದಲ್ಲಿ ಯುವ ಕಾಂಗ್ರೆಸ್ ವತಿಯಿಂದ ಕಾಂಗ್ರೆಸ್ ಭಾವನದಲ್ಲಿ ಪಂಜಿನ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ.
ಈ ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು, ಪದಾಧಿಕಾರಿಗಳು,ಯುವ ನಾಯಕರು, ಯುವ ಮುಖಂಡರು ಭಾಗವಹಿಸಿದ್ದರು.