ದಾವಣಗೆರೆ : ಶಿಕ್ಷಣ ತಜ್ಞ, ಉತ್ತಮ ರಾಜಕೀಯ ಪಟು ವಿನಯ್ ಕುಮಾರ್ ಜಿಬಿ ಅವರು ದಾವಣಗೆರೆ ಕಾಂಗ್ರೆಸ್ ಪಕ್ಷೇತರ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಇಬ್ಬರು ಪ್ರಭಲ ಅಭ್ಯರ್ಥಿಗಳ ಮಧ್ಯೆ ವಿನಯತೆಯಿಂದ ವಿನಯ್ ಜನರ ನಾಡಿಮಿಡಿತ ಹಿಡಿದಿದ್ದಾರೆ ಎಂಬುದು ದಾವಣಗೆರೆ ಕ್ಷೇತ್ರದ ಮತದಾರ ಪ್ರಭುಗಳು ಹೇಳುತ್ತಿದ್ದಾರೆ.
Beetimes ಮಾಧ್ಯಮ ಸಂಸ್ಥೆ ದಾವಣಗೆರೆ ನಗರದಲ್ಲಿ ಮತದಾನಕ್ಕೆ ಒಂದು ದಿನ ಹಿಂದೆ ನಡೆಸಿದ ಸಮೀಕ್ಷೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ನಗರದಲ್ಲಿ ಚಿಕ್ಕ ಅಂಗಡಿ ಮಾಲಿಕರು, ಸಾರ್ವಜನಿಕರು, ಬೀದಿಬದಿ ವ್ಯಾಪಾರಸ್ಥರು ಸೇರಿದಂತೆ ನಗರದೆಲ್ಲೆಡೆ ಸಮೀಕ್ಷೆ ಮಾಡಿದ್ದಾಗ ವಿನಯ್ ಪರ ಹೆಚ್ಚು ಒಲವು ಇರುವುದು Beetimes ಸಂಸ್ಥೆ ನಡೆಸಿದ ಜನಧ್ವನಿ ಸಮೀಕ್ಷೆಯಲ್ಲಿ ಕಂಡುಬಂದ ಚಿತ್ರಣ.
ಕಾಂಗ್ರೆಸ್ ನಿಂದ ರಾಜಕೀಯ ಹಿನ್ನೆಲೆಯುಳ್ಳ ಮನೆತನದಿಂದ ಬಂದಿರುವ ಡಾ.ಪ್ರಭ ಮಲ್ಲಿಕಾರ್ಜುನ ಅವರು ಲೋಕ ಕಣದಲ್ಲಿ ಒಂದು ಕಡೆ ನಾವು ಯಾರಿಗೂ ಕಡಿಮೆ ಇಲ್ಲವೆಂಬಂತೆ ಮಿಂಚಿನ ಸಂಚಾರನಡೆಸಿದರೆ, ಮತ್ತೊಂದು ಕಡೆ ಬೆಣ್ಣೆ ನಗರಿಯಲ್ಲಿ ಬಿಜೆಪಿಯಿಂದ ಶಾಮನೂರು ಶಿವಶಂಕರಪ್ಪ ಅವರಿಗೇನು ನಾವು ಯಾವುದರಲ್ಲಿ ಕಡಿಮೆ ಇಲ್ಲವೆಂಬಂತೆ ಮಾಜಿ ಎಂಪಿ ಸಿದ್ದೇಶ್ವರ್ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರು ಲೋಕ ಚುನಾವಣೆಯಲ್ಲಿ ದುಮ್ಮೀಕಿದ್ದು, ಭರ್ಜರಿಯಾಗಿಯೇ ಪ್ರಚಾರದ ಭರಾಟೆಯಲ್ಲಿ ತೊಡಗಿದ್ದರು.
ಇಬ್ಬರಲ್ಲಿ ಮೂರನೇಯವರಿಗೆ ಲಾಭವಾಗುತ್ತಾ?
ಇವರಿಬ್ಬರಿಗಿಂತ ದಾವಣಗೆರೆಯಲ್ಲಿ ಪಕ್ಷೇತರ ಅಭ್ಯರ್ಥಿ ಕುರುಬ ಸಮುದಾಯಕ್ಕೆ ಸೇರಿದ ವಿನಯ್ ಕುಮಾರ್ ಜಿಬಿ ಅವರು ಇಬ್ಬರಿಗಿಂತ ವಿಭಿನ್ನವಾಗಿ ಸಂಸತ್ ಚುನಾವಣೆಯಲ್ಲಿ ಗುರುತಿಸಿಕೊಂಡಿದ್ದಾರೆ. ನಗರದ ನಾಡಿಮಿಡಿತ ಹಿಡಿದಿರುವ ವಿನಯ್ ಸಾಮಾಜಿಕ ಕಳಕಳಿಯೊಂದಿಗೆ, ಸಮುದಾಯದ ಏಳಿಗೆಗೆ ಶ್ರಮಿಸಿರುವುದು ತಿಳಿದು ಬರುತ್ತದೆ, ಮತದಾರರಿಗೆ ಯಾವುದೇ ಹಣ, ಹೆಂಡ,ಉಡುಗೊರೆ ಯಾವುದೇ ಆಮಿಷ ಒಡ್ಡದೆ ಜನಸಾಮಾನ್ಯರಂತೆ ಮತ ಭೇಟೆಗೆ ಇಳಿದಿರುವುದು ಬೆಣ್ಣೆನಗರಿಯಲ್ಲಿ ಅಚ್ಚರಿಸಿ ಮೂಡಿಸಿದ್ದು, ಇಬ್ಬರಲ್ಲಿ ಮೂರನೇಯವರಿಗೆ ಲಾಭವಾಗುತ್ತಾ? ಎಂಬ ಪ್ರಶ್ನೆ ಕಾಡತೊಡಗಿದೆ. ಅದೆಲ್ಲಕು ಫಲಿತಾಂಶವೇ ಉತ್ತರ ನೀಡಬೇಕು.
ವಿನಯ್ ಕುಮಾರ್ ಕ್ಷೇತ್ರದಲ್ಲಿ ಈ ಭಾರಿ 2 ರಿಂದ ಎರಡೂವರೆ ಲಕ್ಷ ಮತಗಳನ್ನು ಪಡೆಯಲಿದ್ದಾರೆ ಎಂದು ಸ್ವತಃ ನಗರದ ಜನಸಾಮಾನ್ಯರು ಬಿಚ್ಚಿಟ್ಟ ಸತ್ಯವಾಗಿದೆ. ವಿನಯ್ ಅಖಾಡಕ್ಕೆ ಇಳಿದಿದ್ದೆ ಒಂದು ರೀತಿಯಲ್ಲಿ ಎರಡು ಪ್ರಭಲ ಪ್ರತಿಸ್ಪರ್ಧಿಗಳಿವೆ ತಲೆನೋವಾಗಿ ಪರಿಣಮಿಸಿದೆ. ವಿನಯ್ ಅವರ ಕೆಲಸ ಕಾರ್ಯಗಳನ್ನು ನೋಡಿದರೆ ಜನಸಾಮಾನ್ಯರ ಬಗ್ಗೆ ಇರುವ ಕಾಳಜಿಯನ್ನು ತೋರಿಸುತ್ತದೆ.
ಎರಡು ಪ್ರಭಲ ಪಕ್ಷದವರಿಗೆ, ಅಭ್ಯರ್ಥಿಗಳಿಗೆ ವಿನಯ್ ಸ್ಪರ್ಧೆಯಿಂದ ಅಕ್ಷರಶಃ ಒಂದು ರೀತಿಯಲ್ಲಿ ಭಯದ ವಾತಾವರಣ ಮೇಲ್ನೋಟಕ್ಕೆ ಕಾಣಬರುತ್ತದೆ. ಹೀಗಾಗಿ ಕಾಂಗ್ರೆಸ್, ಬಿಜೆಪಿ ಪಾಳಯದವರು ಲೋಕ ಸಮರ ಗೆಲ್ಲಲು ವಾಮಮಾರ್ಗ ಅನುಸರಿಸುತ್ತಿದ್ದಾರೆ ಎಂದು ಸ್ಥಳೀಯರೇ ಹೊರಹಾಕಿದ ಕಟು ಮಾಹಿತಿ. ದಾವಣಗೆರೆ ಜಿಲ್ಲೆಯಲ್ಲಿನ ವಿನಯ್ ಜನರ ಮೂಗಿನ ಮೇಲೆ ಬೆರಳಿಟ್ಟು ಕೊಳ್ಳುವಂತೆ ಮೋಡಿ ಮಾಡಿರುವುದು ಜನಸಾಮಾನ್ಯರಿಂದ ವ್ಯಕ್ತವಾಗಿದೆ.
ಕೈ, ಕಮಲ ನಾಯಕರಿಗೆ ಕಾರ್ಯಕರ್ತರಿಂದ ಬೈಗುಳ!
ಇನ್ನು ಎರಡೂ ಪಕ್ಷಗಳ ನಿಷ್ಟೆ ತೋರುತ್ತಿರುವ ಕಾರ್ಯಕರ್ತರಿಗೆ ಗೌರವದಿಂದ ಕಾಣುವುದು ನಾಯಕರ ಜವಾಬ್ದಾರಿ, ಅದನ್ನು ಬಿಟ್ಟು ಬೇಕಿದ್ದಾಗ ಬಳಸಿಕೊಂಡು ಬೇಡವಾದಾಗ ಬಿಸಾಡುವ ರೀತು ಕಾಂಗ್ರೆಸ್ ,ಬಿಜೆಪಿಯವರು ಮಾಡುತ್ತಿದ್ದಾರೆ ಎಂದು ಗುಟ್ಟನ್ನು ರಟ್ಟು ಮಾಡಿ ಒಳ್ಳಬೇಗುಡಿಯನ್ನು ಹೊರಹಾಕಿದರು. ಕಾರ್ಯಕರ್ತರಿಗೆ ಬಿಜೆಪಿ, ಕಾಂಗ್ರೆಸ್ ನಲ್ಲಿ ಯಾವುದೇ ರೀತಿಯಲ್ಲೂ ಮರ್ಯಾದೆ ಕೊಡುವುದಿಲ್ಲ, ನಮ್ಮಿಂದಲೇ ಉಪಯೋಗ ಪಡೆದುಕೊಂಡು ನಡ ನೀರಿನಲ್ಲಿ ಬಿಟ್ಟು ಹೋಗುತ್ತಾರೆ ಎಂದು ಎರಡು ಪಕ್ಷದ ಕಾರ್ಯಕರ್ತರು ಬೇಸರ ವ್ಯಕ್ತಪಡಿಸಿದರು.
ಹಣ, ತೋಳ್ಬಲ ಪ್ರಯೋಗಿಸಿದರೆ ಏನೆಲ್ಲ ಆಗುತ್ತವೆ ಎಂಬುದಕ್ಕೆ ದಾವಣಗೆರೆಯಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆ ಮತದಾನ ಸಾಕ್ಷಿಯಾಗುತ್ತಿದೆ. ಎರಡು ಪಕ್ಷದವರಿಗೆ ನೆಕ್ ಟೊ ನೆಕ್ ಫೈಟ್ ಇದ್ದು, ಇವೆಲ್ಲದರ ಮಧ್ಯದಲ್ಲಿ ಪಕ್ಷೇತರ ಅಭ್ಯರ್ಥಿ ವಿನಯ್ ದಾಪುಗಾಲು ಇಟ್ಟಿರುವುದು ಒಂದು ರೀತಿಯಲ್ಲಿ ಕೈ ಕಮಲಕ್ಕೆ ನುಂಗಲಾರದ ತುತ್ತಾಗಿದೆ.
ಅದೇನೇ ಇರಲಿ ಇನ್ನು ರಾಜ್ಯದಲ್ಲಿ 2ನೇ ಹಂತದ ಮತದಾನಕ್ಕೆ ಕೇವಲ 13 ಗಂಟೆಗಳು ಮಾತ್ರ ಭಾಕಿ ಇದ್ದು, ಇದರಲ್ಲಿ ಏನೆಲ್ಲ ಬೆಳವಣಿಗೆ ನಡೆಯುತ್ತವೆ ಎಂಬುದು ಕುತೂಹಲ ಹುಟ್ಟಿಸಿದೆ. ಮೂರು ಜನ ಸ್ಪರ್ಧೆ ಮಾಡಿರುವ ನಾಯಕರಿಗೆ Beetimes Digital ಮಾಧ್ಯಮ ಸಂಸ್ಥೆಯಿಂದ ಧನ್ಯವಾದಗಳು, ಎಲ್ಲರಿಗೂ ಶುಭವಾಗಲಿ.